Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕನ್ನಡದ ಪ್ಯಾನ್ ಇಂಡಿಯಾ ನಟಿಯರಲ್ಲಿ ಒಬ್ಬ ರಾದ ಜೊತೆಯಲಿ ಧಾರಾವಾಹಿಯ ನಟಿ ಮೇಘ ಶೆಟ್ಟಿ , ಯಾವ ಚಿತ್ರ ಗೊತ್ತೇ ??

0

ಜೀ ಕನ್ನಡದಲ್ಲಿ ಹೆಚ್ಚು ಟಿ.ಆರ್.ಪಿ ಅನ್ನು ಹೊಂದಿರುವ ಧಾರಾವಾಹಿಗಳು ಸಾಕಷ್ಟು ಇವೆ ಎಂದು ಹೇಳಬಹುದು. ಅದರಲ್ಲಿ ಹೆಚ್ಚು ಟಿ.ಆರ್.ಪಿ ಅನ್ನು ಹೊಂದಿರುವ ಧಾರಾವಾಹಿ ಜೊತೆಜೊತೆಯಲಿ. ಇದು ಕಿರುತೆರೆಯಲ್ಲಿ ಸೆನ್ಸೇಷನ್ ಅನ್ನು ಕೂಡ ಮೂಡಿಸಿದೆ. ಈ ಧಾರಾವಾಹಿಯಲ್ಲಿ ಅನಿರುದ್ಧ್ ಜಟ್ಕರ್ ಅವರು ನಾಯಕ ನಟರಾಗಿ ನಟಿಸುತ್ತಿದ್ದು ಇವರಿಗೆ ಭಾರೀ ಯಶಸ್ಸು ಸಿಕ್ಕಿದೆ.

ಇನ್ನೂ ಈ ಧಾರಾವಾಹಿಯ ನಾಯಕಿ ನಟಿ ಮೇಘಾ ಶೆಟ್ಟಿ ಅವರು ಕೂಡ ಮೊದಲನೆಯದಾಗಿ ಕಿರುತೆರೆಗೆ ಕಾಲಿಟ್ಟು ಈಗ ಬೆಳ್ಳಿತೆರೆಗೆ ಕೂಡ ಕಾಲಿಟ್ಟಿದ್ದಾರೆ. ಹೌದು ಮೇಘಾ ಶೆಟ್ಟಿ ಅವರ ನಟನೆ ಅಭಿನಯ ಸರಳ ನಡವಳಿಕೆ ಎಲ್ಲಾ ಕರ್ನಾಟಕದ ಜನರಿಗೆ ತುಂಬಾ ಇಷ್ಟವಾಗಿದೆ. ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಭಾರೀ ಯಶಸ್ಸನ್ನು ಸಾಧಿಸಿದ ಮೇಘಾ ಶೆಟ್ಟಿ ಅವರಿಗೆ ಈಗ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶಗಳು ದೊರಕಿವೆ.

ಹೌದು ಇವರು ಮೊದಲನೆಯ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದ್ದು ಇದು ಬಿಡುಗಡೆಗಾಗಿ ಕಾಯುತ್ತಿದೆ. ಇವರ ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಮೇಘಾ ಶೆಟ್ಟಿಯವರಿಗೆ ಡಾರ್ಲಿಂಗ್ ಕೃಷ್ಣ ಅವರ ಅಭಿನಯದ ದಿಲ್ ಪಸಂದ್ ಚಿತ್ರದಲ್ಲಿ ನಟಿಸುವುದಕ್ಕೂ ಕೂಡ ಅವಕಾಶ ಸಿಕ್ಕಿದೆ.

ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಏನು ಎಂದರೆ ಮೇಘಾ ಶೆಟ್ಟಿ ಅವರಿಗೆ ಮತ್ತೊಂದು ದೊಡ್ಡ ಅವಕಾಶ ದೊರಕಿದೆ. ಹೌದು ಹೆಸರಿಡದ ಒಂದು ಹೊಸ ಸಿನಿಮಾಗೆ ಮೇಘಾ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ ಹಿಂದಿ ಮರಾಠಿ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ತಯಾರಾಗಲಿದೆ. ಈ ಸಿನಿಮಾಗೆ ಇಂಡಿಯನ್ ಫಿಲಂ ಫ್ಯಾಕ್ಟರಿ ಸಂಸ್ಥೆಯವರು ಬಂಡವಾಳ ಹಾಕುತ್ತಿದ್ದಾರೆ.

ಇದು ಒಂದು ದೊಡ್ಡ ಬಜೆಟ್ ಸಿನಿಮಾ ಆಗಿದೆ ಎಂದು ಹೇಳಬಹುದು. ಇನ್ನು ಈ ಸಿನಿಮಾವನ್ನು ಸಡಗರ ರಾಘವೇಂದ್ರ ಅವರು ನಿರ್ದೇಶನ ಮಾಡಲಿದ್ದಾರೆ ಮತ್ತು ಹೊಸ ಪ್ರತಿಭೆ ಕವೀಶ್ ಶೆಟ್ಟಿ ಅವರು ನಾಯಕರಾಗಿ ಅಭಿನಯಿಸುತ್ತಾರೆ. ಕವೀಶ್ ಅವರು ಜಿಲಕ ಎನ್ನುವ ಸಿನಿಮಾದಲ್ಲಿ ಮೊದಲು ನಟಿಸಿದ್ದಾರೆ. ಇದು ಅವರ ಎರಡನೇ ಸಿನಿಮಾವಾಗಿದೆ. ಇನ್ನು ಮೇಘಾ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್ ನಟಿ ಆಗುವುದಂತೂ ಸುಳ್ಳಲ್ಲ.

ಇನ್ನು ಈ ಚಿತ್ರದ ಮೂಲಕ ಮೇಘಾ ಶೆಟ್ಟಿ ಅವರು ಪಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ. ಇನ್ನೂ ಕಿರುತೆರೆಯ ಅಭಿಮಾನಿಗಳು ಮೇಘಾ ಶೆಟ್ಟಿ ಅವರನ್ನು ಕುರಿತು ನೀವು ಯಾವುದೇ ಕಾರಣಕ್ಕೂ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅವರುಗಳು ದನ್ನು ಬಿಡಬೇಡಿ ಎಂದು ಹೇಳಿದ್ದಾರೆ. ಇದಕ್ಕೆ ಒಂದು ಸಂದರ್ಶನದಲ್ಲಿ ಮೇಘಾ ಶೆಟ್ಟಿ ಅವರು ನಾನು ಎಷ್ಟೇ ದೊಡ್ಡ ಸ್ಟಾರ್ ಆದರೂ ಕೂಡ ಈ ಧಾರಾವಾಹಿಯನ್ನು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ……

Leave A Reply