ಕನ್ನಡದ ಖ್ಯಾತ ಬಾಲ ನಟಿ ಕೀರ್ತನಾ ಈಗ ಹೇಗಿದ್ದಾರೆ ಗೊತ್ತೇ ಎಷ್ಟು ಬದಲಾಗಿದ್ದಾರೆ, ಎಂತ ದೊಡ್ಡ ಅಧಿಕಾರಿಯಾಗಿದ್ದಾರೆ ಗೊತ್ತೇ ??
ಕನ್ನಡದ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಕೀರ್ತನಾ ಅವರು ಶಿವರಾಜ್ ಕುಮಾರ್, ಉಪೇಂದ್ರ, ಶಶಿಕುಮಾರ್, ರಮೇಶ ಅರವಿಂದ್, ಮಾಲಾಶ್ರೀ ಮುಂತಾದ ದೊಡ್ಡ ದೊಡ್ಡ ಕಲಾವಿದರ ಸಿನಿಮಾಗಳಲ್ಲಿ ಇವರು ಬಾಲ ನಟಿಯಾಗಿ ಅಭಿನಯ ಮಾಡಿದ್ದಾರೆ. ಹೌದು ಕೀರ್ತನಾ ಅವರು ದೊರೆ ಚಿತ್ರದ ಮೂಲಕ ಬಾಲ ನಟಿಯಾಗಿ ತಮ್ಮ ನಟನೆಯನ್ನು ಪ್ರಾರಂಭ ಮಾಡಿಕೊಂಡು ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು.
ಇದಾದ ಮೇಲೆ ಸಿಂಹಾದ್ರಿ, ಕರ್ಪೂರದ ಗೊಂಬೆ, ಸರ್ಕಲ್ ಇನ್ಸ್ಪೆಕ್ಟರ್, ಹಬ್ಬ, ಎ ಹೀಗೆ ಸುಮಾರು 32 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಇವರು ತಮ್ಮ ಮುದ್ದಾದ ನಟನೆ ಮತ್ತು ಸಂಭಾಷಣೆಗಳಿಂದ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದರು. ಹಾಗಾಗಿ ಇವರ ನಟನೆಗೆ ಆಗಲೇ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ಸಹ ದೊರಕಿವೆ.
ಇನ್ನು ಇವರು ಬಾಲ ನಟಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. ಆದರೆ ತದನಂತರ ಇವರು ಸಿನಿಮಾ ರಂಗದಿಂದ ದೂರ ಆದರು. ಸಿನಿಮಾ ರಂಗದಿಂದ ದೂರವಾದ ಮೇಲೆ ಕೀರ್ತನಾ ಅವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ ಇಲ್ಲಿ ತಿಳಿಯೋಣ ಬನ್ನಿ.
ಬಾಲ ಕಲಾವಿದರಲ್ಲಿ ನಟಿ ಕೀರ್ತನಾ ಅವರು ಕೂಡ ಒಬ್ಬರಾಗಿ ತುಂಬಾನೇ ಮಿಂಚಿದ್ದಾರೆ. ಇನ್ನು ಇವರು ಈಗ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೌದು ಕೀರ್ತನಾ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 167ನೆಯ ರಾಂಕ್ ಅನ್ನು ಪಡೆದು ಈಗ ಐಎಎಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಟಿ ಕೀರ್ತನಾ ಅವರ ತಂದೆಗೆ ಕೀರ್ತನಾ ಅವರು ಸರ್ಕಾರ ಕೆಲಸ ಮಾಡಬೇಕು ಎನ್ನುವ ಆಸೆ ಇತ್ತು.
ಆದರೆ ದುರದೃಷ್ಟವಶಾದ ಕೀರ್ತನಾ ಅವರು ತಮ್ಮ ತಂದೆಯನ್ನು 2013 ರಲ್ಲಿ ಕಳೆದುಕೊಂಡರು. ಇನ್ನು ಅವರ ತಂದೆಯ ಆಸೆಯಂತೆ ತುಂಬಾ ಕಷ್ಟಪಟ್ಟು ಓದಿ ಈಗ ಐಎಎಸ್ ಅಧಿಕಾರಿಯಾಗಿದ್ದಾರೆ. ಕೀರ್ತನಾ ಅವರು ಸಂಸ್ಕೃತಿ ಮತ್ತು ಮಹಿಳಾ ಕಲ್ಯಾಣದಲ್ಲಿ ಆಸಕ್ತಿ ಹೊಂದಿದ್ದು ಇವರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೀರ್ತನಾ ಅವರು ಯುವ ಪ್ರತಿಭೆ ಆಗಿದ್ದು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಲ್ಲರನ್ನು ಹೆಮ್ಮೆ ಪಡುವಂತೆ ಮಾಡಿ ಸರ್ಕಾರ ಕೆಲಸ ಮಾಡುತ್ತಿದ್ದಾರೆ. ಇನ್ನು ಇವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಫೇಮಸ್ ಬಾಲನಟಿ ಎಂದರೆ ಅದು ನಮ್ಮೆಲ್ಲರಿಗೂ ಹೆಮ್ಮೆ…..