ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಮತ್ತು ಪ್ರಶಾಂತ್ ನೀಲ್ ಅವರ ನಿರ್ದೇಶನದ ಕೆಜಿಎಫ್ 2 ಚಿತ್ರವು ಈಗಾಗಲೇ ವಿಶ್ವಾದ್ಯಂತ ಎಲ್ಲಾ ಕಡೆ ಭರ್ಜರಿಯಾಗಿ ಬಿಡುಗಡೆಯಾಗಿದೆ. ಇದು ಏಪ್ರಿಲ್ 14 2022 ರಂದು ಬಿಡುಗಡೆ ಆಯ್ತು. ಇನ್ನು ಈ ಚಿತ್ರವನ್ನು ವಿಜಯ್ ಕಿರಂಗದೂರು ಅವರು ನಿರ್ಮಾಣ ಮಾಡಿದ್ದಾರೆ.
ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಇನ್ನೂ ಸಾಕಷ್ಟು ಕಲಾವಿದರು ಅದ್ಬುತವಾಗಿ ಅಭಿನಯ ಮಾಡಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ನಡೆದು ಅವರ ತಾಯಿಯ ಆಸೆಯನ್ನು ನೆರವೇರಿಸುತ್ತಾರೆ.
ಈ ಕಥೆಯನ್ನು ನೀವು ಕೆಜಿಎಫ್ 2 ಚಿತ್ರದಲ್ಲಿ ನೋಡಬಹುದು. ಇನ್ನು ಕೆಜಿಎಫ್ 2 ಚಿತ್ರವನ್ನು ನೋಡುವುದಕ್ಕೆ ಸಾಕಷ್ಟು ಅಭಿಮಾನಿಗಳು ಬಿಡುಗಡೆಯಾಗುವ ಮುನ್ನವೇ ತುಂಬ ಕಾತುರದಿಂದ ಕಾಯುತ್ತಿದ್ದರು. ಇನ್ನು ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ಆಗಿದ್ದು ಕನ್ನಡ ತೆಲುಗು ಹಿಂದಿ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ನೋಡಿದ ಅಭಿಮಾನಿಗಳು ಕಲಾವಿದರು ಎಲ್ಲರೂ ಕೂಡ ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದರಂತೆಯೇ ಐಪಿಎಲ್ ನಲ್ಲಿ ಒಂದು ಟೀಮ್ ಆಗಿರುವ ಗುಜರಾತ್ ಟೈಟನ್ಸ್ ಪ್ಲೇಯರ್ಸ್ ಕೂಡ ಕೆಜಿಎಫ್ 2 ಚಿತ್ರವನ್ನು ವೀಕ್ಷಿಸಿದ್ದಾರೆ. ಗುಜರಾತ್ ಟೈಟನ್ಸ್ ನಲ್ಲಿರುವ ಪ್ರತಿಯೊಬ್ಬರೂ ಕೂಡ ಕೆಜಿಎಫ್ 2 ಚಿತ್ರವನ್ನು ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಅವರು ಕೆಜಿಎಫ್ 2 ಚಿತ್ರವನ್ನು ನೋಡಿ ದಂಗಾಗಿದ್ದಾರೆ.
ಏನೇ ಆಗಲಿ ನಮ್ಮ ಕನ್ನಡದ ಹೆಮ್ಮೆ ನಮ್ಮ ಕನ್ನಡದ ಕಿರೀಟ ಕೆಜಿಎಫ್ ಚಿತ್ರ ಎಂದು ಹೇಳಬಹುದು. ಈ ಚಿತ್ರದ ಮೂಲಕ ವಿಶ್ವಾದ್ಯಂತ ಮೂಲೆಮೂಲೆಗಳಲ್ಲಿರುವ ಜನರು ನಮ್ಮ ಕನ್ನಡ ಇಂಡಸ್ಟ್ರಿ ಕಡೆಗೆ ತಿರುಗಿ ನೋಡುವಂತೆ ಮಾಡಿತು. ಪ್ರಶಾಂತ್ ನೀಲ್ ಅವರ ನಿರ್ದೇಶನಕ್ಕೆ ಒಂದು ಹ್ಯಾಟ್ಸಾಫ್ ಮಾಡೋಣ ಮತ್ತು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯವು ಮಸ್ತ್ ಇದೆ ಎಂದು ಹೇಳಬಹುದು…..