Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕನ್ನಡದಲ್ಲಿ ಟೈಗರ್ ಪ್ರಭಾಕರ್ ನಟಿಸಿ ನಿರ್ದೇಶಿಸಿದ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ!! ನಿಜಕ್ಕೂ ಗ್ರೇಟ್ ಕಣ್ರೀ!!

0

ಕನ್ನಡದ ಖ್ಯಾತ ನಟ ಟೈಗರ್ ಪ್ರಭಾಕರ್ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲ ಇವರು ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡಿದ್ದಾರೆ. ಎಲ್ಲಾ ವಿಭಾಗದಲ್ಲೂ ಕೂಡ ಟೈಗರ್ ಪ್ರಭಾಕರ್ ಅವರು ಅಗ್ರ ಸ್ಥಾನದಲ್ಲಿ ನಿಂತಿದ್ದರು. ಇನ್ನೂ ಟೈಗರ್ ಪ್ರಭಾಕರ್ ಅವರ ವೈಯಕ್ತಿಕ ವಿಚಾರಗಳನ್ನು ಬಿಟ್ಟರೆ ಅವರು ಎಲ್ಲಾ ರೀತಿಯಲ್ಲೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿ ಇದ್ದರು.

ಇವರನ್ನು ನೋಡಿ ತುಂಬಾ ಜನರು ಕಲಿತುಕೊಳ್ಳುವ ವಿಷಯಗಳು ಸಾಕಷ್ಟು ಇವೆ. ಇನ್ನೂ ಟೈಗರ್ ಪ್ರಭಾಕರ್ ಅವರು ಆಗಿನ ಕಾಲದಲ್ಲಿಯೇ ಎಲ್ಲಾ ನಟರು ಮೆಚ್ಚುವಂತಹ ರೀತಿಯಲ್ಲಿ ಯೋಚನೆ ಮಾಡುತ್ತಿದ್ದರು. ಹೌದು ಟೈಗರ್ ಪ್ರಭಾಕರ್ ಅವರ ನಿರ್ದೇಶನ ಮತ್ತು ನಿರ್ಮಾಣ ಮಾಡುವ ಯಾವುದೇ ಸಿನಿಮಾಗಳು ಆದರೂ ಕೂಡ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅದೇ ಸಿನಿಮಾ ಮಾಡಿದರೆ ಯಶಸ್ಸು ಸಿಗುತ್ತದಾ ಎಂದು ಎಲ್ಲಾ ರೀತಿಯಲ್ಲಿ ಯೋಚನೆ ಮಾಡುತ್ತಿದ್ದರು.

ಇದರ ಜೊತೆಗೆ ರಜನಿಕಾಂತ್ ಅವರು ಕೂಡ ತಮ್ಮ ಸಿನಿಮಾಗಳಲ್ಲಿ ಯಾವಾಗ ಟೈಗರ್ ಪ್ರಭಾಕರ್ ಅವರು ನಟಿಸುತ್ತಾರೆ ಎಂದು ಕಾದು ನೋಡುತ್ತಿದ್ದರು. ಏಕೆಂದರೆ ಟೈಗರ್ ಪ್ರಭಾಕರ್ ಅವರು ನಟಿಸಿದ ಎಲ್ಲಾ ಸಿನಿಮಾಗಳು ಬಹುತೇಕ ಸೂಪರ್‌ ಮತ್ತು ನಿರ್ದೇಶನ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಟೈಗರ್ ಪ್ರಭಾಕರ್ ಅವರ ಬಾಂಬೆ ದಾದಾ ಸಿನಿಮಾ 1991 ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾಗೆ ಮೊದಲು ಮುಟ್ಟುದ್ರೆ ತಟ್ಟಿಬಿಡ್ತಿನಿ ಎನ್ನುವ ಟೈಟಲ್ ಇತ್ತು.

ಇದು ಟೈಗರ್ ಪ್ರಭಾಕರ್ ಅವರಿಗೂ ತುಂಬಾನೇ ಇಷ್ಟವಿತ್ತು. ಆದರೆ ನಿರ್ಮಾಪಕರ ಕೆಲ ಅನಿವಾರ್ಯತೆಗಳಿಂದ ಇದರ ಹೆಸರನ್ನು ಬಾಂಬೆ ದಾದಾ ಎನ್ನುವುದಕ್ಕೆ ಬದಲಿಸಿದರು. ಹಾಗೆಯೇ ಈ ಸಿನಿಮಾ ಕೂಡ ಭಾರಿ ಯಶಸ್ಸನ್ನು ಸಾಧಿಸಿತು. ಈ ಸಿನಿಮಾವನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರು ನೋಡಿ ಟೈಗರ್ ಪ್ರಭಾಕರ್ ಅವರು ಆಗಿನ ಕಾಲದಲ್ಲಿಯೇ ಎಷ್ಟು ಚೆನ್ನಾಗಿ ಈ ಸಿನಿಮಾವನ್ನು ನಿರೂಪಣೆ ಮಾಡಿದ್ದಾರೆ ಎಂದು ಶಾಕ್ ಗೆ ಒಳಗಾಗಿದ್ದರು.

ಇದಾದ ಮೇಲೆ ಬಾಂಬೆ ದಾದಾ ಚಿತ್ರವು ತಮಿಳಿಗೆ ರೀಮೇಕ್ ಆಗುತ್ತಿದೆ ಎಂದಾಗ ನಿರ್ಮಾಪಕರು ನಿರ್ದೇಶಕರು ಎಲ್ಲರೂ ಕೂಡ ಸೇರಿದ್ದರು. ಏಕೆಂದರೆ ಆಗಲೇ ರಜನಿಕಾಂತ್ ಅವರು ತಮಿಳಿನಲ್ಲಿ ದೊಡ್ಡ ನಟರಾಗಿ ಟ್ರೆಂಡನ್ನು ಮೂಡಿಸಿದ್ದರು. ಇದರ ಜೊತೆಗೆ ಟೈಗರ್ ಪ್ರಭಾಕರ್ ಅವರಿಗೂ ರಜನಿಕಾಂತ್ ಅವರ ಮೇಲೆ ತುಂಬಾ ಅಭಿಮಾನವಿದ್ದ ಕಾರಣ ತಮ್ಮ ಸಿನಿಮಾವನ್ನು ರೀಮೇಕ್ ಮಾಡುವುದಕ್ಕೆ ಸಂತೋಷವಾಗಿ ನೀಡಿದರು.

ಹೀಗಾಗಿ ಕನ್ನಡದ ಬಾಂಬೆ ದಾದಾ ಎನ್ನುವ ಹೆಸರಿನ ಸಿನಿಮಾ ಪಾಂಡ್ಯನ್ ಎನ್ನುವ ಹೆಸರಿನಲ್ಲಿ ತಮಿಳು ಸಿನಿಮಾಗೆ ಬಿಡುಗಡೆಯಾಯಿತು. ಈ ಸಿನಿಮಾದಿಂದ ರಜನಿ ಕಾಂತ್ ಅವರು ಇನ್ನೂ ಮತ್ತಷ್ಟು ಪ್ರಖ್ಯಾತ ಗಳಿಸಿದರು ಜೊತೆಗೆ ಸಿನಿಮಾ ಕೂಡ ಸೂಪರ್ ಡೂಪರ್ ಹಿಟ್ ಆಯಿತು…..

Leave A Reply