Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕಾಂತಾರ ಚಿತ್ರದಲ್ಲಿನ ಧಣಿ ಮಗನ ಪಾತ್ರ ಮಾಡಿರುವ ಈ ಹುಡುಗ ಯಾರು ನಿಮಗೇ ಗೊತ್ತೇ ?

0

ಕಾಂತಾರ ಚಿತ್ರ ಸದ್ಯ ಭಾರತೀಯ ಚಿತ್ರರಂಗದಲ್ಲಿ ಸದ್ಧು ಮಾಡುತ್ತಿರುವ ನಮ್ಮ‌ ಕನ್ನಡದ ಹೆಮ್ಮೆಯ ಚಿತ್ರ. ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ರಿಷಭ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ನೋಡಿದ ಪ್ರತಿಯೊಬ್ಬರೂ ಚಿತ್ರವನ್ನು ಹಾಡಿ ಹೊಗಳಿದ್ಧಾರೆ. ಇನ್ನು ಚಿತ್ರದ ಕ್ಲೈಮ್ಯಾಕ್ಸ್ ಅಂತೂ ನೋಡುಗರಿಗೆ ಹಬ್ಬ ಎಂದೇ ಹೇಳಬಹುದು. ಅದರಲ್ಲು ರಿಷಭ್ ಶೆಟ್ಟಿಯವರ ಅಭಿನಯಕ್ಕಂತೂ ಪ್ರತಿಯೊಬ್ಬರೂ.

ಮನಸೋತಿದ್ದಾರೆ. ಅಷ್ಟು ಅಚ್ಚುಕಟ್ಟಾಗಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇದಕ್ಕೆಲ್ಲಾ ಕಾರಣ ರಿಷಭ್ ಶೆಟ್ಟಿ. ಹೊಂಬಾಳೆ ಸಂಸ್ಥೆಯಿಂದ ನಿರ್ಮಾಣಗೊಂಡ ಚಿತ್ರಗಳು ಎಂದಿಗೂ ನಿರಾಸೆ‌ ಮೂಡಿಸುವುದಿಲ್ಲ ಎಂಬುದಕ್ಕೆ‌ ಕಾಂತಾರ ಚಿತ್ರವೇ ಸಾಕ್ಷಿ.ಈ ಚಿತ್ರದಲ್ಲಿ ಸಿಕ್ಕ ಅವಕಾಶವನ್ನು ಪ್ರತಿಯೊಬ್ಬರೂ ಸಹ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಶಿವ ಪಾತ್ರಧಾರಿಯಾಗಿ ರಿಷಭ್ ಲೀಲಾ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅವರು ಧಣಿಯಾಗಿ ಪಾತ್ರಗಳಿಗೆ.

ಜೀವ ತುಂಬಿದ್ದಾರೆ. ಕನ್ನಡ ಅಷ್ಟೇ ಅಲ್ಲದೆ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ದೈವಾರಾಧನೆಯನ್ನೂ ಸಹ ಚಿತ್ರದಲ್ಲಿ ಅಚ್ಚುಕಟ್ಟಾಗಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಬರುವ ಅಷ್ಟೂ ಪಾತ್ರಗಳಿಗೆ ತಮ್ಮದೇ ಆದ ಪ್ರಾಮುಖ್ಯತೆಯಿದೆ.

ಇನ್ನು ಈ ಚಿತ್ರದಲ್ಲಿ ಒಂದೇ ಒಂದು ಡೈಲಾಗ್ ಸಹ ಇರದ ಒಂದು ಪಾತ್ರವೂ ಸಹ ಇದೆ. ಅದೇ ಧಣಿಯ ಮಗನ ಪಾತ್ರ. ಹೌದು ಧಣಿಯಾಗಿ ಅಚ್ಯುತ್ ಕುಮಾರ್ ಅವರು ಪರಕಾಯ ಪ್ರವೇಶ ಮಾಡಿದ್ದಾರೆ‌. ಹಾಗೆಯೇ ಅಚ್ಯುತ್ ಕುಮಾರ್ ಅವರ ಮಗನ ಪಾತ್ರಧಾರಿಯೂ ಸಹ ಅಷ್ಟೇ ಅಚ್ಚು ಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ಚಿತ್ರದ ಟ್ರೈಲರ್ ನಲ್ಲಿಯೇ ಈ ಪಾತ್ರವನ್ನು ನೀವು ನೋಡಬಹುದು.‌ ಅಚ್ಯುತ್ ಕುಮಾರ್ ಅವರ ಮಗ ಈ ಚಿತ್ರದಲ್ಲಿ ಬುದ್ಧಿಮಾಂದ್ಯ ಎಂಬುದು ಚಿತ್ರ ನೋಡಿದವರಿಗೆ ಈಗಾಗಲೇ‌ ತಿಳಿದಿರುತ್ತದೆ. ಆದರೆ ಈ ಪಾತ್ರ ಮಾಡಿದ ಹುಡುಗನ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಈ ಹುಡುಗ ಬೇರಾರೂ ಅಲ್ಲ‌ ನಟ ಆತೀಶ್ ಶೆಟ್ಟಿ. ಈ‌ ಪಾತ್ರಕ್ಕೆ ಆಯ್ಕೆಯಾದ‌ ನಂತರ ನಿಜವಾದ ಬುದ್ಧಿಮಾಂದ್ಯ ಮಕ್ಕಳಿರುವ ಶಾಲೆಗೆ ತೆರಳಿ ಅವರ ಹಾವ ಭಾವ ನೋಡಿ‌ ತಿಳಿದುಕೊಂಡು ನಂತರ‌ ಕ್ಯಾಮೆರಾ ಎದುರಿಸಿದ್ದಾರೆ.

ಈ‌ ಹಿಂದೆ ರಿಷಭ್ ಶೆಟ್ಟಿಯವರ ಸರ್ಕಾರಿ‌ ಹಿರಿಯ ಪ್ರಾಥಮಿಕೆ ಶಾಲೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಆತೀಶ್ ಶೆಟ್ಟಿ ಅವರ ಅಭಿನಯಕ್ಕೆ ಎಲ್ಲೆಡೆ ಪ್ರಶಂಸೆಗಳು ಕೇಳಿಬರುತ್ತಿವೆ. ಮೂಲತಃ ಮಂಗಳೂರಿನವರಾದ ಆತೀಶ್ ಶೆಟ್ಟಿ ಸಿಕ್ಕ‌ ಚಿಕ್ಕ ಅವಕಾಶದಲ್ಲಿಯೇ ತಮ್ಮ ಸಾಮರ್ಥ್ಯವನ್ನು ನಿರೂಪಿಸಿಕೊಂಡಿದ್ದಾರೆ.‌ ಇಂತಹ ಅದ್ಭುತ ಪ್ರತಿಭೆಗೆ ಮತ್ತಷ್ಟು ಅವಕಾಶಗಳು ದೊರೆಯಲಿ ಎಂಬುದು ಎಲ್ಲರ ಆಶಯ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply