ಒಳ್ಳೆಯ ಹುಡುಗಿಯ ಜೊತೆಗೆ ಚಿನ್ನ ಕಾರು ಹಣ ಕೊಟ್ಟು ಮದುವೆ ಮಾಡಿದರು.. ತದನಂತರ 3 ತಿಂಗಳಿಗೆ ಆಗಿದ್ದೇನು ಗೊತ್ತಾ..!! ಎಲ್ಲರೂ ಬೆಚ್ಚಿ ಬೀಳಿಸಿದ್ದ ಘಟನೆ ಇದು !!
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ತುಂಬ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಈ ವಿಚಾರದಲ್ಲಿ ಯೋಚನೆ ಮಾಡಿ ಮುಂದಿನ ಹೆಜ್ಜೆಯನ್ನು ಇಡಬೇಕು. ಇನ್ನು ನಾವು ಹೇಳಲು ಹೊರಟಿರುವ ಕಥೆಯು ಕೇರಳದಲ್ಲಿ ಕೆಲ ವರ್ಷಗಳ ಹಿಂದೆ ನಡೆದಿತ್ತು. ಕೇರಳದ ನಿವಾಸಿಯಾಗಿರುವ ಸುಚಿತ್ರ ಎನ್ನುವವರು ತನ್ನ ತಾಯಿಯ ಜೊತೆಗೆ ಫೋನ್ ನಲ್ಲಿ ಮಾತನಾಡಿ ರಾತ್ರಿ ಮಲಗಿರುತ್ತಾರೆ.
ಆದರೆ ಮರುದಿನ 11 ಗಂಟೆಗೆ ತನ್ನ ಮಗಳು ಇಹಲೋಕಕ್ಕೆ ತ್ಯಜಿಸುತ್ತಾಳೆ ಎಂಬ ಸುದ್ದಿಯು ಕೇಳಿಬರುತ್ತದೆ. ರಾತ್ರಿಯಷ್ಟೇ ನನ್ನ ಮಗಳ ಜೊತೆ ಮಾತನಾಡಿದೆ ಆದರೆ ಈಗ ಕೊನೆ ಉಸಿರು ಎಳೆದಿದ್ದಾಳೆ ಇದು ಹೇಗೆ ಸಾಧ್ಯ ಎಂದು ಆಕೆಯ ತಾಯಿ ಗಾಬರಿಗೊಂಡರು. ಹೌದು ಸುಚಿತ್ರಾ ಅವರಿಗೆ 19 ವರ್ಷಗಳು ಆಗಿತ್ತು. ಇವರ ತಂದೆಯ ಹೆಸರು ಸುನಿಲ್ ಮತ್ತು ತಾಯಿಯ ಹೆಸರು ಸುನೀತಾ.
ಆದರೆ ಸುಚಿತ್ರಾ ಅವರ ತಂದೆ ತಾಯಿ ಒಬ್ಬ ಜ್ಯೋತಿಷಿ ಹೇಳಿರುವ ಮಾತನ್ನು ಕೇಳಿ ಜೀವನದಲ್ಲಿ ದೊಡ್ಡ ತಪ್ಪನ್ನು ಮಾಡಿದರು. ಹೌದು ಆ ಜ್ಯೋತಿಷಿ ನಿಮ್ಮ ಮಗಳಿಗೆ 20 ವರ್ಷಗಳ ಒಳಗೆ ಮದುವೆ ಮಾಡಿ ಇಲ್ಲವಾದರೆ 27 ವರ್ಷದವರೆಗೂ ಕಂಕಣಭಾಗ್ಯ ಕೂಡಿ ಬರುವುದಿಲ್ಲ ಎಂದು ಹೇಳಿದ್ದರು. ಇದರಿಂದ ತಂದೆ ತಾಯಿ ಇಬ್ಬರೂ ಯೋಚನೆಗೆ ಒಳಗಾಗಿ ತಮ್ಮ ಮಗಳಿಗೆ ಆರ್ಮಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗನ ಜೊತೆಗೆ ಮದುವೆ ಮಾಡಲು ಯೋಚಿಸಿದ್ದರು.
ಅದರಂತೆ ಇಬ್ಬರ ಕುಟುಂಬವು ಮದುವೆಗೆ ಒಪ್ಪಿ ನಿಶ್ಚಯ ಮಾಡುತ್ತಾರೆ. ಇನ್ನೂ ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನು ಕ್ರಮ ಆಗಿದ್ದರೂ ಕೂಡ ಅದು ಈಗಲೂ ಕೂಡ ಪಾಲನೆಯಲ್ಲಿದೆ. ಹುಡುಗನ ಹೆಸರು ವಿಷ್ಣು ಈತನ ಮನೆಯವರು ಸುಚಿತ್ರಾ ಅವರ ತಂದೆ ತಾಯಿಗೆ 80 ಲಕ್ಷ ಚಿನ್ನ ಮತ್ತು ಒಂದು ಕಾರನ್ನು ನೀಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದರು.
ಆದರೆ ಸುಚಿತ್ರಾ ಅವರು ಮಧ್ಯಮ ವರ್ಗದ ಕುಟುಂಬದವರು ಆಗಿದ್ದರಿಂದ ನಮಗೆ ಅಷ್ಟೊಂದು ಕೊಡುವುದಕ್ಕೆ ಆಗುವುದಿಲ್ಲ 20 ಲಕ್ಷ ರೂ ಮೌಲ್ಯದ ಚಿನ್ನ ಮತ್ತು 7 ಲಕ್ಷ ರೂಪಾಯಿಯ ಗಾಡಿಯನ್ನು ನೀಡಿ ಮದುವೆಯನ್ನು 32 ಲಕ್ಷ ರೂ ಗಳನ್ನು ಖರ್ಚು ಮಾಡಿ ಮಾಡುತ್ತೇವೆ ಎಂದು ಹೇಳಿದರು. ಇನ್ನೂ ಸುಚಿತ್ರ ಮತ್ತು ವಿಷ್ಣು ನಿಶ್ಚಿತಾರ್ಥದ ಸಮಯದಲ್ಲಿ ವಿಷ್ಣು ತಾಯಿ ಸುಚಿತ್ರಾ ಅವರ ತಂದೆಯ ಬಳಿ 10 ಲಕ್ಷ ಹಣ ನೀಡುವುದಾಗಿ ಬೇಡಿಕೆ ಇಟ್ಟಿದ್ದರು.
ಆದರೆ ಸುನಿಲ್ ಅವರು ಪಿಂಚಣಿ ಹಣ ಬಂದ ತಕ್ಷಣ ಕೊಡುತ್ತೇನೆ ಎಂದು ಹೇಳಿದ್ದರು. ಇದಾದ ಮೇಲೆ ಇವರ ಮದುವೆ ಕೂಡ ಜರುಗಿತು. ಮದುವೆಯ ನಂತರ ವಿಷ್ಣು ಉತ್ತರಾಖಾಂಡಕ್ಕೆ ಸೈನ್ಯದ ಕೆಲಸಕ್ಕೆ ಹೋಗುತ್ತಾರೆ. ಇದಾದ ಮೇಲೆ ಸುಚಿತ್ರಾ ಅವರಿಗೆ ತಮ್ಮ ಅತ್ತೆ ವರದಕ್ಷಿಣೆ ದುಡ್ಡಿಗಾಗಿ ಪ್ರತಿದಿನ ಪೀಡಿಸುತ್ತಿದ್ದರು. ಇದಕ್ಕಾಗಿ ವಿಷ್ಣು ತಾಯಿ ಸುಚಿತ್ರ ಬಳಿ ಇದ್ದ ಲಾಕರ್ ಕೀಯನ್ನು ತೆಗೆದುಕೊಂಡು ನಿನ್ನ ತಂದೆ ಯಾವಾಗ 10 ಲಕ್ಷ ಹಣ ನೀಡುತ್ತಾರೆ ಆಗ ಇದನ್ನು ಕೊಡುತ್ತೇನೆ ಎಂದು ಹೇಳಿದ್ದಳು.
ಸುಚಿತ್ರಾಗೆ ತನ್ನ ಅತ್ತೆ ಯಾವುದಾದರೂ ಒಂದು ಕಾರಣಕ್ಕಾಗಿ ಕಾಟವನ್ನು ಕೊಡುತ್ತಲೇ ಇದ್ದರು. ಇದನ್ನು ತಾಳಲಾರದೆ ಸುಚಿತ್ರಾ ತಮ್ಮ ತಾಯಿಯ ಬಳಿ ಹೇಳಿಕೊಂಡಿದ್ದರು. ಈ ವಿಷಯವನ್ನು ರಾತ್ರಿ ಸಮಯದಲ್ಲಿ ಹೇಳಿಕೊಂಡಿದ್ದರು. ಆದರೆ ಮರುದಿನ ಬೆಳಗ್ಗೆ ಸುಚಿತ್ರ ಸಾವಿನ ಸುದ್ದಿ ಕೇಳಿ ಬಂತು. ಈ ರೀತಿಯ ದುರ್ಘಟನೆಗಳು ಕೇರಳಾದಲ್ಲಿ ಜರುಗುತ್ತಲೇ ಇವೆ. ಇವುಗಳು ಪ್ರತಿದಿನ ಯಾವುದಾದರೂ ಒಂದು ಕಾರಣಕ್ಕೆ ಈ ರೀತಿಯ ದುರಂತಗಳು ನಡೆಯುತ್ತಲೇ ಇವೆ…..