ಮಿಥುನ್ ಚಕ್ರವರ್ತಿ ಅವರು ತಮ್ಮ ಡ್ಯಾನ್ಸ್ ಮತ್ತು ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇವರ ಡಿಸ್ಕೋ ಡಾನ್ ಚಿತ್ರದಿಂದ ಸಕ್ಕತ್ ಜನಪ್ರಿಯರಾದರು.
ಇನ್ನೂ ಮಿಥುನ್ ಚಕ್ರವರ್ತಿ ಅವರು ಜೂನ್ 16 1950 ರಂದು ಜನಿಸಿದ್ದಾರೆ. ಮಿಥುನ್ ಚಕ್ರವರ್ತಿ ಅವರಿಗೆ ಒಬ್ಬರು ಮುದ್ದಾದ ಮಗಳು ಇದ್ದಾರೆ. ಈಕೆ ಕೂಡ ಬಾಲಿವುಡ್ ನ ಜನಪ್ರಿಯ ನಟಿ.
ಈ ನಟಿಯ ಹೆಸರು ದಿಶಾನಿ ಚಕ್ರವರ್ತಿ ಎಂದು. ದಿಶಾನಿ ಚಕ್ರವರ್ತಿ ಅವರು ಹೋಲಿ ಸ್ಮೋಕ್, ಅಂಡರ್ ಪಾಸ್, ವೈ ಡುಯೂ ಡೂ ಇಟ್, ಗಿಫ್ಟ್ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಆದರೆ ಮುಖ್ಯವಾದ ವಿಚಾರ ಏನೆಂದರೆ ದಿಶಾನಿ ಚಕ್ರವರ್ತಿ ಅವರು ಮಿಥುನ್ ಚಕ್ರವರ್ತಿ ಅವರ ಸ್ವಂತ ಮಗಳಲ್ಲ ಬಳಿಕ ರಸ್ತೆಯ ಪಕ್ಕದಲ್ಲಿ ಇರುವ ಕಸದ ತೊಟ್ಟಿಯಲ್ಲಿ ಸಿಕ್ಕಿದ ಮಗು.
ಹೌದು ತುಂಬಾ ವರ್ಷಗಳ ಹಿಂದೆ ಒಂದು ರಸ್ತೆಯ ಪಕ್ಕದಲ್ಲಿದ್ದ ಒಂದು ಕಸದ ತೊಟ್ಟಿಯಲ್ಲಿ ಚಿಕ್ಕ ಕೂಸು ಅಳುತ್ತಿತ್ತು. ಇದನ್ನು ನೋಡಿದ ಅಲ್ಲಿನ ಜನರು ಮಗು ತುಂಬಾ ವೀಕ್ ಇದೆಯೆಂದು ಹೇಳಿ ಕೂಡಲೇ ಎನ್.ಜಿ.ಒ ಗೆ ಸೇರಿಸಿದರು.
ಕೂಡಲೇ ಮಿಥುನ್ ಚಕ್ರವರ್ತಿ ಅವರಿಗೆ ಈ ವಿಷಯ ತಿಳಿದು ಬಂತು. ತಕ್ಷಣವೇ ಆಸ್ಪತ್ರೆಗೆ ಹೋಗಿ ಆ ಮಗುವನ್ನು ಎತ್ತಿಕೊಂಡು ಬಂದು ಮನೆಯಲ್ಲಿ ತನ್ನ ಮಗಳಂತೆ ನೋಡಿಕೊಂಡರು.
ಏಕೆಂದರೆ ಮಿಥುನ್ ಚಕ್ರವರ್ತಿ ಅವರಿಗೆ ಈಗಾಗಲೇ 3 ಜನ ಗಂಡು ಮಕ್ಕಳಿದ್ದರು. ಇವರಿಗೆ ಹೆಣ್ಣು ಮಗು ಇಲ್ಲದ ಕಾರಣ ಕಸದ ತೊಟ್ಟಿಯಲ್ಲಿ ಸಿಕ್ಕ ಹೆಣ್ಣು ಮಗುವನ್ನು ಮನೆಗೆ ಕರೆದುಕೊಂಡು ಬಂದು ಸಾಕುತ್ತಿದ್ದಾರೆ. ತನ್ನ ಗಂಡು ಮಕ್ಕಳಿಗಿಂತ ಹೆಚ್ಚಾಗಿ ದಿಶಾನಿ ಚಕ್ರವರ್ತಿ ಅವರಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಇದರಂತೆಯೇ ಮಿಥುನ್ ಚಕ್ರವರ್ತಿ ಅವರು ತಮ್ಮ ಮಗಳನ್ನು ಬಾಲಿವುಡ್ ಗೂ ಸಹ ಎಂಟ್ರಿ ಮಾಡಿಸಿದರು. ಏನೇ ಆಗಲಿ ಕಸದ ತೊಟ್ಟಿಯಲ್ಲಿ ಸಿಕ್ಕ ಮಗು ಈಗ ಬಾಲಿವುಡ್ ನ ಜನಪ್ರಿಯ ನಟಿ ಆಗಿರುವುದು ಒಂದು ಆಶ್ಚರ್ಯಕರ. ಅದರಲ್ಲೂ ಮಿಥುನ್ ಚಕ್ರವರ್ತಿ ಅವರ ಈ ಒಳ್ಳೆಯ ಮನಸ್ಸಿನಿಗೆ ಸಲಾಂ ಹೇಳೋಣ…..