ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಿರುವ ನಟರ ಪತ್ನಿಯರು ಯಾರು ಮತ್ತು ಹೇಗಿದ್ದಾರೆ ಎಂದು ನೋಡೋಣ ಬನ್ನಿ…ನಟ ಜಗನ್ ಚಂದ್ರಶೇಖರ್ ಅವರು ಜೂನ್ 13 1987 ರಂದು ಜನಿಸಿದ್ದಾರೆ. ಇವರು ಗಾಂಧಾರಿ ಧಾರಾವಾಹಿಯ ಮೂಲಕ ಸಖತ್ ಜನಪ್ರಿಯರಾದರು ಎಂದು ಹೇಳಬಹುದು. ಇನ್ನು ಜಗನ್ನಾಥ್ ಚಂದ್ರಶೇಖರ್ ಅವರು ರಕ್ಷಿತಾ ಮುನಿಯಪ್ಪ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟ ಚಂದನ್ ಕುಮಾರ್ ಅವರು ಸೆಪ್ಟೆಂಬರ್ 11 1985 ರಂದು ಜನಿಸಿದ್ದಾರೆ. ಇವರು ರಾಧಾ ಕಲ್ಯಾಣ ಮತ್ತು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುಖಾಂತರ ತುಂಬಾನೇ ಜನಪ್ರಿಯರಾದರು. ಇನ್ನೂ ಇವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ ಕವಿತಾ ಗೌಡ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟ ಆಕರ್ಷ್ ಅವರು ಕುಲವಧು ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟರು. ಇನ್ನೂ ಇದೇ ಧಾರಾವಾಹಿಯಲ್ಲಿ ನಟಿಸಿದ ದೀಪಿಕಾ ಅವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ.
ನಟ ಚಂದು ಗೌಡ ಅವರು ಆಗಸ್ಟ್ 3 1991 ರಂದು ಜನಿಸಿದ್ದಾರೆ. ಇವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದು ಶಾಲಿನಿ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ನಟ ರಾಘವೇಂದ್ರ ಅವರು ಮಿಸ್ಟರ್ & ಮಿಸಸ್ ರಂಗೇಗೌಡ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಇನ್ನು ಇವರು ಅಮೃತಾ ರಾಮಮೂರ್ತಿ ಅವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ.
ನಟ ವಿಜಯ್ ಸೂರ್ಯ ಅವರು ಸೆಪ್ಟೆಂಬರ್ 7 1990 ರಂದು ಜನಿಸಿದ್ದಾರೆ. ಇವರು ದೂರ ಸಂಬಂಧಿ ಆಗಿರುವ ಸಾಫ್ಟ್ ವೇರ್ ಉದ್ಯಮಿ ಆಗಿರುವ ಚೈತ್ರಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟ ದೀಪಕ್ ಮಹದೇವ್ ಅವರು 1993 ರಲ್ಲಿ ಜನಿಸಿದ್ದಾರೆ. ಇವರು ಚಂದನಾ ಎನ್ನುವವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ.
ನಟ ಸ್ಕಂದ ಅಶೋಕ್ ಅವರು ಏಪ್ರಿಲ್ 26 1986 ರಂದು ಜನಿಸಿದ್ದಾರೆ. ಇವರು ಅಗ್ನಿಸಾಕ್ಷಿ, ಲಕ್ಷ್ಮಿ ಬಾರಮ್ಮ, ರಾಧಾ ರಮಣ, ಸತ್ಯ, ರಾಧೆಶ್ಯಾಮ ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನೂ ಇವರು ಶಿಕಾ ಪ್ರಸಾದ್ ಎಂಬುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ನಟ ಭವಾನಿ ಸಿಂಗ್ ಅವರು ಸುಬ್ಬಲಕ್ಷ್ಮಿ ಸಂಸಾರ ಮೂಲಕ ಕಿರುತೆರೆಗೆ ಕಾಲಿಟ್ಟರು. ಇನ್ನೂ ಇವರು ಪಂಕಜಾ ಶಿವಣ್ಣ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟ ರಕ್ಷ್ ಅವರು ಜನವರಿ 8 1992 ರಂದು ಜನಿಸಿದ್ದಾರೆ. ಇವರು ಗಟ್ಟಿಮೇಳ ಇನ್ನೂ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ಅನುಷಾ ಎನ್ನುವವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ……