ಕನ್ನಡದ ನಟಿ ಕಾವ್ಯಾ ಶಾ ಅವರ ಮದುವೆ ಜರುಗಿತು. ಇನ್ನೂ ಇವರ ಮದುವೆಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರು ಆಗಮನ ಮಾಡಿ ಶುಭಾಶಯಗಳನ್ನು ತಿಳಿಸಿದರು. ಇವರ ಜೊತೆಗೆ ಸಾಕಷ್ಟು ಕಲಾವಿದರು ಗಣ್ಯ ವ್ಯಕ್ತಿಗಳು ಬಂಧು ಮಿತ್ರರು ಸ್ನೇಹಿತರು ಆಪ್ತರು ಬಂದಿದ್ದರು. ಕಾವ್ಯ ಶಾ ಅವರ ಮದುವೆಯ ಕೆಲ ತುಣುಕುಗಳನ್ನು ಇಲ್ಲಿ ನೀವು ನೋಡಬಹುದು.
ಇನ್ನೂ ಕಾವ್ಯ ಶಾ ಅವರನ್ನು ವರಿಸಿದ್ದ ಹುಡುಗನ ಹೆಸರು ವರುಣ್ ಗೌಡ ಎಂದು. ಇವರ ಮದುವೆ ಏಪ್ರಿಲ್ 18 ರಂದು ಜರುಗಬೇಕಾಗಿತ್ತು ಆದರೆ ವರುಣ್ ಅವರ ತಂದೆ ನಿಧನರಾಗಿದ್ದರಿಂದ ಮದುವೆಯನ್ನು ಮುಂದೂಡಲಾಯಿತು. ಹೌದು ವರುಣ್ ಅವರ ತಂದೆ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದರು. ಹಾಗಾಗಿ ಇವರ ಮದುವೆ ಮುಂದೂಡಿಕೆ ಆಯ್ತು. ಇನ್ನೂ ಕಾವ್ಯಾ ಶಾ ಅವರು ಕನ್ನಡದ ನಟ ನಾಗೇಂದ್ರ ಶಾ ಅವರ ಮಗಳು.
ಇನ್ನೂ ಇವರಿಬ್ಬರಿದು 11 ವರ್ಷದ ರಿಲೇಷನ್ ಶಿಪ್ ಆಗಿತ್ತು. ಇದಾದ ಮೇಲೆ ಇವರು 11 ವರ್ಷಗಳು ಆದನಂತರ ಮದುವೆಯನ್ನು ಮಾಡಿಕೊಂಡಿದ್ದಾರೆ. ಇನ್ನು ಕಾವ್ಯ ಶಾ ಅವರ ತಾಯಿ ತೀರಿಕೊಂಡಾಗ ವರುಣ್ ಅವರು ತುಂಬಾ ಬೆಂಬಲವನ್ನು ನೀಡಿದ್ದರು ಎಂದು ಕಾವ್ಯ ಅವರು ಹೇಳಿಕೊಂಡಿದ್ದಾರೆ.
ಇನ್ನೂ ಕಾವ್ಯಾ ಶಾ ಅವರು ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಾಗೆಯೇ ಇವರು ಸಾಕಷ್ಟು ಕಾರ್ಯಕ್ರಮಗಳನ್ನು ಸಹ ನಿರೂಪಣೆ ಮಾಡಿದ್ದಾರೆ. ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಮಿಸ್ಟರ್ & ಮಿಸಸ್ ರಾಮಾಚಾರಿ, ಹಾಸ್ಯ ಸಂತಾನಂ, ಮುಗಿಲ್ ಪೇಟೆ ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಾಗೆಯೇ ಬಂಗಾರ, ಚಿ ಸೌ ಸಾವಿತ್ರಿ ಎನ್ನುವ ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇಷ್ಟೇ ಅಲ್ಲದೆ ಕಾವ್ಯ ಶಾ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಲ್ತ್ ಕೋಚ್ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಇನ್ನು ವರುಣ್ ಅವರ ವಿಷಯಕ್ಕೆ ಬಂದರೆ ಇವರು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಖಾಸಗಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದು ಸಿನಿಮಾಗಳ ನಿರ್ಮಾಣವನ್ನು ಕೂಡ ಮಾಡುತ್ತಾರೆ…..