ಒಂದೆರಡು ಸಿನಿಮಾಗಳ ಮೂಲಕ ಕನ್ನಡಿಗರಿಗೆ ಮೋಡಿ ಮಾಡಿದ ನಟಿಯರು, ಇವರೆಲ್ಲ, ಈಗ ಇವರೆಲ್ಲ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತೇ ??
ನಮ್ಮ ಸ್ಯಾಂಡಲ್ ವುಡ್ ಗೆ ಸಾಕಷ್ಟು ಹೊಸ ಹೊಸ ನಟಿಯರು ಬರುತ್ತಾರೆ. ಹಾಗೆಯೇ ಸಿನಿಮಾ ರಂಗದಿಂದ ಕೂಡ ಕೆಲವರು ದೂರ ಆಗುತ್ತಾರೆ. ಅದರಲ್ಲಿ ಕೆಲವರು ಮಾತ್ರ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ವರ್ಷಗಳ ಕಾಲ ಉಳಿದು ದೊಡ್ಡ ಹೆಸರನ್ನು ಸಂಪಾದನೆ ಮಾಡಿಕೊಳ್ಳುತ್ತಾರೆ. ಇವರಂತೆಯೇ ಕೆಲ ನಟಿಯರು.
ಕೂಡ ಒಂದೆರಡು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಮೋಡಿ ಮಾಡಿ ಕಣ್ಮರೆಯಾಗಿದ್ದಾರೆ. ಅವರು ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ.ಸೋನಿಯಾ ಅಗರ್ವಾಲ್ ಅವರು ಕಿಚ್ಚ ಸುದೀಪ್ ಅಭಿನಯದ ಚಂದು ಚಿತ್ರದಲ್ಲಿ ನಟಿಸಿ ಮೊದಲನೆಯದಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ.
ಮಾಡಿದರು. ಇವರು ಬೇರೆ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದು ಚಂದು ಚಿತ್ರ ಆದಮೇಲೆ ಇವರು ಕನ್ನಡದಲ್ಲಿ ಯಾವ ಸಿನಿಮಾದಲ್ಲಿ ನಟಿಸಲಿಲ್ಲ.ಜೆನಿಫರ್ ಕೊತ್ವಾಲ್ ಅವರು ಶಿವರಾಜ್ ಕುಮಾರ್ ಅವರ ಅಭಿನಯದ ಜೋಗಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು.
ಈ ಚಿತ್ರದ ಮೂಲಕವೇ ಸಾಕಷ್ಟು ಕನ್ನಡಿಗರ ಮನಸ್ಸನ್ನು ದೋಚಿಕೊಂಡಿದ್ದಾರೆ. ತದನಂತರ ಕೂಡ ಕೆಲ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.ಇಶಾ ಕೊಪ್ಪಿಕರ್ ಅವರು ವಿಷ್ಣುವರ್ಧನ್ ಅವರ ಜೊತೆಗೆ ಸೂರ್ಯವಂಶ ಚಿತ್ರದ ಮೂಲಕ ಪ್ರವೇಶ ಮಾಡಿದ್ದು ಇದಾದ ಮೇಲೆ ರವಿಚಂದ್ರನ್ ಅವರ ಜತೆಗೆ ಓ ನನ್ನ ನಲ್ಲೆ.
ಚಿತ್ರದಲ್ಲಿ ನಟಿಸಿ ಇವೆರಡು ಸಿನಿಮಾಗಳ ಮೂಲಕ ಸಾಕಷ್ಟು ಪ್ರಖ್ಯಾತರಾದರು.ಸ್ನೇಹಾ ಅವರು ರವಿಚಂದ್ರನ್ ಅವರ ಅಭಿನಯದ ರವಿಶಾಸ್ತ್ರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತುಂಬಾನೆ ಫೇಮ್ ಗಳಿಸಿದರು.
ರಾಶಿ ಅವರು ತೆಲುಗು ಚಿತ್ರರಂಗದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡದಲ್ಲಿ ಸ್ನೇಹ ಚಿತ್ರದಲ್ಲಿ ನಟಿಸಿ ತದನಂತರ ಬಂದ ಸಿನಿಮಾಗಳಲ್ಲಿ ಇವರು ತುಂಬಾ ಫೇಮಸ್ ಆದರು.
ಸಾಂಘ್ವಿ ಅವರು ಅನಾಥರು ದಿಗ್ಗಜರು ಇನ್ನೂ ಕೆಲ ಚಿತ್ರಗಳಲ್ಲಿ ನಟಿಸಿ ಇವರು ಕೂಡ ಕೆಲ ಕನ್ನಡದ ಚಿತ್ರಗಳಲ್ಲಿ ನಟಿಸಿದರೂ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ದೋಚಿಕೊಂಡಿದ್ದಾರೆ.
ರೇಖಾ ಅವರು ಕನ್ನಡದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಅಭಿನಯದ ಹುಚ್ಚ ಚಿತ್ರದಲ್ಲಿ ನಟಿಸಿ ಸಖತ್ ಫೇಮಸ್ ಆದರು.
ಚಾರುಲತಾ ಅವರು ಓ ಮಲ್ಲಿಗೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿ ತದನಂತರ ಸಾಕಷ್ಟು ಕನ್ನಡದಲ್ಲಿ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಸಂಗೀತಾ ಅವರು ಕನ್ನಡದಲ್ಲಿ ಯಾರೇ ನೀನು ಚೆಲುವೆ ಚಿತ್ರದ ಮೂಲಕ ಪ್ರವೇಶ ಮಾಡಿ ತದನಂತರ ಯಾರೇ ನೀ ಅಭಿಮಾನಿ ಚಿತ್ರದಲ್ಲೂ ಕೂಡ ಅಭಿನಯ ಮಾಡಿದ್ದಾರೆ.
ಬಿಂದಿಯಾ ಅವರು ರವಿಚಂದ್ರನ್ ಅವರ ಅಭಿನಯದ ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ನಟಿಸಿ ಸಕತ್ ಫೇಮಸ್ ಆದರು. ಇದಾದ ಮೇಲೆ ರಾಯರು ಬಂದರು ಮಾವನ ಮನೆಗೆ ಎನ್ನುವ ಚಿತ್ರದಲ್ಲಿ ಕೂಡ ಅಭಿನಯ ಮಾಡಿದ್ದಾರೆ…..