ಸಿನಿಮಾಗಳಲ್ಲಿ ನಾವು ಸಾಕಷ್ಟು ಅಣ್ಣ ತಮ್ಮ ಇಬ್ಬರು ನಟರಾಗಿರುವುದನ್ನು ನಾವು ನೋಡಿರುತ್ತೇವೆ. ಈಗ ನಾವು ಸ್ಯಾಂಡಲ್ ವುಡ್ ನಲ್ಲಿ ಅಣ್ಣ ತಂಗಿ ಅಥವಾ ಅಕ್ಕ ತಮ್ಮ ಇರುವ ಕಲಾವಿದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ..
ದುನಿಯಾ ವಿಜಯ್ ಮತ್ತು ಅಂಬುಜಾ
ದುನಿಯಾ ವಿಜಯ್ ಅವರು ಸಾಕಷ್ಟು ಚಿತ್ರಗಳಲ್ಲಿ ಮೊದಲು ಸಪೋರ್ಟಿಂಗ್ ರೋಲ್ ಗಳಲ್ಲಿ ಅಭಿನಯಿಸಿದ್ದಾರೆ. ತದನಂತರ ಇವರು 2007 ರಲ್ಲಿ ದುನಿಯಾ ಚಿತ್ರದ ಮೂಲಕ ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದಾದ ಮೇಲೆ ಇವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಇವರ ಅಕ್ಕ ಅಂಬುಜಾ ಅವರು ಕಿರುತೆರೆಯಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಸುಧಾ ಬೆಳವಾಡಿ ಮತ್ತು ಪ್ರಕಾಶ್ ಬೆಳವಾಡಿ
ಸುಧಾ ಬೆಳವಾಡಿ ಅವರು ಮುಂಗಾರು ಮಳೆ ಚಿತ್ರದ ಮೂಲಕ ಪ್ರಖ್ಯಾತಿಯನ್ನು ಗಳಿಸಿದರು. ಇನ್ನೂ ಇವರು ಸಾಕಷ್ಟು ಸಿನಿಮಾಗಳಲ್ಲಿ ತಾಯಿಯ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇನ್ನೂ ಇವರ ಸಣ್ಣ ಪ್ರಕಾಶ್ ಬೆಳವಾಡಿ ಅವರು ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ.
ರಕ್ಷಿತಾ ಮತ್ತು ರಾಣಾ
ದಕ್ಷಿಣ ಭಾರತದ ಖ್ಯಾತ ನಟಿ ರಕ್ಷಿತಾ ಅವರು ಅಪ್ಪು ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿದರು. ಇನ್ನೂ ಇವರ ತಮ್ಮ ರಾಣಾ ಅವರು ಏಕ್ ಲವ್ ಯಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ವಿನಯಾ ಪ್ರಸಾದ್ ಮತ್ತು ರವಿ ಭಟ್
ವಿನಯ ಪ್ರಸಾದ್ ಅವರು ಕನ್ನಡ ತೆಲುಗು ತಮಿಳು ಇತರೆ ಭಾಷೆಗಳಲ್ಲಿ ಸೇರಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ತಮ್ಮ ರವಿ ಭಟ್ ಅವರು ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು ಸಿನಿಮಾಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ.
ಪ್ರೇಮ ಮತ್ತು ಅಯ್ಯಪ್ಪ
ಕನ್ನಡದ ಬೆಡಗಿ ಪ್ರೇಮಾ ಅವರು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸುಮಾರು 80 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ 90 ಮತ್ತು 2000ರ ಸಮಯದಲ್ಲಿ ಟಾಪ್ ನಟಿಯಾಗಿದ್ದರು. ಇನ್ನೂ ಇವರ ತಮ್ಮ ಅಯ್ಯಪ್ಪ ಅವರು ಕ್ರಿಕೆಟಿಗ ಆಗಿದ್ದು ಬಿಗ್ ಬಾಸ್ ನಲ್ಲಿ ಮತ್ತು ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪವಿತ್ರಾ ಲೋಕೇಶ್ ಮತ್ತು ಆದಿ ಲೋಕೇಶ್
ಸೌತ್ ಇಂಡಿಯಾ ಫೇಮಸ್ ಆಗಿರುವ ಪವಿತ್ರಾ ಲೋಕೇಶ್ ಅವರು ಸಾಕಷ್ಟು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಇವರ ತಮ್ಮ ಆದಿ ಲೋಕೇಶ್ ಅವರು ಖಳನಾಯಕ ಮತ್ತು ನಟರಾಗಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಧನ್ಯ ರಾಮ್ ಕುಮಾರ್ ಮತ್ತು ಧೀರನ್ ರಾಮ್ ಕುಮಾರ್
ಇವರಿಬ್ಬರು ಕನ್ನಡದ ಖ್ಯಾತ ನಟ ರಾಮ್ ಕುಮಾರ್ ಅವರ ಮಕ್ಕಳಾಗಿದ್ದು ಇಬ್ಬರು ಕನ್ನಡದಲ್ಲಿ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಶ್ರುತಿ ಮತ್ತು ಶರಣ್
ಎವರ್ಗ್ರೀನ್ ನಟಿ ಶ್ರುತಿ ಅವರು ಕನ್ನಡ ತೆಲುಗು ಮತ್ತು ಇತರೆ ವರ್ಷಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದು ಇವರ ಅಣ್ಣ ಹಾಸ್ಯನಟ ಶರಣ್ ಅವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮತ್ತು ನಟರಾಗಿ ಅಭಿನಯಿಸಿದ್ದಾರೆ….