ಕುಟುಂಬ ಅಂದ್ರೆ ಹೀಗಿರಬೇಕು ನೋಡಿ..!! ನಟ ಶರಣ್ ಅವರ ಮನೆಯಲ್ಲಿ ತುಂಬು ಕುಟುಂಬ ಸೇರಿಕೊಂಡು ಮಾಡಿದ ಡ್ಯಾನ್ಸ್ ಎಷ್ಟು ಮುದ್ದಾಗಿದೆ ನೋಡಿ ??
ಯಾರೇ ಆಗಲಿ ಕುಟುಂಬವು ಚೆನ್ನಾಗಿರಬೇಕು ಎಂದರೆ ಕುಟುಂಬದಲ್ಲಿರುವ ಸದಸ್ಯರು ತುಂಬ ಖುಷಿಯಾಗಿರಬೇಕು. ಕುಟುಂಬದಲ್ಲಿರುವ ಸದಸ್ಯರು ಅನ್ಯೋನ್ಯತೆಯಿಂದ ಇಲ್ಲವಾದರೆ ಕುಟುಂಬವು ಕೂಡ ಚೆನ್ನಾಗಿರುವುದಿಲ್ಲ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಖುಷಿಯಿಂದ ಕೆಲಸಗಳನ್ನು ಮಾಡುತ್ತಾ ಇದ್ದರೆ ಆ ಕುಟುಂಬ ತುಂಬ ಸುಖಮಯವಾಗಿ ಇರುತ್ತದೆ.
ಇದರಂತೆಯೇ ನಮ್ಮ ಕನ್ನಡದ ಜನಪ್ರಿಯ ನಟ ಶರಣ್ ಮತ್ತು ಜನಪ್ರಿಯ ನಟಿ ಶ್ರುತಿ ಅವರ ಕುಟುಂಬ ನೋಡಿದರೆ ನಿಜಕ್ಕೂ ತುಂಬಾ ಸಂತೋಷವಾಗುತ್ತದೆ. ಕುಟುಂಬ ಎಂದರೆ ಹೀಗಿರಬೇಕು ಎಂದು ಅವರು ತೋರಿಸಿದ್ದಾರೆ. ಹೌದು ಶರಣ್ ಮತ್ತು ಶ್ರುತಿ ಇಬ್ಬರೂ.
ಕೂಡ ಅಣ್ಣ ತಂಗಿ ಆಗಬೇಕು ಎನ್ನುವ ವಿಷಯ ಎಲ್ಲರಿಗೂ ಗೊತ್ತು. ಇನ್ನೂ ಇವರಿಬ್ಬರು ತಮ್ಮ ತಾಯಂದಿರಿಗೆ ಮನೆಯಲ್ಲಿ ಎಷ್ಟು ಚೆನ್ನಾಗಿ ಡ್ಯಾನ್ಸ್ ಹೇಳಿ ಕೊಟ್ಟಿದ್ದಾರೆ ಮತ್ತು ಎಲ್ಲರೂ ಸೇರಿ ಒಳ್ಳೆಯ ಸ್ಟೆಪ್ ಕೂಡ ಹಾಕಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಈ ವಿಡಿಯೋವನ್ನು ನೋಡಿ ಬಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಶರಣ್ ಅವರು ಫೆಬ್ರವರಿ 6 1972 ರಂದು ಹಾಸನದಲ್ಲಿ.
ಜನಿಸಿದ್ದಾರೆ. ಇವರ ತಂದೆಯ ಹೆಸರು ಜೆ.ವಿ ಕೃಷ್ಣ ಮತ್ತು ತಾಯಿಯ ಹೆಸರು ರಾಧಾಕೃಷ್ಣ. ಇವರು ಮೊದಲು ಹಾಸ್ಯದ ಪಾತ್ರಗಳಲ್ಲಿ ನಟನೆ ಮಾಡುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ.
ತದನಂತರ ತಮ್ಮ 100 ನೆಯ ಚಿತ್ರ ಆಗಿರುವ ರಾಂಬೋ ಚಿತ್ರದ ಮೂಲಕ ನಾಯಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇವರು ಕೇವಲ ನಟ ಮಾತ್ರರಲ್ಲ ಕೆಲ ಕನ್ನಡದ ಹಾಡುಗಳನ್ನು ಕೂಡ ಹಾಡಿದ್ದಾರೆ. ಇನ್ನು ಶ್ರುತಿ ಅವರು ಸೆಪ್ಟೆಂಬರ್ 18 1975 ರಂದು ಹಾಸನದಲ್ಲಿ ಜನಿಸಿದ್ದಾರೆ.
ಇವರು ಮಲಯಾಳಂನ ಸ್ವಂತಂ ಎನ್ನೂ ಕಾರುತಿ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿದರು. ಇನ್ನು ಸ್ಯಾಂಡಲ್ ವುಡ್ ನಲ್ಲಿ ನಂಬಿದ್ರೆ ನಂಬಿ ಬಿಟ್ರೆ ಬಿಡಿ ಎನ್ನುವ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಇನ್ನು ಶ್ರುತಿ ಅವರಿಗೆ ಗೌರಿ ಮಹಿಂದರ್ ಎನ್ನುವ ಮಗಳು ಕೂಡ ಇದ್ದಾರೆ…..