ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಖ್ಯಾತ ಸ್ಟಾರ್ ನಟಿಯರು ಇದ್ದಾರೆ. ಅದರಲ್ಲಿ ನಟಿ ಹರಿಪ್ರಿಯಾ ಅವರು ಕೂಡ ಒಬ್ಬರು ಎಂದು ಹೇಳಬಹುದು. ಹರಿಪ್ರಿಯಾ ಅವರು ಅಕ್ಟೋಬರ್ 29 1991 ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದ್ದಾರೆ. ಇವರಿಗೆ ಈಗ 30 ವರ್ಷಗಳಾಗಿವೆ. ಇನ್ನು ಹರಿಪ್ರಿಯಾ ಅವರ ಮೊದಲಿನ ಹೆಸರು ಶ್ರುತಿ ಚಂದ್ರಸೇನ.
ತದನಂತರ ಇವರು ಸಿನಿಮಾ ಕೆರಿಯರ್ ಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಇನ್ನೂ ಹರಿಪ್ರಿಯಾ ಅವರು ತಮ್ಮ ಶಾಲೆಯ ಶಿಕ್ಷಣವನ್ನು ಮುಗಿಸಿದ ನಂತರ ಭರತನಾಟ್ಯ ನೃತ್ಯವನ್ನು ಕಲಿತುಕೊಂಡರು. ಇದಾದ ಮೇಲೆ ಇವರ ಕುಟುಂಬದವರು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಂದು ವಾಸ ಮಾಡುತ್ತಿದ್ದಾರೆ. ಹರಿಪ್ರಿಯಾ ಅವರು ಬೆಂಗಳೂರಿನಲ್ಲಿ ಪಿಯುಸಿ ಪದವಿಯನ್ನು ಕೂಡ ಮಾಡಿ ಮುಗಿಸಿದ್ದಾರೆ.
ಇನ್ನೂ ಹರಿಪ್ರಿಯಾ ಅವರು 2007 ರಲ್ಲಿ ತುಳು ಭಾಷೆಯಲ್ಲಿ ಬಡಿ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇದಾದ ಮೇಲೆ ನಮ್ಮ ಕನ್ನಡದಲ್ಲಿ 2008 ರಲ್ಲಿ ಮನಸುಗಳ ಮಾತು ಮಧುರ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ತದನಂತರ ವಸಂತಕಾಲ, ಈ ಸಂಭಾಷಣೆ, ಮಳೆ ಬರಲಿ ಮಂಜು ಇರಲಿ, ಕಳ್ಳರ ಸಂತೆ, ಕಿಲಾಡಿ ಕಿಟ್ಟಿ, ಸಾಗರ್, ಉಗ್ರಂ, ರನ್ನ, ಬುಲೆಟ್ ಬಸ್ಯಾ, ಬಲಿ, ಚೂರಿ, ರಣತಂತ್ರ, ಅಂಜನಿಪುತ್ರ, ಬೆಲ್ ಬಾಟಮ್, ಕುರುಕ್ಷೇತ್ರ, ಕಥಾಸಂಗಮ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಹರಿಪ್ರಿಯಾ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಅಭಿನಯ ಮಾಡಿದ್ದಾರೆ. ಇನ್ನೂ ಸಾಕಷ್ಟು ಚಿತ್ರಗಳ ಶೂಟಿಂಗ್ ಈಗಾಗಲೇ ಮುಗಿದಿದ್ದು ಇವುಗಳು ತೆರೆಯ ಮೇಲೆ ಬರಲು ಕಾಯುತ್ತಿವೆ. ಇನ್ನು ಹರಿಪ್ರಿಯಾ ಅವರ.
ಸಾಕಷ್ಟು ಅಭಿಮಾನಿಗಳಿಗೆ ಅವರ ಮನೆಯ ಒಳಗೆ ಹೀಗಿದೆ ಮತ್ತು ಮನೆ ಹೇಗಿದೆ ಎಂದು ತಿಳಿದುಕೊಳ್ಳುವುದಕ್ಕೆ ತುಂಬ ಕುತೂಹಲ ಇರುತ್ತದೆ. ಹಾಗಾದರೆ ಬನ್ನಿ ನಟಿ ಹರಿಪ್ರಿಯಾ ಅವರ ಮನೆ ಹೇಗಿದೆ ಮತ್ತು ಒಳಗೆ ಇರುವ ಕೆಲ ದೃಶ್ಯಗಳು ನಿಮಗಾಗಿ ಇಲ್ಲಿವೆ…..