ಕಿರುತೆರೆಯಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಕನ್ನಡದ ಟಾಪ್ ನಟಿಯರು ಯಾರ್ ಯಾರು ಗೊತ್ತೇ ?? ಇವರಲ್ಲಿ ನಿಮ್ಮ ಫೇವರಿಟ್ ಯಾರು ??
ರಾಧಿಕಾ ಪಂಡಿತ್ ಅವರು ಮಾರ್ಚ್ 7 1984 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ನಂದಗೋಕುಲ ಮತ್ತು ಸುಮಂಗಲಿ ಎನ್ನುವ ಧಾರಾವಾಹಿಗಳಲ್ಲಿ ನಟಿಸಿ ತದನಂತರ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.
ರಚಿತಾ ರಾಮ್ ಅವರು ಅಕ್ಟೋಬರ್ 3 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಬೆಂಕಿಯಲ್ಲಿ ಅರಳಿದ ಹೂವು ಮತ್ತು ಅರಸಿ ಧಾರಾವಾಹಿಗಳಲ್ಲಿ ನಟಿಸಿ ತದನಂತರ ಬೆಳ್ಳಿತೆರೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಬುಲ್ ಬುಲ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ನಿತ್ಯ ರಾಮ್ ಅವರು ಜನವರಿ 31 1990 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಬೆಂಕಿಯಲ್ಲಿ ಅರಳಿದ ಹೂವು, ಕರ್ಪೂರದ ಗೊಂಬೆ, ಎರಡು ಕನಸು, ಗಿರಿಜಾ ಕಲ್ಯಾಣ, ನಂದಿನಿ, ಕಿಲಾಡಿ ಕಿಟ್ಟು, ಸವಾಲಿಗೆ ಸೈ ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದು ತದನಂತರ ಮುದ್ದು ಮನಸೇ ಮತ್ತು ಒಂದು ಮಲಯಾಳಂ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಮಯೂರಿ ಅವರು ಮಾರ್ಚ್ 5 1995 ರಂದು ಜನಿಸಿದ್ದಾರೆ. ಇವರು ಅಶ್ವಿನಿ ನಕ್ಷತ್ರ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟು ನಂತರ ಕೃಷ್ಣಲೀಲಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.
ಕವಿತಾ ಗೌಡ ಅವರು ಜುಲೈ 26 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಲಕ್ಷ್ಮಿ ಬಾರಮ್ಮ ಮತ್ತು ವಿದ್ಯಾ ವಿನಾಯಕ ಧಾರಾವಾಹಿಗಳಲ್ಲಿ ನಟಿಸಿ ತದನಂತರ ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.
ರಶ್ಮಿ ಪ್ರಭಾಕರ್ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟರು. ತದನಂತರ ಮಹಾಭಾರತ, ಜೀವನ ಚೈತ್ರ, ಇವಳು ಸುಜಾತ, ಮನಸ್ಸೆಲ್ಲಾ ನೀನೇ ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನೂ ಬೆಳ್ಳಿತೆರೆಯಲ್ಲಿ ಬಿಬಿ5 ಮತ್ತು ಮಹಾಕಾವ್ಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ರಂಜನಿ ರಾಘವನ್ ಅವರು ಮಾರ್ಚ್ 29 1994 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಪುಟ್ಟಗೌರಿ ಮದುವೆ, ಇಷ್ಟದೇವತೆ ಎನ್ನುವ ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದು ರಾಜಹಂಸ, ಟಕ್ಕರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ವೈಷ್ಣವ ಗೌಡ ಅವರು ಫೆಬ್ರವರಿ 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಅಗ್ನಿಸಾಕ್ಷಿ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟು ಗಿರಿಗಿಟ್ಲೆ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ದೀಪಿಕಾ ದಾಸ್ ಅವರು ಫೆಬ್ರವರಿ 23 1993 ರಂದು ಜನಿಸಿದ್ದಾರೆ. ಇವರು ನಂದಿನಿ ಇನ್ನೂ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದು ಕೆಲ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಶ್ವೇತಾ ಪ್ರಸಾದ್ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹಾಗೆಯೇ ಕನ್ನಡದಲ್ಲಿ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಭೂಮಿಕಾ ಶೆಟ್ಟಿ ಅವರು ಫೆಬ್ರವರಿ 19 1998 ರಂದು ಕುಂದಾಪುರದಲ್ಲಿ ಜನಿಸಿದ್ದಾರೆ. ಇವರು ಕಿನ್ನರಿ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟು ನಂತರ ಬೆಳ್ಳಿ ತೆರೆಗೆ ಬಂದು ಇಕ್ಕಟ್ ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ……