ಕಬ್ಜಾ 1947 ರಿಂದ 1984 ರ ನಡುವೆ ನಡೆದ ಮಾಸ್ ಎಂಟರ್ಟೈನರ್ ಆಕ್ಷನ್ ಚಿತ್ರವಾಗಿದೆ. ಈ ಚಿತ್ರವು ಗಾಂಧಿ ಅನುಯಾಯಿ ಮತ್ತು ಕ್ರೂರವಾಗಿ ದಾಳಿಗೊಳಗಾದ ಸ್ವಾತಂತ್ರ್ಯ ಹೋರಾಟಗಾರನ ಸುತ್ತ ಸುತ್ತುತ್ತದೆ. ಅನಿವಾರ್ಯ ಕಾರಣಗಳಿಂದ ಸ್ವಾತಂತ್ರ್ಯ ಹೋರಾಟಗಾರನ ಮಗ ಮಾಫಿಯಾ ಜಗತ್ತಿನಲ್ಲಿ ಸಿಕ್ಕಿಬೀಳುತ್ತಾನೆ.ಸದ್ಯಕ್ಕೆ ಹಲವಾರು ಸಿನೆಮಾ ಪ್ರಿಯರ ಊಹಾಪೋಹಗಳು ಈಗಿವೆ..
ಕಬ್ಜ ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಉಪೇಂದ್ರ , ಸುದೀಪ್ ಮತ್ತು ಶ್ರಿಯಾ ಸರಣ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.ಬಸ್ರೂರು ಚಿತ್ರಕ್ಕೆ ಎಜೆ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರು ನೀಡುತ್ತಿದ್ದ ಪ್ರೋತ್ಸಾಹ ಅಪಾರ. ಚಿತ್ರದ ಕೆಲವು ತುಣುಕುಗಳನ್ನು ಅವರಿಗೆ ತೋರಿಸಿದ್ದಾಗ ಹಾಲಿವುಡ್ ಚಿತ್ರ ಇದ್ದ ಹಾಗೆ ಇದೆ ಎಂದು ಹೇಳಿ ಮೆಚ್ಚುಗೆ ಸೂಚಿಸಿದ್ದರು. ಸಹೃದಯಿ, ಅಭಿಮಾನಿಗಳ ಪಾಲಿಗಂತೂ ದೇವರೆ ಆಗಿರುವ.
ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ನಮ್ಮ “ಕಬ್ಬ” ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ.ಭಾರೀ ನಿರೀಕ್ಷೆಯನ್ನು ಹುಟ್ಟಿ ಹಾಕಿರುವ ಕಬ್ಜ ಚಿತ್ರವು ಇದೇ ಮಾರ್ಚ್ 17 ರಂದು ಬಾಕ್ಸ್ ಆಫೀಸ್ ಧೂಳಿಪಟ ಮಾಡಲು ಬರುತ್ತಿದೆ…