ಕುರುಬನ ರಾಣಿ ಚಿತ್ರದ, ನಗ್ಮಾ ಜೀವನದಲ್ಲಿ ನಾಲ್ಕು ವಿವಾಹಿತರ ಎಂಟ್ರಿ ಕೊಟ್ಟು, ಅವರ ಬಳಲ್ಲಿ ಏನಾಯಿತು ಗೊತ್ತಾ, ಫೇಮಸ್ ಕ್ರಿಕೆಟರ್ ಕೂಡ ಒಬ್ಬರು ಇದ್ದಾರೆ !!
ಅದೆಷ್ಟೋ ಸ್ಟಾರ್ ನಟ – ನಟಿಯರ ಬಾಳಲ್ಲಿ ನಿರೀಕ್ಷೆಗೂ ಮೀರಿದ ಘಟನೆಗಳು ನಡೆದು, ಕೊನೆಗೆ ಸಿನಿಮಾ ರಂಗದಿಂದಲೇ ದೂರ ಉಳಿದಿರುವುದನ್ನು ನಾವು ಕಂಡಿದ್ದೇವೆ. ಅದೇ ರೀತಿ 90 ರ ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗದಾದ್ಯಂತ ತಮ್ಮ ಸೌಂದರ್ಯದಿಂದ ಸಿನಿಪ್ರಿಯರ ಕಣ್ಮನ ಸೆಳೆದು ಮಿಂಚಿದ್ದ ನಟಿ ಅಂದರೆ ಅದು ನಗ್ಮಾ.
ಇದೀಗ ತನ್ನ ವಯಸ್ಸು 46 ದಾಟಿದರೂ ಮದುವೆಯಾಗದೆ ಒಂಟಿಯಾಗಿಯೇ ಜೀವನ ಕಲೆಯುತ್ತಿರುವ ನಗ್ಮಾ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರೆ ಸಿನಿಮಾ ಜಗತ್ತಿನಲ್ಲಿ ಬಹು ಬೇಡಿಕೆ ಇದ್ದ ಸಮಯದಲ್ಲಿ ನಗ್ಮಾ ಜೀವನದಲ್ಲಿ ಅದೇನೆನು ಆಗಿದೆ ಅನ್ನೋದು ನಿಮಗೆ ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ. ನಗ್ಮಾ ಅವರಿಗೆ ಒಂದಲ್ಲ ಎರಡಲ್ಲ ನಾಲ್ಕು ಮಂದಿ ವಿವಾಹಿತರೊಂದಿಗೆ ಅಫೇರ್ ಇತ್ತು.
ಸಲ್ಮಾನ್ ಖಾನ್ ಜೊತೆ ಮೊದಲ ಬಾರಿ ಬಣ್ಣ ಹಚ್ಚಿ ಬಾಲಿವುಡ್ ಕ್ಷೇತ್ರಕ್ಕೆ ಕಾಲಿಟ್ಟಿದ್ದ ನಗ್ಮಾ, ದಕ್ಷಿಣದ ಟಾಪ್ ನಟಿಯಾಗಿಯೂ ಮಿಂಚಿದ್ದರು. ತೆಲುಗಿನ ಸ್ಟಾರ ನಟರಾದ ಶರತ್ ಕುಮಾರ್ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಇಬ್ಬರೂ ಹಿಟ್ ಜೋಡಿಗಳಾಗಿದ್ದರು. ಶರತ್ ಅವರಿಗೆ ಆಗಲೇ ಮದುವೆ ಆಗಿದ್ರೂ ಇಬ್ಬರ ನಡುವೆ ಪ್ರೇಮಾಂಕುರವಾಗಿ, ಶರತ್ ಅವರಿಗೆ ಛಾಯಾ ಡಿವೋರ್ಸ್ ಕೊಟ್ಟು ಹೋಗಿದ್ದರು.
ಇದರಿಂದಾಗಿ ನಗ್ಮಾರನ್ನು ಸಂಸಾರ ಒಡೆದ ನಟಿ ಎಂದು ಮಾಧ್ಯಮಗಳು ಸುದ್ದಿ ಮಾಡಿದವು. ಹಾಗಾಗಿ ನಗ್ಮಾ ಶರತ್ ಕುಮಾರ್ ಅವರ ಜೊತೆಗೆ ಸಂಬಂಧ ಮುರಿದರು. ಆ ನಂತರ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿಗೂ ನಗ್ಮಾರಿಗೂ ಸಂಬಂಧ ಇರುವ ಸುದ್ದಿಯಾಯ್ತು. ಗಂಗೂಲಿಯವರು ನಗ್ಮಾರ ಪ್ರೀತಿಯ ಸೆಲೆಗೆ ಬಿದ್ದ ಕಾರಣ ಕ್ರಿಕೆಟ್ ನಲ್ಲಿ ಅವರ ಫರ್ಮಾಫೆನ್ಸ್ ಕಡಿಮೆ ಆಗಿತ್ತು.
ಗಂಗೂಲಿ ಕೂಡ ಮದುವೆ ಆಗಿದ್ದರು, ನಗ್ಮಾರಿಂದ ಗಂಗೂಲಿ ಕ್ರಿಕೆಟ್ ಪ್ರದರ್ಶನ ಕಡಿಮೆ ಆಯ್ತು ಅನ್ನುವ ಆರೋಪ ಕೇಳಿ ಬಂದಾಗ, ನಗ್ಮಾ ಅವರಿಂದಲೂ ದೂರ ಆದರು. ನಂತರ ನಗ್ಮಾ ಭೋಜ್ ಪುರಿ ಸಿನಿಮಾ ಲೋಕಕ್ಕೆ ಕಾಲಿಟ್ಟು, ಅಲ್ಲಿ ಸ್ಟಾರ್ ನಟರಾಗಿದ್ದ ರವಿ ಕಿಶನ್ ಜೊತೆ ಸಂಬಂಧ ಬೆಳೆಸಿದರು. ರವಿ ಕಿಶನ್’ರಿಗೂ ಮದುವೆ ಆಗಿತ್ತು, ಆದರೆ ಬಿಗ್ ಬಾಸ್ ಹೋಗುವ ಸಮಯದಲ್ಲಿ ರವಿ ಕಿಶನ್ ಅವರೇ
ನಗ್ಮಾರಿಂದ ಬ್ರೇಕಪ್ ಮಾಡಿಕೊಂಡರು, ಈ ಸಿಟ್ಟಿನಿಂದ ಭೋಜ್ ಪುರಿಯ ಇನ್ನೊಬ್ಬ ಸ್ಟಾರ್ ನಟ ಮನೋಜ್ ತಿವಾರಿ ಜೊತೆ ಸಂಬಂಧ ಬೆಳೆಸಿದ್ರು. ಆದರೆ ಮನೊಜ್ ತಿವಾರಿಗೂ ಮದುವೆ ಆಗಿದ್ದ ಕಾರಣ ಅವರ ಸಂಬಂಧ ಕೂಡ ಜಾಸ್ತಿ ದಿನ ಉಳಿಯಲಿಲ್ಲ. ಹೀಗೆ ಎಲ್ಲಾ ವಿವಾಹಿತರ ಜೊತೆ ಸಂಬಂಧ ಬೆಳೆಸಿ ಎಲ್ಲರಿಂದಲೂ ದೂರ ಆಗಿ, ಕೊನೆಗೆ ರಾಜಕೀಯ ಕ್ಷೇತ್ರಕ್ಕೆ ಧುಮುಕಿ ಅಲ್ಲಿಯೇ ಪೂರ್ಣ ಮಟ್ಟದಲ್ಲಿ ತೊಡಗಿಸಿಕೊಂಡ ನಗ್ಮಾ, ಇನ್ನೂ ಒಬ್ಬಂಟಿಯಾಗಿಯೇ ಉಳಿದಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.