ಕೆಜಿಎಫ್ ಚಾಪ್ಟರ್ 2 ಚಿತ್ರದ ಮೇಕಿಂಗ್ ನಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಶೂಟಿಂಗ್ ಟೈಮಲ್ಲಿ ಸಮಯ ಕಳೆದ ವಿಡಿಯೋ ಇಲ್ಲಿದೆ ನೋಡಿ !!
ನಟಿ ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಚಿತ್ರದ ಮುಖಾಂತರ ಇಡೀ ವಿಶ್ವದಾದ್ಯಂತ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡರು ಇವರದು ಇನ್ನೂ ಮೊದಲನೆಯ ಸಿನಿಮಾ ಈ ಮೊದಲನೆಯ ಸಿನಿಮಾದ ಮೂಲಕ ಇವರು ಸಾಕಷ್ಟು ಜನಪ್ರಿಯತೆಯನ್ನು ಸಾಧಿಸಿಕೊಂಡರು.
ಇದಕ್ಕೂ ಮುನ್ನ ಶ್ರೀನಿಧಿ ಶೆಟ್ಟಿ ಅವರು 2016 ರಲ್ಲಿ ಸುಪ್ರ ನ್ಯಾಷನಲ್ ಅವಾರ್ಡ್ ಅನ್ನು ಸಾಧಿಸಿದ್ದಾರೆ. ಇದರ ಜೊತೆಗೆ ಮಿಸ್ ಕರ್ನಾಟಕ 2015, ಮಿಸ್ ದಿವಾ ಸುಪ್ರನ್ಯಾಷನಲ್ 2016 ಎನ್ನುವ ಟೈಟಲ್ ಗಳನ್ನು ಸಹ ಸಾಧಿಸಿದ್ದಾರೆ. ಶ್ರೀನಿಧಿ ಶೆಟ್ಟಿ ಅವರು ತುಂಬಾ ಲಕ್ಕಿ ನಟಿ ಎಂದೇ ಹೇಳಬಹುದು. ಏಕೆಂದರೆ ನಮ್ಮ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಚಿತ್ರಕ್ಕೆ ನಟಿಯಾಗಿರುವುದಕ್ಕೆ ಇವರು ಲಕ್ಕಿ ಎಂದು ಹೇಳಬಹುದು.
ಅದರಲ್ಲೂ ಮೊದಲನೆಯ ಸಿನಿಮಾವೇ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದು ಕೂಡ ಇವರಿಗೆ ಒಂದು ವಿಶೇಷ ಆಗಿದೆ. ಇನ್ನು ಶ್ರೀನಿಧಿ ಶೆಟ್ಟಿ ಅವರು ಅಕ್ಟೋಬರ್ 21 1992 ರಂದು ಮಂಗಳೂರಿನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ರಮೇಶ್ ಶೆಟ್ಟಿ ಮತ್ತು ತಾಯಿಯ ಹೆಸರು ಕುಶಲ ಶೆಟ್ಟಿ. ಇವರಿಗೆ ಅಮೃತಾ ಶೆಟ್ಟಿ ಮತ್ತು ಪ್ರಿಯಾಂಕ ಶೆಟ್ಟಿ ಎನ್ನುವ ಇಬ್ಬರು ಸಹೋದರಿಯರು ಕೂಡ ಇದ್ದಾರೆ.
ಶ್ರೀನಿಧಿ ಶೆಟ್ಟಿ ಅವರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಹೌದು ಇವರು ಬೆಂಗಳೂರಿನಲ್ಲಿರುವ ಜೈನ್ ಯೂನಿವರ್ಸಿಟಿಯಲ್ಲಿ ತಮ್ಮ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಇವರು ಕೆಜಿಎಫ್ ಚಾಪ್ಟರ್ 1 ಚಿತ್ರದ ಮೂಲಕ ನಮ್ಮ ಕನ್ನಡ ಸಿನಿ ಇಂಡಸ್ಟ್ರಿಗೆ ಮೊದಲನೆಯದಾಗಿ ಕಾಲಿಟ್ಟರು. ಇದು ಡಿಸೆಂಬರ್ 21 2018 ರಲ್ಲಿ ಬಿಡುಗಡೆಯಾಯಿತು.
ಇದಾದ ಮೇಲೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೂಡ ಏಪ್ರಿಲ್ 14 2022 ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಅವರು ರೀನಾ ದೇಸಾಯಿ ಎನ್ನುವ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇದಾದ ಮೇಲೆ ಇವರು ತಮಿಳಿನಲ್ಲಿ ಕೋಬ್ರ ಎನ್ನುವ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ. ಇದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇದೆ. ಇನ್ನೂ ಇಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ನಲ್ಲಿ ಶ್ರೀನಿಧಿ ಶೆಟ್ಟಿ ಅವರ ಕೆಲ ವಿಡಿಯೋಗಳನ್ನು ನೋಡಬಹುದು…..