ಕರಾಟೆ ಕಿಂಗ್ ಶಂಕರ್ ನಾಗ್ ಅವರ ಮಗಳು ಯಾರು ಗೊತ್ತೇ ?? ಈಗ ಬೆಳೆದು ಎಷ್ಟು ದೊಡ್ಡವರಾಗಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಗೊತ್ತೇ ??
ಕರಾಟೆ ಕಿಂಗ್ ಶಂಕರ್ ನಾಗ್ ಅವರು ನವೆಂಬರ್ 9 1954 ರಂದು ಹೊನ್ನಾವರದಲ್ಲಿ ಜನಿಸಿದರು. ಇವರು ಕೆಲ ವರ್ಷಗಳ ಕಾಲ ಬದುಕಿದ್ದರು ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿಕೊಂಡಿದ್ದರು. ಇನ್ನು ಶಂಕರ್ ನಾಗ್ ಅವರು ಕೇವಲ ನಟ ಮಾತ್ರ ಆಗಿರಲಿಲ್ಲ ಸಿನಿಮಾ ನಿರ್ಮಾಪಕ ನಿರ್ದೇಶಕ ಮತ್ತು ರೈಟರ್ ಕೂಡ ಆಗಿದ್ದರು.
ಶಂಕರ್ ನಾಗ್ ಅವರು 1978 ರಲ್ಲಿ ಸರ್ವಸಾಕ್ಷಿ ಎನ್ನುವ ಮರಾಠಿ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರುಮಾಡಿದರು. ಇನ್ನು ನಮ್ಮ ಕನ್ನಡದಲ್ಲಿ ಅದೇ ವರ್ಷದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಹೀಗೆ ಇವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಒಂದು ಗುರುತನ್ನು ಸಾಧಿಸಿಕೊಂಡಿದ್ದರು.
ಆದರೆ ದುರದೃಷ್ಟವಶಾತ್ ಶಂಕರ್ ನಾಗ್ ಅವರು ದಾವಣಗೆರೆಯ ಹೊರವಲಯದಲ್ಲಿ ಕಾರಿನಲ್ಲಿ ಹೋಗುತ್ತಿರಬೇಕಾದರೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇವರು ಸೆಪ್ಟೆಂಬರ್ 30 1990 ರಂದು ಅನಗೋಡು ಎನ್ನುವ ಊರಿನಲ್ಲಿ ರಸ್ತೆಯ ಅಪಘಾತದಿಂದ ಮರಣ ಹೊಂದಿದರು. ಇನ್ನೂ ಇವರು ನಟಿ ಅರುಂಧತಿ ನಾಗ್ ಅವರನ್ನು 1980 ರಲ್ಲಿ ವಿವಾಹ ಮಾಡಿಕೊಂಡಿದ್ದರು.
ಇವರಿಗೆ ಕಾವ್ಯ ನಾಗ್ ಎನ್ನುವ ಏಕೈಕ ಮಗಳು ಇದ್ದಾರೆ. ಇನ್ನೂ ಇವರ ಮಗಳು ಕೂಡ ತಂದೆ ತಾಯಿಯಂತೆ ನಟಿಸುತ್ತಿದ್ದಾರಾ. ಇಲ್ಲ ಕಾವ್ಯ ಅವರು ನಟನೆಯ ಮೇಲೆ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ಇವರಿಗೆ ಬೇರೆ ವಿಷಯದ ಬಗ್ಗೆ ತುಂಬಾ ಆಸಕ್ತಿ ಇತ್ತು. ಇವರು ವೈಲ್ಡ್ ಲೈಫ್ ಎನ್ನುವ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಇದಾದ ಮೇಲೆ ಇವರು ಮದುವೆಯಾಗಿ ಪರದೇಶಕ್ಕೆ ಹೋದರು.
ಆದರೆ ಇವರಿಗೆ ತಮ್ಮ ಭಾರತ ದೇಶದಲ್ಲಿ ಏನಾದರೂ ಮಾಡಬೇಕೆನ್ನುವ ಆಸೆ ತುಂಬಾನೇ ಇತ್ತು. ಇದಕ್ಕಾಗಿ ಒಂದು ಹೊಸ ಸಂಸ್ಥೆಯನ್ನು ಶುರು ಮಾಡುವುದಕ್ಕೆ ನಿರ್ಧಾರ ಮಾಡಿದರು. ಹೌದು ಕೋಕೋನೆಸ್ ಎಂಬ ಹೆಸರಿನ ಸಂಸ್ಥೆಯನ್ನು ಶುರು ಮಾಡಿ ಅಲ್ಲಿ ಶುದ್ಧವಾದ ತೆಂಗಿನ ಎಣ್ಣೆಯನ್ನು ತಯಾರಿಸುತ್ತಾರೆ. ಹೌದು ಕಾವ್ಯ ಅವರ ಸಂಸ್ಥೆಯಲ್ಲಿ ಶುದ್ಧವಾದ ತೆಂಗಿನ ಎಣ್ಣೆಯನ್ನು ತಯಾರಿಸಲಾಗುತ್ತದೆ. ಇವರು ಉತ್ಪಾದನೆ ಮಾಡುತ್ತಿರುವ ಎಣ್ಣೆ ಬೆಂಗಳೂರಿನ ಹಲವಾರು ಅಂಗಡಿಗಳಲ್ಲಿ ಲಭ್ಯವಾಗುತ್ತದೆ…..