ಒಬ್ಬ ತಂದೆ ತನ್ನ ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಏನೆಂದು ಬರೆಸಿದ್ದಾರೆ ಗೊತ್ತಾ.. ಇದನ್ನು ನೋಡಿದ ಸಂಬಂಧಿಕರು ಮೂರ್ಛೆ ಹೋಗಿದ್ದಾರೆ..!!
ತಂದೆ ತಾಯಂದಿರಿಗೆ ತಮ್ಮ ಮಕ್ಕಳ ಮದುವೆ ಎಂದರೆ ತಮ್ಮ ಜೀವನದಲ್ಲೇ ಒಂದು ದೊಡ್ಡ ಹಬ್ಬ ಇದ್ದ ಹಾಗೆ. ಸಾಮಾನ್ಯವಾಗಿ ತಮ್ಮ ಮಕ್ಕಳ ಮದುವೆಯ ಲಗ್ನ ಪತ್ರಿಕೆ ತುಂಬಾ ವಿಶೇಷವಾಗಿ ಇರಬೇಕು ಎಂದು ಹೇಳಿ ಸಾಕಷ್ಟು ವಿವಿಧವಾದ ಡಿಸೈನ್ ಗಳನ್ನು ಮಾಡಿಸುತ್ತಾರೆ. ಇದರಿಂದ ಓದುವ ಜನರಿಗೆ ಆಕರ್ಷಣೆ ಆಗುತ್ತದೆ ಎಂದು ಕೆಲವರು ಮಾಡಿಸುತ್ತಾರೆ.
ಆದರೆ ಒಬ್ಬ ತಂದೆ ತನ್ನ ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಏನೆಂದು ಬರೆಸಿದ್ದಾರೆ ಗೊತ್ತಾ. ಈ ಸಾಮಾನ್ಯ ರೈತನಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡ ಮಗಳಿಗೆ ಈಗಾಗಲೇ ಮದುವೆ ಮಾಡಿದ್ದು ಈಗ ಚಿಕ್ಕ ಮಗಳಿಗೆ ಮದುವೆಯನ್ನು ಮಾಡಿದ್ದಾರೆ. ತನ್ನ ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಏನೆಂದು ಬರೆಸಿದ್ದಾರೆ ಗೊತ್ತಾ. ಈ ಲಗ್ನ ಪತ್ರಿಕೆಯನ್ನು ನೋಡಿದರೆ ನಿಜಕ್ಕೂ ಬೆರಗಾಗುತ್ತದೆ.
ಈ ರೈತ ತೆಲಂಗಾಣ ರಾಜ್ಯಕ್ಕೆ ಸೇರಿದ್ದಾನೆ. ಇನ್ನೂ ಇವರ ಮಗಳ ಮದುವೆ ನಿಶ್ಚಯವಾಗಿದ್ದ ಕೂಡಲೇ ಲಗ್ನಪತ್ರಿಕೆಯನ್ನು ತುಂಬ ವಿಶೇಷವಾಗಿ ಮಾಡಿಸಿದ್ದಾರೆ. ಈ ರೈತನ ದೊಡ್ಡ ಮಗಳ ಮದುವೆಗೆ ಸಾಕಷ್ಟು ಜನರು ಕುಡಿದು ಬಂದು ಕಿರಿಕಿರಿಯನ್ನು ಉಂಟು ಮಾಡಿದ್ದರು. ಹಾಗಾಗಿ ಎರಡನೆಯ ಮಗಳ ಮದುವೆಯ ಲಗ್ನಪತ್ರಿಕೆಯಲ್ಲಿ ದಯವಿಟ್ಟು ಯಾರೂ ಕೂಡ ಕುಡಿದು ಮದುವೆಗೆ ಬರಬೇಡಿ ಎಂದು ಬರೆಸಿದ್ದಾರೆ.
ಹೌದು ಇದನ್ನು ಕೇಳಿದರೆ ನಿಜಕ್ಕೂ ಒಂದು ರೀತಿ ಆಶ್ಚರ್ಯವೆನಿಸುತ್ತದೆ. ಆದರೆ ಇದು ನಿಜ ಏಕೆಂದರೆ ತನ್ನ ದೊಡ್ಡ ಮಗಳ ಮದುವೆಯಲ್ಲಿ ಸಾಕಷ್ಟು ಜನರು ಕುಡಿದು ಬಂದು ಬಾಯಿಗೆ ಬಂದ ಹಾಗೆ ಮಾತನಾಡಿ ತುಂಬಾ ರಂಪಾಟವನ್ನೇ ಮಾಡಿದ್ದರಂತೆ. ಇದರ ಕಾರಣಕ್ಕಾಗಿ ಈ ರೈತನು ತನ್ನ ಎರಡನೆಯ ಮಗಳ ಲಗ್ನಪತ್ರಿಕೆಯಲ್ಲಿ ಕುಡಿದು ಬರುವುದಾದರೆ ಮದುವೆಗೆ ಬರಲೇಬೇಡಿ ಎಂದು ಬರೆಸಿದ್ದಾರೆ.
ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಸಾಲುಗಳನ್ನು ನಾವು ಎಲ್ಲಾ ಕಡೆ ನೋಡುತ್ತೇವೆ. ಇದು ನಿಜಕ್ಕೂ ಆರೋಗ್ಯವನ್ನು ಹಾಳು ಮಾಡುತ್ತದೆ ಹೌದು. ಇದೀಗ ಈ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನರು ಸಾಕಷ್ಟು ಲೈಕ್ ಗಳನ್ನು ನೀಡುತ್ತಿದ್ದಾರೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆ ರೈತ ಮಾಡಿಸಿದ್ದ ಲಗ್ನ ಪತ್ರಿಕೆಯನ್ನು ನೀವು ಇಲ್ಲಿ ನೋಡಬಹುದು…..