ಸಾಮಾನ್ಯವಾಗಿ ಯಾವುದೇ ಸಿನಿಮಾ ಇಂಡಸ್ಟ್ರಿಯಲ್ಲಿ ನೋಡಿದರೂ ಅಣ್ಣ ತಮ್ಮ ಇರುವ ನಟರು ಇರುತ್ತಾರೆ. ಅದರಂತೆಯೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಣ್ಣ ತಂಗಿ ಇಬ್ಬರೂ ಕೂಡ ನಟಿಸಿ ತುಂಬಾ ಫೇಮಸ್ ಆಗಿದ್ದಾರೆ. ಆ ಅಣ್ಣ ತಂಗಿ ಜೋಡಿಗಳು ಯಾರು ಎಂದು ಇಲ್ಲಿ ನೋಡೋಣ..
ದುನಿಯಾ ವಿಜಯ್ ಅವರು ಮೊದಲು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತದನಂತರ ದುನಿಯಾ ಚಿತ್ರದ ಮೂಲಕ ಇವರು ನಾಯಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಈ ಚಿತ್ರದ ಮೂಲಕ ಇವರಿಗೆ ದುನಿಯಾ ಎನ್ನುವ ಹೆಸರು ಕೂಡ ಬಂದಿತು.
ಇದಾದ ಮೇಲೆ ಸಲಗ ಚಿತ್ರದ ಮೂಲಕ ಇವರು ನಿರ್ದೇಶನ ಮಾಡುವುದರಲ್ಲಿ ಕೂಡ ಕೈ ಜೋಡಿಸಿದರು. ಇನ್ನೂ ಇವರ ಅಕ್ಕ ಅಂಬುಜಾ ಅವರು ಕೂಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕನ್ನಡದ ಜನಪ್ರಿಯ ನಟಿ ಸುಧಾ ಬೆಳವಾಡಿ ಅವರು ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಸಕತ್ ಫೇಮಸ್ ಆಗಿದ್ದಾರೆ. ಇವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಮುಂಗಾರು ಮಳೆ ಚಿತ್ರದ ಮೂಲಕ ಎಲ್ಲೆಡೆ ಜನಪ್ರಿಯ ಆದರು.
ಇನ್ನೂ ಇವರ ಅಣ್ಣ ಪ್ರಕಾಶ್ ಬೆಳವಾಡಿ ಅವರು ಕೂಡ ಕನ್ನಡ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಬಾಲಿವುಡ್ ನಲ್ಲೂ ಕೂಡ ನಟಿಸಿ ಜನಪ್ರಿಯರಾಗಿದ್ದಾರೆ.ರಕ್ಷಿತಾ ಪ್ರೇಮ್ ಅವರು ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಎಲ್ಲ ಭಾಷೆಗಳಲ್ಲಿ ಸೇರಿ ಸುಮಾರು 25 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನೂ ಇವರ ಸಹೋದರ ರಾಣಾ ಅವರು ಕೂಡ ಏಕ್ ಲವ್ ಯ ಚಿತ್ರದ ಮೂಲಕ ತೆರೆಯ ಮೇಲೆ ಪ್ರವೇಶ ಮಾಡಿದರು.ನಟಿ ವಿನಯ ಪ್ರಸಾದ್ ಅವರು 200 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದು ಕಿರುತೆರೆಯಲ್ಲೂ ಕೂಡ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಇನ್ನೂ ಇವರ ತಮ್ಮ ರವಿ ಭಟ್ ಅವರು ಕೂಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಸಿದ್ದಾರೆ.ಪ್ರೇಮಾ ಅವರು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಟಿಸಿ ಸಕತ್ ಫೇಮಸ್ ಆಗಿದ್ದಾರೆ. ಇವರು ಎರಡು ಭಾಷೆಗಳಲ್ಲಿ ಸೇರಿ 70 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನೂ ಇವರ ಸಹೋದರ ಅಯ್ಯಪ್ಪ ಅವರು ಕ್ರಿಕೆಟಿಗ ಆಗಿದ್ದು ಒಂದು ಬಾರಿ ಬಿಗ್ ಬಾಸ್ ಮನೆಗೂ ಕೂಡ ಪ್ರವೇಶ ಮಾಡಿದ್ದರು ಮತ್ತು ಕೆಲ ರಿಯಾಲಿಟಿ ಶೋ ಗಳಲ್ಲಿ ಕೂಡ ಭಾಗವಹಿಸಿದ್ದರು.ಪವಿತ್ರಾ ಲೋಕೇಶ್ ಅವರು ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಜನಪ್ರಿಯತೆಯನ್ನು ಸಾಧಿಸಿಕೊಂಡಿದ್ದಾರೆ.
ಇನ್ನು ಇವರ ತಮ್ಮ ಆದಿ ಲೋಕೇಶ್ ಅವರು ಕೂಡ ಕನ್ನಡ ಸಿನಿಮಾಗಳಲ್ಲಿ ನಾಯಕ ಮತ್ತು ಖಳನಾಯಕ ಪಾತ್ರದಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ದೋಚಿದ್ದಾರೆ. ಕನ್ನಡದ ಹಿರಿಯ ನಟ ರಾಮ್ ಕುಮಾರ್ ಅವರಿಗೆ ಧನ್ಯ ರಾಮ್ ಕುಮಾರ್ ಮತ್ತು ಧೀರನ್ ರಾಮ್ ಕುಮಾರ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಇದರಲ್ಲಿ ಧನ್ಯ ರಾಮ್ ಕುಮಾರ್ ಅವರು ನಿನ್ನ ಸನಿಹಕೆ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ ಮತ್ತು ಧೀರನ್ ರಾಮ್ ಕುಮಾರ್ ಅವರು ಶಿವ 143 ಮತ್ತು ದಾರಿ ತಪ್ಪಿದ ಮಗ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಸೌತ್ ಇಂಡಿಯಾ ಸ್ಟಾರ್ ನಟಿ ಆಗಿರುವ ಶ್ರುತಿ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸಖತ್ ಫೇಮಸ್ ಆಗಿದ್ದಾರೆ. ಇನ್ನೂ ಇವರ ಅಣ್ಣ ಹಾಸ್ಯ ನಟ ಶರಣ್ ಅವರು ಕೂಡ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದು ತದನಂತರ ಈಗ ಹೀರೋ ಆಗಿ ತೆರೆಯ ಮೇಲೆ ಕಾಣಿಸುತ್ತಿದ್ದಾರೆ……