ಕಾಂತಾರ ಗೆಲುವಿನ ಕಾರಣ ರಿಷಬ್ ಶೆಟ್ಟಿ ಮನೆ ದೇವರುಗಳು!! ಶೂಟಿಂಗ್ ನಲ್ಲಿ ನಡೆದಿತ್ತು ಪವಾಡ!! ಅಂದು ಏನಾಗಿತ್ತು ಗೊತ್ತೇ ?? ಶೂಟಿಂಗ್ ಸಮಯದಲ್ಲಿ !!
ಕಾಂತಾರ ಸಿನಿಮಾದ ದೈವಗಳಿಗೆ ಮಾರುಹೋಗದವರೇ ಇಲ್ಲ. ನಿಜವಾಗಿ ನಡೆಯುವ ಕೋಲವನ್ನಾಗಲಿ, ಮೈಮೇಲೆ ಬರುವ ದೈವವನ್ಣಾಗಲಿ ಅದೇ ರೀತಿ ಅಚ್ಚುಕ್ಕಟ್ಟಾಗಿ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದೆ. ಅಬ್ಬಬ್ಬಾ ಇಷ್ಟು ಭರ್ಜರಿಯಾಗಿ ಈ ಸಿನಿಮಾವನ್ನು ಹೇಗೆ ಮಾಡಲು ಸಾಧ್ಯವಾಯಿತು ಎನ್ನುವುದು ಎಲ್ಲರ ಪ್ರಶ್ನೆ. ಅದಕ್ಕೆ ರಿಷಬ್ ಶೆಟ್ಟಿಯವರೇ ಹೇಳುವಂತೆ ಇದೆಲ್ಲವೂ ದೈವಗಳ ಕೃಪೆ.
ಹೌದು, ದಕ್ಷಿಣ ಕನ್ನಡ ಭೂಪ್ರದೇಶಗಳನ್ನು, ತನ್ನನ್ನು ನಂಬಿದ ಜನರನ್ನು ತಲತಲಾಂತರದಿಂದ ಕಾದುಕೊಂಡು ಬಂದ ದೈವಗಳ ಶಕ್ತಿ ಅಪಾರ. ಅವುಗಳನ್ನ ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. ಅವುಗಳಿಗೆ ಚ್ಯುತಿ ಬರುವಂತೆ ನಡೆದುಕೊಳ್ಳುವಂತಿಲ್ಲ. ಕಾಂತಾರ ಸಿನಿಮಾ ಸಕ್ಸೆಸ್ ಆಗೋಕೆ ರಿಷಬ್ ಶೆಟ್ಟಿಯವರಲ್ಲಿ ಇರುವ ಅಪಾರ ದೈವ ಭಕ್ತಿಯು ಒಂದು ಕಾರಣ.
ಕಾಂತಾರ ಸಿನಿಮಾ ಸೆಟ್ ನಲ್ಲಿ ಒಮ್ಮೆ ಸೆಟ್ ಎಲ್ಲವೂ ಹಾಳಾಗುತ್ತದೆ. ಭರ್ಜರಿ ಮಳೆಗೆ ಎಲ್ಲವೂ ಕೊಚ್ಚಿಕೊಂಡು ಹೋಗುತ್ತದೆ. ಆಗ ರಿಷಬ್ ಸಿನಿಮಾ ಮಾಡುತ್ತಾರಾ ಅನ್ನುವ ಗುಮಾನಿಯೇ ಶುರುವಾಗಿತ್ತು. ಅಷ್ಟರಲ್ಲಿ ಕುಂದಾಪುರದ ಗ್ರಾಮಗಳನ್ನು ಕಾಪಾಡುತ್ತಿರುವ ಶ್ರೀ ಕ್ಷೇತ್ರ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವರ ಬಳಿ ಕೈಮುಗಿದು ನೀನೇ ಕಾಪಾಡು ಎಂದು ರಿಶಬ್ ಬೇಡಿತ್ತಾರೆ. ಭಕ್ತರನ್ನು ಕೈಬಿಟ್ಟ ದೇವರಿದೆಯೇ? ಕೊನೆಗೂ ಮಾರಣ ಕಟ್ಟೆಯ ಬ್ರಹ್ಮಲಿಂಗೇಶ್ವರ ದೇವರ ಆಶೀರ್ವಾದದಿಂದ ಈ ಸಿನಿಮಾ ಶೂಟಿಂಗ್ ಯಶಸ್ವಿಯಾಗಿ ಮುಂದುವರೆಯುತ್ತದೆ.
ಇನ್ನು ಎರಡನೆಯದಾಗಿ ಪಂಜುರ್ಲಿ ಹಾಗೂ ಗುಳಿಗ ದೈವಗಳು. ರಿಷಬ್ ಶೆಟ್ಟಿಯವರ ಮನೆ ದೇವರು ಪಂಜುರ್ಲಿ. ತುಳು ಭಾಷೆಯಲ್ಲಿ ಪಂಜುರ್ಲಿ ಎಂದರೆ ಹಂದಿಮರಿ. ಮಹಾದೇವನು ತನ್ನ ಹೂಗಿಡಗಳನ್ನು ಹಾಳುಮಾಡಿದ ಹಂದಿ ಮರಿಗೆ ಶಿಕ್ಷೆ ವಿಧಿಸುತ್ತಾನೆ. ಆದರೆ ಇದರಿಂದ ಪಾರ್ವತಿಗೆ ಬಹಳ ನೋವಾಗುತ್ತದೆ. ಆಕೆಯ ದುಃಖವನ್ನು ನೋಡಿ ಮಹಾಶಿವನು ಹಂದಿ ಮರಿಗೆ ಮತ್ತೆ ಜೀವ ನೀಡಿ ಭೂಲೇಕಕ್ಕೆ ದೈವವಾಗಿ ಕಳುಹಿಸುತ್ತಾನೆ. ಅಲ್ಲಿಂದ ಪಂಜುರ್ಲಿ ದೈವ ದಕ್ಷಿಣ ಕನ್ನಡದ ಪ್ರತಿ ಮನೆಯ ದೈವವಾಗಿದೆ.
ಇನ್ನು ಗುಳಿಗ ದೈವ. ಈ ದೈವ ಬಹಳ ಕೋಪಿಷ್ಠ. ಪಂಜುರ್ಲಿ ಮನೆಯನ್ನು ಕಾದರೆ, ಮನೆಯ ಸುತ್ತಲಿನ ಪ್ರದೇಶವನ್ನು ಕಾಯುವ ದೈವ ಗುಳಿಗ ಅಥವಾ ಕ್ಷೇತ್ರಪಾಲ. ಗುಳಿಗ ದೈವ ಭೂಲೋಕಕ್ಕೆ ಬರುವ ಹಿಂದೆಯೂ ಒಂದು ಕಥೆ ಇದೆ. ತನ್ನ ತಂದೆ ಹಾಗೂ ತಾಯಿಯನ್ನು ಕೊಂದು ತಿಂದ ಬಾಲಕ ಗುಳಿಗ. ಆತನಿಗೆ ಹುಟ್ಟಿದಾಗಿನಿಂದ ವಿಪರೀತ ಹಸಿವು. ಒಮ್ಮೆ ಮಹಾವಿಷ್ಟು ಆತನ ಹಸಿವನ್ನು ತೀರಿಸಲು ತನ್ನ ಕಿರುಬೆರಳನ್ನೇ ನೀಡುತ್ತಾನೆ. ಆದರೆ ಇದನ್ನು ತಿಂದರೂ ಗುಳಿಗನ ಹಸಿವು ಮಾತ್ರ ಇಂಗುವುದಿಲ್ಲ. ಆಗ ಮಹಾ ವಿಷ್ಣು ಗುಳಿಗನನ್ನು ಭೂಲೋಕದ ಜನರ ರಕ್ಷಣೆಗಾಗಿ ಕಳುಹಿಸುತ್ತಾನೆ.
ಅಲ್ಲಿಂದ ಗುಳಿಗ ಕ್ಷೇತ್ರಪಾಲನಾಗಿ ಎಲ್ಲರ ಭೂಮಿಯನ್ನು ಕಾಯುತ್ತಾನೆ. ಗುಳಿಗ ಮಹಾನ್ ಕೋಪಿಷ್ಠ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುತ್ತಾನೆಯೇ ಕೊರತು ಕ್ಷಮೆಯನ್ನಲ್ಲ. ಇದನ್ನೇ ನೀವು ಕಾಂತಾರ ಸಿನಿಮಾದ ಕೊನೆಯಲ್ಲಿ ನೋಡುವುದು. ಅನ್ಯಾಯ ಮಾಡಿದವರಿಗೆ ಕೂಡಲೇ ಶಿಕ್ಷೆ ನೀಡುತ್ತಾನೆ ಗುಳಿಗ. ಹೀಗೆ ದಕ್ಷಿಣ ಕನ್ನಡ ಭಾಗದ ದೈವ ಶಕ್ತಿಗಳೇ ದೈವತ್ವವನ್ನು ಸಾರುವ ಸಿನಿಮಾವೊಂದನ್ನು ಮಾಡುವುದಕ್ಕೆ ರಿಶಬ್ ಶೆಟ್ಟಿಗೆ ಆಶೀರ್ವಾದ ಮಾಡುದವು ಎಂದರೆ ತಪ್ಪಾಗಲಿಕ್ಕಿಲ್ಲ.