ಕಾಂತಾರ ಚಿತ್ರದಿಂದ ಅಲ್ಲು ಅರ್ಜುನ್ ತಂದೆ ಗಳಿಸಿದ ಲಾಭ ಎಷ್ಟು ಕೋಟಿ ಗೊತ್ತಾ ?? ಇದು ಕಣ್ರೀ ನಮ್ಮ ಕನ್ನಡದ ತಾಕತ್ತು ಅಂದ್ರೆ !!
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚಿತ್ರಗಳು ಪಾನ್ ಇಂಡಿಯಾ ಸಿನಿಮಾಗಳು ಆಗುತ್ತಿವೆ. ಇನ್ನೂ ಪರಭಾಷೆಗಳು ಮತ್ತು ವಿಶ್ವಾದ್ಯಂತ ಜನರು ನಮ್ಮ ಕನ್ನಡ ಇಂಡಸ್ಟ್ರಿ ಕಡೆಗೆ ತಿರುಗಿ ನೋಡುವಂತೆ ಕೆಲ ಸಿನಿಮಾಗಳು ಮಾಡುತ್ತಿವೆ. ಇದಕ್ಕೆ ಸಾಕಷ್ಟು ಸಿನಿಮಾಗಳ ಉದಾಹರಣೆಗಳು ಇವೆ ಎಂದು ಹೇಳಬಹುದು.
ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ಅಭಿನಯದ ಕಾಂತಾರ ಚಿತ್ರವು ಕೂಡ ಪ್ರಪಂಚಾದ್ಯಂತ ಮಟ್ಟಕ್ಕೆ ಹೋಗಿದೆ ಎಂದರೆ ಅದು ನಮ್ಮ ಕನ್ನಡಿಗರ ಹೆಮ್ಮೆ ಎಂದು ಹೇಳಬಹುದು. ಇನ್ನು ಕಾಂತಾರ ಚಿತ್ರವು ಕನ್ನಡದ ಜೊತೆಗೆ ತೆಲುಗು ಹಿಂದಿ ತಮಿಳು ಮಲಯಾಳಂ ಭಾಷೆಗಳಲ್ಲೂ ಕೂಡ ಬಿಡುಗಡೆಯಾಗಿದೆ.
ಇನ್ನೂ ಕಾಂತಾರ ಚಿತ್ರವು ಸೆಪ್ಟೆಂಬರ್ 30 2022 ರಂದು ಎಲ್ಲಾ ಕಡೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಇನ್ನೂ ಇದರಲ್ಲಿ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರು ಮುಖ್ಯವಾದ ನಾಯಕ ನಾಯಕಿಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ರಿಶಬ್ ಶೆಟ್ಟಿ ಅವರ ಅಭಿನಯಕ್ಕೆ ಸಾಕಷ್ಟು ಜನರು ಮನಸೋತಿದ್ದಾರೆ. ಇದರ ಮುಖಾಂತರ ಇವರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ.
ಈ ಚಿತ್ರವು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ಮತ್ತು ಹಿಂದಿಯಲ್ಲೂ ಕೂಡ ಅಭಿಮಾನಿಗಳು ಇದಕ್ಕೆ ಪಾಸಿಟಿವ್ ವಿಮರ್ಶೆಯನ್ನು ಅನ್ನು ನೀಡಿದ್ದಾರೆ. ಅದರಲ್ಲೂ ತೆಲುಗು ಅಭಿಮಾನಿಗಳು ಕಾಂತಾರ ಚಿತ್ರವನ್ನು ನೋಡಿ ತುಂಬ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂತಾರ ಚಿತ್ರವನ್ನು ವಿಜಯ್ ಕಿರಂಗದೂರು ಅವರು ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.
ಇನ್ನು ಹೊಂಬಾಳೆ ಬ್ಯಾನರ್ ಮೂಲಕ ತೆಲುಗು ವಿತರಣೆ ಹಕ್ಕನ್ನು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ತೆಗೆದುಕೊಂಡಿದ್ದಾರೆ. ಇವರು ಈ ಸಿನಿಮಾವನ್ನು ತೆಲುಗು ವಿತರಣೆ ಹಕ್ಕಿನಲ್ಲಿ ಕೇವಲ 3 ಕೋಟಿ ರೂ. ಗಳಿಗೆ ಮಾತ್ರ ಪಡೆದುಕೊಂಡಿದ್ದರು. ಈಗ ಇವರು 3 ಕೋಟಿ ರೂ. ಗಳಿಗಿಂತ ಹೆಚ್ಚು ಲಾಭದಲ್ಲಿ ಇದ್ದಾರೆ. ಇದರ ಮುಖಾಂತರ ಅಲ್ಲು ಅರವಿಂದ್ ಅವರ ಮುಖದಲ್ಲಿ ನಗು ಕಾಣಿಸುತ್ತಿದೆ. ಹಾಗೆಯೇ ನಮ್ಮ ಉತ್ತರ ಭಾರತದಲ್ಲೂ ಕೂಡ ಕಾಂತಾರ ಚಿತ್ರಕ್ಕೆ ಒಂದು ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ…..