ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ಜನಪ್ರಿಯ ಗಾಯಕರ ರಿಯಲ್ ಲೈಫ್ ಜೋಡಿಗಳ ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ..
ಗುರುಕಿರಣ್ ಅವರು ಅಕ್ಟೋಬರ್ 28 1970 ರಂದು ಮಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಜನಪ್ರಿಯ ಗಾಯಕ, ಸಂಗೀತ ನಿರ್ದೇಶಕ ಮತ್ತು ಮ್ಯೂಸಿಕ್ ಕಂಪೋಸರ್ ಕೂಡ ಹೌದು. ಗುರುಕಿರಣ್ ಅವರು ಪಲ್ಲವಿ ಗುರುಕಿರಣ್ ಅವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ.
ಸೋನು ನಿಗಮ್ ಅವರು ಜುಲೈ 30 1973 ರಂದು ಫರಿದಾಬಾದ್ ನಲ್ಲಿ ಜನಿಸಿದ್ದಾರೆ. ಇವರು ವಿವಿಧ ಭಾಷೆಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿ ಖ್ಯಾತ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು ಮಧುರಿಮಾ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ಹೇಮಂತ್ ಅವರು ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕೃತಿಕಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ರಘು ದೀಕ್ಷಿತ್ ಅವರು ನವೆಂಬರ್ 11 1974 ರಂದು ಮೈಸೂರಿನಲ್ಲಿ ಜನಿಸಿದರು. ಇವರು ಗಾಯಕರ ಜೊತೆಗೆ ಸಿನಿಮಾ ನಿರ್ಮಾಪಕ ಕೂಡ ಹೌದು. ಇನ್ನೂ ಇವರು ಡ್ಯಾನ್ಸ್ ಕೊರಿಯೋಗ್ರಫರ್ ಮಯೂರಿ ಅವರನ್ನು ಮದುವೆ ಮಾಡಿಕೊಂಡಿದ್ದಾರೆ.
ವಿಜಯ್ ಪ್ರಕಾಶ್ ಅವರು ಫೆಬ್ರವರಿ 21 1976 ರಂದು ಮೈಸೂರಿನಲ್ಲಿ ಜನಿಸಿದರು. ಇವರು ಕನ್ನಡ ಅಲ್ಲದೆ ತೆಲುಗು ಹಿಂದಿ ತಮಿಳು ಮಲಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇವರು ಮಹತಿ ವಿಜಯ್ ಪ್ರಕಾಶ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಅಲೋಕ್ ಅವರು ಮೇ 2 1989 ರಂದು ಜನಿಸಿದ್ದಾರೆ. ಇವರು ರ್ಯಾಪ್ ಸಿಂಗರ್ ಆಗಿ ಸಖತ್ ಫೇಮಸ್ ಆಗಿದ್ದಾರೆ. ಇನ್ನೂ ಅಲೋಕ್ ಅವರು ನಿಶಾ ನಟರಾಜನ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಚಂದನ್ ಶೆಟ್ಟಿ ಅವರು ಕೂಡ ರಾಪ್ ಸಿಂಗರ್ ಆಗಿ ತುಂಬಾನೆ ಫೇಮಸ್ ಆಗಿದ್ದಾರೆ. ಇವರು ಸೆಪ್ಟೆಂಬರ್ 17 1989 ರಂದು ಶಾಂತಿ ಗ್ರಾಮದಲ್ಲಿ ಜನಿಸಿದ್ದಾರೆ. ಇನ್ನು ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಶೆಟ್ಟಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಹರಿಕೃಷ್ಣ ಅವರು ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ ಮತ್ತು ಮ್ಯೂಸಿಕ್ ಕಂಪೋಸರ್ ಹಾಗೂ ಸಿನಿಮಾ ಪ್ರೊಡ್ಯೂಸರ್ ಕೂಡ ಹೌದು. ಇನ್ನೂ ಇವರು ನವೆಂಬರ್ 5 1974 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ವಾಣಿ ಹರಿಕೃಷ್ಣ ಅವರನ್ನು ಮಾಡಿಕೊಂಡಿದ್ದಾರೆ.
ಅರ್ಜುನ್ ಜನ್ಯ ಅವರು ಮೇ 13 1980 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಅರ್ಜುನ್ ಜನ್ಯ ಅವರು ಗೀತಾ ಅವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ.
ರವಿ ಬಸ್ರೂರ್ ಅವರು ಜನವರಿ 1 1984 ರಂದು ಜನಿಸಿದ್ದಾರೆ. ಇವರು ಗಾಯಕರ ಜೊತೆಗೆ ಹಾಡುಗಳ ರಚನೆಗಾರ ಮತ್ತು ಸಂಗೀತ ನಿರ್ದೇಶಕ ಕೂಡ ಆಗಿದ್ದಾರೆ. ಇವರು ಗೀತಾ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ಶಂಕರ್ ಮಹದೇವನ್ ಅವರು ಮಾರ್ಚ್ 3 1967 ರಂದು ಜನಿಸಿದ್ದಾರೆ. ಇವರು ಸೌತ್ ಇಂಡಿಯಾದ ಫೇಮಸ್ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಶಂಕರ್ ಮಹದೇವನ್ ಅವರು ಸಂಗೀತ ಮಹದೇವನ್ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ……