ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿಯರು..!! ಯಾರು ಯಾರು ಗೊತ್ತೆ ದೊಡ್ಡದೊಡ್ಡ ನಟಿಯರ ಹೆಸರು ಲಿಸ್ಟ್ ಅಲ್ಲಿದೆ ನೋಡಿ !!
ಕೆಲ ಸ್ಟಾರ್ ನಟಿಯರು ನಮ್ಮ ಸ್ಯಾಂಡಲ್ ವುಡ್ ಗೆ ಮೊದಲು ಪಾದಾರ್ಪಣೆ ಮಾಡಿದ ಮೇಲೆ ಬೇರೆ ಭಾಷೆಗಳಿಗೆ ಹೋಗಿ ತುಂಬಾ ಫೇಮಸ್ ಆಗಿದ್ದಾರೆ. ಅಂತಹ ನಟಿಯರು ಯಾರು ಎಂದು ನೋಡೋಣ.
ರಕುಲ್ ಪ್ರೀತ್ ಸಿಂಗ್ ಅವರು ಅಕ್ಟೋಬರ್ 10 1990 ರಂದು ನ್ಯೂ ಡೆಲ್ಲಿಯಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ರಾಜಿಂದರ್ ಸಿಂಗ್ ಮತ್ತು ತಾಯಿ ಹೆಸರು ಕುಲ್ ವಿಂದರ್ ಸಿಂಗ್ ಇವರು ಕನ್ನಡದ ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಜಗ್ಗೇಶ್ ಅವರ ಜೊತೆಗೆ 2009 ರಲ್ಲಿ ಗಿಲ್ಲಿ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಸಿನಿಮಾರಂಗಕ್ಕೆ ಕಾಲಿಟ್ಟರು. ಇದಾದ ಮೇಲೆ ಇವರು ಸಾಕಷ್ಟು ತೆಲುಗು ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಬಹುಜನಪ್ರಿಯ ನಟಿಯಾಗಿದ್ದಾರೆ.
ನಿತ್ಯಾ ಮೆನನ್ ಅವರು ಏಪ್ರಿಲ್ 8 1988 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು 2006 ರಲ್ಲಿ ಸೆವೆನ್ ಓ ಕ್ಲಾಕ್ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಕನ್ನಡ ಚಿತ್ರದಲ್ಲಿ ನಟಿಸಿದ ಮೇಲೆ ಮಲಯಾಳಂ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯ ನಟಿಯಾಗಿದ್ದಾರೆ.
ಸೌಂದರ್ಯ ಅವರು ಜುಲೈ 18 1972 ರಂದು ಮುಳಬಾಗಲಲ್ಲಿ ಜನಿಸಿದ್ದಾರೆ. ಇವರು ಚಿಕ್ಕ ವಯಸ್ಸಿಗೆ ಇಹಲೋಕವನ್ನು ತ್ಯಜಿಸಿದ್ದು ಕೇವಲ ಕೆಲ ವರ್ಷಗಳಲ್ಲೇ ನಟಿಯರಲ್ಲಿ ಮೊದಲನೆಯ ಸ್ಥಾನವನ್ನು ಗಳಿಸಿದ್ದರು. ಇವರು ನನ್ನ ತಂಗಿ ಎನ್ನುವ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ನಂತರ ತೆಲುಗು ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಛಾಯಾ ಸಿಂಗ್ ಅವರು ಮೇ 16 1981 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಮುನ್ನುಡಿ ಎನ್ನುವ ಕನ್ನಡ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ನೀಡಿ ತದನಂತರ ತಮಿಳು ಮಲಯಾಳಂ ತೆಲುಗು ಬೆಂಗಾಲಿ ಭೋಜ್ ಪುರಿ ಚಿತ್ರಗಳಲ್ಲಿ ನಟಿಸಿದ್ದಾರೆ.
ದೀಪಿಕಾ ಪಡುಕೋಣೆ ಅವರು ಜನವರಿ 5 1986 ರಂದು ಜನಿಸಿದ್ದಾರೆ. ಇವರು ಉಪೇಂದ್ರ ಅವರ ಐಶ್ವರ್ಯ ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ ನೀಡಿ ತದನಂತರ ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ನಟಿಯಾಗಿದ್ದಾರೆ.
ಜಯಲಲಿತಾ ಅವರು ಫೆಬ್ರವರಿ 24 1948 ರಂದು ಮೇಲುಕೋಟೆಯಲ್ಲಿ ಜನಿಸಿದರು. ಇವರು ತಮಿಳುನಾಡಿಗೆ ಮುಖ್ಯಮಂತ್ರಿ ಆಗುವ ಮುನ್ನ ಸಿನಿಮಾದ ನಟಿಯಾಗಿದ್ದರು. ಇವರು ಶ್ರೀ ಶೈಲ ಮಹಾತ್ಮೆ ಎನ್ನುವ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ನೀಡಿ ತದನಂತರ ಪರ ಭಾಷೆಗಳಲ್ಲಿ ನಟಿಸಿ ಜನಪ್ರಿಯ ಆದರು. ಇದಾದ ಮೇಲೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಇವರು ಡಿಸೆಂಬರ್ 5 2016 ರಂದು ನಿಧನರಾದರು.
ನಟಿ ರೇಖಾ ಅವರು ಅಕ್ಟೋಬರ್ 10 1954 ರಂದು ಜನಿಸಿದ್ದಾರೆ. ಇವರ ಪೂರ್ತಿ ಹೆಸರು ಭಾನುರೇಖಾ ಜೆಮಿನಿ ಗಣೇಶನ್ ಎಂದು. ಇವರು ಕನ್ನಡದಲ್ಲಿ ಆಪರೇಷನ್ ಜಾಕ್ ಪಾಟ್ ನಲ್ಲಿ ಸಿಐಡಿ 999 ಎನ್ನುವ ಚಿತ್ರದ ಮೂಲಕ ಎಂಟ್ರಿ ನೀಡಿ ತದನಂತರ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳನ್ನು ನಟಿಸಿ ತುಂಬ ಜನಪ್ರಿಯರಾಗಿದ್ದಾರೆ…..