ಸಿನಿಮಾಗಳಲ್ಲಿ ನಟಿಸುವ ಕಲಾವಿದರು ಸಾಕಷ್ಟು ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಾರೆ. ಆದರೆ ಅವರು ಮಾಡುವ ಒಂದು ವಿಭಿನ್ನವಾದ ಪಾತ್ರದಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿರುತ್ತಾರೆ. ಇದರ ಜೊತೆಗೆ ಆ ಒಂದು ಸಿನಿಮಾದ ಹೆಸರನ್ನು ಹೇಳಿದರೆ ಅದರಲ್ಲಿ ಮಾಡಿರುವ ವಿಭಿನ್ನ ಪಾತ್ರಗಳು ನೆನಪಾಗುತ್ತವೆ. ಅಂತಹ ಕಲಾವಿದರು ಮಾಡಿರುವ ವಿಭಿನ್ನ ಪಾತ್ರಗಳು ಯಾವುವೆಂದು ಇಲ್ಲಿ ನೋಡೋಣ..
ರವಿಚಂದ್ರನ್ ಅವರ ಅಭಿನಯದ ಪುಟ್ನಂಜ ಚಿತ್ರದಲ್ಲಿ ಉಮಾಶ್ರೀಯವರು ಅಜ್ಜಿಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಮೊದಲು ಇವರು ಸಾಕಷ್ಟು ಹಾಸ್ಯದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಸಿನಿಮಾದಲ್ಲಿ ವಯಸ್ಸಾದ ಅಜ್ಜಿಯ ಪಾತ್ರವನ್ನು ಮಾಡಿ ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಅವರು ಪುಟ್ನಂಜ ಪಾತ್ರದಲ್ಲಿ ನಟಿಸಿದ್ದಾರೆ.
ಕಿಚ್ಚ ಸುದೀಪ್ ಅವರ ನಿರ್ದೇಶನದ ಮತ್ತು ಅಭಿನಯದ ಕೆಂಪೇಗೌಡ ಚಿತ್ರದಲ್ಲಿ ಆರ್ಮುಗಂ ಪಾತ್ರದಲ್ಲಿ ನಟಿಸಿದ ರವಿಶಂಕರ್ ಗೌಡ ಅವರ ಪಾತ್ರಕ್ಕೆ ಅಭಿಮಾನಿಗಳು ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇವರ ಖಡಕ್ ಡೈಲಾಗ್ ಗಳಿಗೆ ಅಭಿಮಾನಿಗಳು ಮನಸೋತಿದ್ದಾರೆ.
ರಮೇಶ್ ಅರವಿಂದ್ ಅವರ ಅಭಿನಯದ ಓ ಮಲ್ಲಿಗೆ ಚಿತ್ರದಲ್ಲಿ ಸಾಧುಕೋಕಿಲಾ ಅವರು ಫೋಟೋಗ್ರಾಫರ್ ಆಗಿ ಮುಸ್ತಫಾ ಎನ್ನುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಈ ಮನೋರಂಜನೆ ಪಾತ್ರವನ್ನು ನೋಡಿ ಸಾಕಷ್ಟು ಅಭಿಮಾನಿಗಳು ಇಷ್ಟಪಡುತ್ತಾರೆ. ಇನ್ನೂ ಇದೇ ಪಾತ್ರವನ್ನು ಯಶ್ ಅವರ ಗೂಗ್ಲಿ ಚಿತ್ರದಲ್ಲಿ ಕೂಡ ಪುನರಾವರ್ತಿಸಲಾಯಿತು.
ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿನಯದ ಆಪ್ತಮಿತ್ರ ಚಿತ್ರದಲ್ಲಿ ಪಾತ್ರದಲ್ಲಿ ನಟಿಸಿರುವ ಸೌಂದರ್ಯ ಅವರ ಪಾತ್ರವೂ ಅದ್ಭುತ ಎಂದು ಹೇಳಬಹುದು ಇದರಲ್ಲಿ ಇವರು ಮಾನಸಿಕ ಪ್ರಭಾವಿತವಾದ ಪಾತ್ರವನ್ನು ಅಭಿನಯಿಸಿ ಸಿನಿಮಾ ಅರ್ಥದಿಂದ ಅಭಿಮಾನಿಗಳಿಗೆ ನಡುಕವನ್ನು ಉಂಟು ಮಾಡಿಸಿದ್ದಾರೆ. ಇದರಲ್ಲಿ ಇವರ ಪಾತ್ರವನ್ನು ನೋಡಿದರೆ ಇವರು ಎಷ್ಟು ಒಳ್ಳೆಯ ನಟಿ ಅಂತ ಗೊತ್ತಾಗುತ್ತದೆ. ಆದರೆ ಇವರದ್ದು ಇದು ಕೊನೆಯ ಚಿತ್ರ ಆಗಿರುವುದು ಮನಸ್ಸಿಗೆ ನೋವನ್ನುಂಟು ಮಾಡುತ್ತದೆ.
ಡಾ ರಾಜ್ ಕುಮಾರ್ ಅವರ ಅಭಿನಯದ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ವಜ್ರಮುನಿಯವರು ಸಾವ್ಕಾರ್ ಸಿದ್ಧಪ್ಪ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಇವರ ಪಾತ್ರವು ಹೇಗಿತ್ತು ಎಂದರೆ ಅಭಿಮಾನಿಗಳು ಸಿನಿಮಾವನ್ನು ನೋಡುತ್ತಿದ್ದರೆ ಅಲ್ಲೆ ಶಾಪ ಹಾಕುತ್ತಿದ್ದರು.
ಅನಂತ್ ನಾಗ್ ಅವರ ಅಭಿನಯದ ಗೌರಿಗಣೇಶ ಚಿತ್ರದಲ್ಲಿ ಮಾಸ್ಟರ್ ಆನಂದ್ ಅವರು ಬಾಲನಟರಾಗಿ ಗಣೇಶ ಎನ್ನುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಆನಂದ್ ಅವರು ಮಾತನಾಡುವ ಶೈಲಿ, ಚುರುಕು, ಅವರ ಬುದ್ಧಿವಂತಿಕೆ ನೋಡಿದರೆ ಯಾರಿಗೇ ಆಗಲೀ ನಗು ಬರುತ್ತದೆ.
ರಾಮ ಶಾಮ ಭಾಮ ಚಿತ್ರದಲ್ಲಿ ನಟಿಸಿರುವ ಕಮಲ್ ಹಾಸನ್ ಅವರ ಪಾತ್ರಕ್ಕೆ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಏಕೆಂದರೆ ಇದರಲ್ಲಿ ಕಮಲ್ ಹಾಸನ್ ಅವರು ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಡಬ್ ಮಾಡಿ ಮಾತನಾಡಿರುವುದು ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ…..