ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನೋಡಿ ಒಬ್ಬ ಪುಟ್ಟ ಬಾಲಕ ಅಪ್ಪು ಅಂಕಲ್ ಎಂದು ಕರೆದನು. ಏಕೆಂದರೆ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮರ್ ಅವರಿಬ್ಬರು ನೋಡುವುದಕ್ಕೆ ಸ್ವಲ್ಪ ಒಂದೇ ರೀತಿ ಇದ್ದಾರೆ.
ಅದರ ವೀಡಿಯೋವನ್ನು ಇಲ್ಲಿ ನೀವು ನೋಡಬಹುದು. ಇನ್ನೂ ಡಾ.ರಾಜ್ ಕುಮಾರ್ ಅವರ 3 ಜನ ಮಕ್ಕಳು ಕೂಡ ಅವರ ತಂದೆಯ ಮಾರ್ಗದಲ್ಲಿಯೇ ನಡೆಯುತ್ತಾ ದೊಡ್ಮನೆ ಮಕ್ಕಳು ಎಂದು ಎನಿಸಿಕೊಂಡಿದ್ದಾರೆ.
ಇನ್ನು ಪುನೀತ್ ಅವರ ಅಗಲಿಕೆ ಈಗಲೂ ಎಲ್ಲರ ಮನಸ್ಸನ್ನು ನೋವನ್ನುಂಟು ಮಾಡುತ್ತದೆ. ಪುನೀತ್ ಅವರು ಅಕ್ಟೋಬರ್ 29 2021 ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. ಇವರ ಅಕಾಲಿಕ ಮರಣವನ್ನು ಯಾರೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಪುನೀತ್ ಅವರು ಮಾಡಿದ ಸಾಕಷ್ಟು ಸಾಮಾಜಿಕ ಸೇವೆಗಳು ಅವರ ಒಳ್ಳೆಯ ಗುಣ ಒಳ್ಳೆಯ ವ್ಯಕ್ತಿತ್ವ ಅಭಿಮಾನಿಗಳಿಗೆ ತೋರಿಸುವ ಪ್ರೀತಿ ಎಲ್ಲರಿಗೂ ತುಂಬ ಇಷ್ಟವಾಗುತ್ತದೆ.
ಇನ್ನು ಪುನೀತ್ ಅವರು ಭೋಜನ ಪ್ರಿಯರು. ಇವರು ಎಲ್ಲಿ ಊಟ ಚೆನ್ನಾಗಿದ್ದರೂ ಅದು ಎಲ್ಲಿಯಾದರೂ ಸರಿ ಅಲ್ಲೇ ಕೂತು ತಿನ್ನುತ್ತಾರೆ. ದೊಡ್ಮನೆ ಕುಟುಂಬದಲ್ಲಿ ಹುಟ್ಟಿದ ಪುನೀತ್ ಅವರ ಸರಳತೆ ಹೇಗಿತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಇನ್ನೂ ಅವರ ಅಭಿಮಾನಿಗಳು ಕೂಡ ಪುನೀತ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಾ ಸಾಕಷ್ಟು ಬಡ ಜನರಿಗೆ ಸಹಾಯ ಮಾಡುತ್ತಿದ್ದಾರೆ.
ಪುನೀತ್ ಅವರು ಮರಣ ಹೊಂದಿ 5 ತಿಂಗಳು ಆಗುತ್ತಾ ಬರುತ್ತಿದ್ದರೂ ಕೂಡ ಅವರನ್ನು ಯಾರೂ ಕೂಡ ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಅವರ ಹುಟ್ಟುಹಬ್ಬದ ದಿನದಂದೇ ಅಂದರೆ ಮಾರ್ಚ್ 17 2022 ರಂದು ಅವರ ಕೊನೆಯ ಚಿತ್ರ ಜೇಮ್ಸ್ ಸಿನಿಮಾವನ್ನು ಎಲ್ಲಾ ಕಡೆ ಭರ್ಜರಿಯಾಗಿ ಬಿಡುಗಡೆ ಮಾಡಲಾಯಿತು.
ಪುನೀತ್ ಅವರ ಕೊನೆಯ ಸಿನಿಮಾವನ್ನು ನೋಡುವುದಕ್ಕೆ ಬಹುತೇಕ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು ಅದನ್ನು ನೋಡಿ ಸಿನಿಮಾವನ್ನು ಯಶಸ್ವಿಗೊಳಿಸಿದ್ದಾರೆ. ಇನ್ನೂ ಕೆಲವರು ಅಪ್ಪು ಅವರ ಕೊನೆಯ ಚಿತ್ರವೆಂದು ಆ ಸಿನಿಮಾವನ್ನು ಇನ್ನೂ ನೋಡೇ ಇಲ್ಲ…..