ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಎಂದರೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ತುಂಬಾನೇ ಇಷ್ಟಪಡುತ್ತಾರೆ. ಪುನೀತ್ ಅವರಿಗೆ ಎಷ್ಟು ಅಭಿಮಾನಿಗಳ ಸಂಖ್ಯೆ ಇದೆ ಎಂದರೆ ಅದನ್ನು ಹೇಳುವುದಕ್ಕೆ ಪದಗಳು ಸಿಗುವುದಿಲ್ಲ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಾಗ ಸಾಕಷ್ಟು ಬಡವರಿಗೆ ಅನಾಥರಿಗೆ ಸಮಾಜ ಸೇವೆಗಳನ್ನು ಮಾಡಿದ್ದಾರೆ ಮತ್ತು ಧನ ಸಹಾಯ ಕೂಡ ಮಾಡಿದ್ದಾರೆ.
ಆದರೆ ಈ ವಿಷಯಗಳು ಒಂದು ಕೊಡ ಹೊರಗೆ ಬರಲಿಲ್ಲ. ಆದರೆ ಇವರು ಮರಣ ಹೊಂದಿದ ಮೇಲೆ ಒಂದೊಂದೇ ವಿಷಯಗಳು ಹೊರಗೆ ಬರುವುದಕ್ಕೆ ಶುರುವಾಯ್ತು. ಇದನ್ನು ಕೇಳಿದ ಪುನೀತ್ ಕುಟುಂಬದವರು ಅಭಿಮಾನಿಗಳು ಎಲ್ಲರೂ ಕೂಡ ತುಂಬಾನೇ ಸಂತೋಷವಾದರು. ಹಾಗೆ ಇವರ ಮರಣದಿಂದ ಈಗಲೂ ಸಹ ಬಹುತೇಕ ಅಭಿಮಾನಿಗಳು ನೋವಿನಲ್ಲಿಯೇ ಇದ್ದಾರೆ.
ಇನ್ನೂ ಪುನೀತ್ ರಾಜ್ ಕುಮಾರ್ ಅವರು ಅಕ್ಟೋಬರ 29 2021 ರಂದು ಅಚಾನಕ್ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದರು. ಕೇವಲ 46 ವರ್ಷಗಳಿಗೆ ಪುನೀತ್ ಅವರು ಮರಣ ಹೊಂದಿದ್ದಾರೆ ಅಂದರೆ ಈಗಲೂ ಸಹ ನಂಬುವುದಕ್ಕೆ ಆಗುತ್ತಿಲ್ಲ. ಪುನೀತ್ ಅವರ ಸಮಾಧಿಯನ್ನು ನೋಡುವುದಕ್ಕೆ ಪ್ರತಿ ದಿನ ಕೂಡ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಅಭಿಮಾನಿಗಳು ಈಗಲೂ ಸಹ ಬರುತ್ತಿದ್ದಾರೆ.
ಪುನೀತ್ ಅವರು ಇನ್ನೂ ಬದುಕಿದ್ದಾರೆ ಎನ್ನುವ ಭ್ರಮೆಯಲ್ಲಿಯೇ ತುಂಬಾ ಜನ ಇದ್ದಾರೆ. ಇನ್ನು ಪುನೀತ್ ಅವರು ಅಷ್ಟು ದೊಡ್ಡ ನಟರಾಗಿದ್ದರು ಕೂಡ ಯಾರನ್ನೂ ಭೇದಭಾವ ಮಾಡಿ ನೋಡುತ್ತಿರಲಿಲ್ಲ. ಇನ್ನೂ ಇವರು ತುಂಬಾ ಭೋಜನ ಪ್ರಿಯರು ಕೂಡ ಹೌದು. ಎಲ್ಲೇ ರಸ್ತೆ ಬದಿಯಲ್ಲಿ ರುಚಿಕರವಾದ ಊಟ ಸಿಕ್ಕರೂ ಕೂಡ ಅಲ್ಲಿ ಹೋಗಿ ಊಟ ಮಾಡುತ್ತಿದ್ದರು.
ಇನ್ನು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರನ್ನೂ ಗೌರವದಿಂದ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಹಾಗೆಯೇ ತಮ್ಮ ಸ್ನೇಹಿತರು ಬಂಧು ಮಿತ್ರರು ಯಾರೇ ಕರೆದರೂ ಕೂಡ ಅವರ ಕಾರ್ಯಕ್ರಮಗಳಿಗೆ ಕುಟುಂಬ ಸಮೇತರಾಗಿ ಹೋಗುತ್ತಿದ್ದರು. ಇದರಂತೆಯೇ ಹಿರಿಯ ನಟಿ ಅಂಜಲಿ ಅವರ ಸಂಬಂಧಿಕರ ಮದುವೆಗೆ ಹೋಗಿದ್ದ ಪುನೀತ್ ಅವರ ಕೆಲ ಅಪರೂಪದ ಕ್ಷಣಗಳನ್ನು ಇಲ್ಲಿ ನೋಡಬಹುದು…..