ಕಿರುತೆರೆಯಲ್ಲಿ ಸಾಕಷ್ಟು ನಟ ನಟಿಯರು ಮಿಂಚಿ ತುಂಬಾನೇ ಜನಪ್ರಿಯರಾಗಿರುತ್ತಾರೆ. ಅದರಲ್ಲಿ ನಟಿ ಪ್ರಿಯಾಂಕ ಚಿಂಚೊಳ್ಳಿ ಅವರು ಕೂಡ ಒಬ್ಬರು. ಖ್ಯಾತ ನಟಿ ಪ್ರಿಯಾಂಕ ಚಿಂಚೋಳಿ ಅವರು ಏಪ್ರಿಲ್ 29 1997 ರಂದು ಗುಲ್ಬರ್ಗಾದಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ರಾಜೀವ್ ಚಿಂಚೋಳಿ ಮತ್ತು ತಾಯಿಯ ಹೆಸರು ಮಮತಾ ಚಿಂಚೋಳಿ ಎಂದು.
ಇವರು ಗುಲ್ಬರ್ಗಾದಲ್ಲಿ ಇರುವ ಸೈಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ ತದನಂತರ ಬೆಂಗಳೂರಿನಲ್ಲಿ ಡಿಗ್ರಿ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಪ್ರಿಯಾಂಕಾ ಚಿಂಚೋಳಿ ಅವರು ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಹರಹರ ಮಹಾದೇವ ಎನ್ನುವ ಧಾರಾವಾಹಿಯಲ್ಲಿ ವಿನಯ್ ಗೌಡ ಅವರ ಜೊತೆಗೆ ಪಾರ್ವತಿ ಪಾತ್ರದಲ್ಲಿ ನಟಿಸಿದ್ದಾರೆ.
ಇದರಲ್ಲಿ ವಿನಯ್ ಗೌಡ ಅವರು ಶಿವನ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇದಾದ ಮೇಲೆ ಜೈ ಹನುಮಾನ, ಮನಸಾರೆ, ಮನಸ್ಸೆಲ್ಲಾ ನೀನೇ ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನೂ ಬೆಳ್ಳಿ ತೆರೆಗೆ ಬಂದರೆ ಶ್ರೀನಿವಾಸ ಸಿ ಮಂಡ್ಯ ಅವರು ನಿರ್ದೇಶನ ಮಾಡಿದ ಬಿಲ್ ಗೇಟ್ಸ್ ಎನ್ನುವ ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಈ ಸಿನಿಮಾ 2020 ರಂದು ಬಿಡುಗಡೆಯಾಯಿತು.
ಇನ್ನು ಪ್ರಿಯಾಂಕಾ ಚಿಂಚೋಳಿ ಅವರು ಕಳೆದ ವರ್ಷ ಡಿಸೆಂಬರ್ 10 2021 ರಂದು ಬೆಂಗಳೂರಿನ ಹೊರವಲಯದಲ್ಲಿರುವ ಒಂದು ರೆಸಾರ್ಟ್ ನಲ್ಲಿಂ ರಾಕೇಶ್ ಎನ್ನುವವರನ್ನು ವಿವಾಹ ಮಾಡಿಕೊಂಡರು. ಇವರ ಮದುವೆ ತುಂಬಾ ಅದ್ದೂರಿಯಾಗಿ ನಡೆಯಿತು ಎಂದು ಹೇಳಬಹುದು.
ಇನ್ನು ರಾಕೇಶ್ ಅವರು ಅಮೇರಿಕಾದಲ್ಲಿ ಇರುವ ಒಂದು ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಉನ್ನತ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ನೀವು ಪ್ರಿಯಾಂಕಾ ಚಿಂಚೋಳಿ ಮತ್ತು ರಾಕೇಶ್ ಅವರ ಮದುವೆಯ ಕೆಲ ಸುಂದರ ದೃಶ್ಯಗಳನ್ನು ನೋಡಬಹುದು…..