ಕೆಲ ನಟಿಯರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿ ತದನಂತರ ಬೇರೆ ಭಾಷೆಯಲ್ಲೂ ನಟಿಸುತ್ತಾ ಸಕತ್ ಫೇಮಸ್ ಆಗಿದ್ದಾರೆ. ಆ ನಟಿಯರು ಯಾರು ಎಂದು ನೋಡೋಣ ಬನ್ನಿ..
ದೀಪಿಕಾ ಪಡುಕೋಣೆ ಅವರು ಉಪೇಂದ್ರ ಅವರ ಜೊತೆಗೆ ಐಶ್ವರ್ಯ ಚಿತ್ರದ ಮೂಲಕ ಮೊದಲನೆಯದಾಗಿ ಸಿನಿ ಇಂಡಸ್ಟ್ರಿಗೆ ಕಾಲಿಟ್ಟರು. ತದನಂತರ ಇವರು ಬಾಲಿವುಡ್ ಗೆ ಪ್ರವೇಶ ಮಾಡಿ ಬಾಲಿವುಡ್ ನ ಖ್ಯಾತ ನಟಿ ಎಂದು ಗುರುತಿಸಿಕೊಂಡಿದ್ದಾರೆ.
ನಿತ್ಯಾ ಮೆನನ್ ಅವರು ಕನ್ನಡದಲ್ಲಿ 7 ಓ ಕ್ಲಾಕ್ ಚಿತ್ರದ ಮೂಲಕ ತಮ್ಮ ಸಿನಿಮಾ ಜೀವನವನ್ನು ಶುರು ಮಾಡಿದರು. ನಂತರ ಜೋಶ್ ಮೈನಾ ಚಿತ್ರದಲ್ಲಿ ನಟಿಸದೆ ಸಖತ್ ಫೇಮಸ್ ಆದರು. ಇದಾದ ಮೇಲೆ ಇವರು ತಮಿಳು ತೆಲುಗು ಮಲಯಾಳಂ ಕನ್ನಡ ಭಾಷೆಗಳಲ್ಲಿ ನಟಿಸಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಅವರು ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ತದನಂತರ ಗಿಲ್ಲಿ ಎನ್ನುವ ಕನ್ನಡ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರುಮಾಡಿ ಈಗ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಶ್ರೀನಿಧಿ ಶೆಟ್ಟಿ ಅವರಯ ಸುಪ್ರಾ ನ್ಯಾಷನಲ್ ವಿನ್ನರ್ ಆಗಿ ಇವರಿಗೆ ಕೆಜಿಎಫ್ 1 ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ದೊರಕಿತು. ಈ ಸಿನಿಮಾದ ಮೂಲಕ ಇವರು ವಿಶ್ವಾದ್ಯಂತ ಜನಪ್ರಿಯರಾದರು.
ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅವರ ಜೊತೆಗೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಗೆ ಕಾಲಿಟ್ಟರು. ತದನಂತರ ಪರಭಾಷೆಗಳಲ್ಲಿ ನಟಿಸಿ ಈಗ ಇವರಿಗೆ ಬಾಲಿವುಡ್ ನಲ್ಲೂ ನಟಿಸುವುದಕ್ಕೆ ಅವಕಾಶಗಳು ದೊರಕಿವೆ.
ಪ್ರಣಿತಾ ಸುಭಾಷ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಪೊರ್ಕಿ ಚಿತ್ರದ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಗೆ ಕಾಲಿಟ್ಟರು. ಇದಾದ ಮೇಲೆ ಬೇರೆ ಭಾಷೆಗಳಲ್ಲಿ ನಟಿಸಿ ಈಗ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಸೌಂದರ್ಯ ಅವರು ಗಂಧರ್ವ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಇದಾದ ಮೇಲೆ ಹಿಂದಿ ತೆಲುಗು ಮಲಯಾಳಂ ತಮಿಳು ಭಾಷೆಗಳಲ್ಲಿ ನಟಿಸಿ 12 ವರ್ಷದ ಸಿನಿಮಾ ಅವಧಿಯಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಅನುಷ್ಕಾ ಶೆಟ್ಟಿ ಅವರು ಕನ್ನಡದಲ್ಲಿ ಒಂದು ಸೀರಿಯಲ್ ನಲ್ಲಿ ನಟಿಸಿದರು. ತದನಂತರ ಸೂಪರ್ ಎನ್ನುವ ತೆಲುಗು ಚಿತ್ರದ ಮೂಲಕ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿದರು. ಈಗ ಇವರು ವರ್ಲ್ಡ್ ವೈಡ್ ಫೇಮಸ್ ನಟಿಯಾಗಿದ್ದಾರೆ…..