ಕೆಲ ನಟಿಯರು ಒಂದಾನೊಂದು ಕಾಲದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿ ಮಿಂಚಿ ಕಣ್ಮರೆಯಾಗಿದ್ದಾರೆ. ಹಾಗಾದರೆ ಬನ್ನಿ ಈಗ ನಾವು ಆ 3 ನಾಯಕಿಯರು ಯಾರು ಮತ್ತು ಅವರು ಏನು ಮಾಡುತ್ತಿದ್ದಾರೆ ಎಂದು ನೋಡೋಣ ಬನ್ನಿ…
ಖ್ಯಾತ ನಟಿ ಸದಾ ಅವರು ಯಾರಿಗೆ ಗೊತ್ತಿಲ್ಲ ಹೇಳಿ. ಸದಾ ಎನ್ನುವ ಹೆಸರನ್ನು ಕೇಳಿದ ತಕ್ಷಣ ನಮಗೆಲ್ಲರಿಗೂ ಸಾಕಷ್ಟು ಅವರ ಚಿತ್ರಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಅದರಲ್ಲೂ ಮೊದಲನೆಯದಾಗಿ ಸದಾ ಅವರು ನಟಿಸಿದ ಬ್ಲಾಕ್ಬಸ್ಟರ್ ಹಿಟ್ ಮೂವಿ ಜಯಂ ಚಿತ್ರವು ನೆನಪಾಗುತ್ತದೆ. ಈ ಸಿನೆಮಾದಲ್ಲಿ ಕಥೆ ಹಾಡುಗಳು ಎಲ್ಲವೂ ಕೂಡ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಬಹುದು. ಇನ್ನು ಸದಾ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಇವರಿಗೆ ಜಯಂ ಸಿನಿಮಾ.
ಮೊದಲನೆಯದಾಗಿ ಯಶಸ್ವಿಯನ್ನು ತಂದುಕೊಟ್ಟಿದೆ ಎಂದು ಹೇಳಬಹುದು. ಇನ್ನು ಕನ್ನಡದಲ್ಲಿ ಮೋನಾಲಿಸ ಚಿತ್ರದ ಮೂಲಕ ನಟಿಸಿ ಕನ್ನಡ ಬೆಳ್ಳಿತೆರೆಯ ಮೇಲೆ ಪಾದಾರ್ಪಣೆ ಮಾಡಿದರು. ಹಾಗೆಯೇ ತಮಿಳಿನಲ್ಲಿ ಅನ್ಯನ್ ಎನ್ನುವ ಸಿನಿಮಾದಲ್ಲೂ ಕೂಡ ನಟಿಸಿ ಆ ಸಿನಿಮಾ ಕೂಡ ತುಂಬಾನೇ ಹಿಟ್ ಆಯಿತು ಎಂದು ಹೇಳಬಹುದು. ಇನ್ನು ಸದಾ ಅವರ ಪೂರ್ತಿ ಹೆಸರು ಸದಾಫ್ ಮೊಹಮ್ಮದ್ ಸೈಯದ್ ಎಂದು.
ಇವರ ತಂದೆ ಮುಸ್ಲಿಂ ಆಗಿದ್ದು ತಾಯಿ ಅಪ್ಪಟ ಬ್ರಾಹ್ಮಣರು. ಇನ್ನು ಈ ದಂಪತಿಗಳಿಗೆ ಏಕೈಕ ಮುದ್ದಾದ ಮಗಳೇ ಸದಾ. ಇವರು ಫೆಬ್ರವರಿ 17 1984 ರಂದು ರತ್ನಗಿರಿ ಎನ್ನುವ ಊರಿನಲ್ಲಿ ಜನಿಸಿದ್ದಾರೆ. ಇನ್ನು ಇವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ಸಾಕಷ್ಟು ರಿಯಾಲಿಟಿ ಶೋಗಳಿಗೆ ಜಡ್ಜ್ ಕೂಡ ಆಗಿದ್ದರು. ಇವರು ಒಂದು ಕಾಲದ ಯಶಸ್ವಿ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸಿ ಸುಮಾರು 20 ದಶಕಗಳ ಕಾಲ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ಸಾಕ್ಷಿ ಶಿವಾನಂದ್ ಅವರ ಬ್ಯೂಟಿ ಅಂದರೆ ಎಲ್ಲರಿಗೂ ತುಂಬಾನೇ ಇಷ್ಟವಾಗುತ್ತದೆ. ಇನ್ನು ಸಾಕ್ಷಿ ಶಿವಾನಂದ ಅವರು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಮೊದಲನೆಯದಾಗಿ ಹಿಂದಿಯಲ್ಲಿ ಜನಂ ಕುಂಡಲಿ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಹಾಗೆ ಇವರಿಗೆ ಟಾಲಿವುಡ್ ನಲ್ಲೂ ಕೂಡ ತುಂಬಾನೇ ಫೇಮಸ್ ಇದೆ ಎಂದು ಹೇಳಬಹುದು.
ಗಲಾಟೆ ಅಳಿಯಂದರು ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಗೆ ಕಾಲಿಟ್ಟರು. ಇದಾದ ಮೇಲೆ ನಾನು ನಾನೇ, ಸೈನಿಕ, ಕೋದಂಡರಾಮ, ತಂದೆಗೆ ತಕ್ಕ ಮಗ, ಸೌಂದರ್ಯ, ಪರಮಶಿವ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಸಾಕ್ಷಿ ಶಿವಾನಂದ ಅವರು ಸಾಗರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ನಟಿ ಸಾಕ್ಷಿ ಶಿವಾನಂದ ಅವರು ಕೂಡ ಯಶಸ್ವಿ ಸಿನಿಮಾಗಳ ಬಹುಬೇಡಿಕೆಯ ನಾಯಕಿ ಎಂದು ಹೇಳಬಹುದು.
90 ಮತ್ತು 2000 ರ ಸಮಯದಲ್ಲಿ ಯಾವುದೇ ಸಿನಿಮಾಗಳಲ್ಲಿ ನೋಡಿದರೂ ಕೂಡ ರಂಭ ಅವರು ಹೀರೋಯಿನ್ ಆಗಿ ನಟಿಸುತ್ತಿದ್ದರು. ಇನ್ನು ಇವರು ಜೂನ್ 5 1976 ರಂದು ವಿಜಯವಾಡದಲ್ಲಿ ಜನಿಸಿದ್ದಾರೆ. ಇನ್ನು ರಂಭ ಅವರ ಹೆಸರಿನ ತಕ್ಕಂತೆ ತಮ್ಮ ಸೌಂದರ್ಯವು ಕೂಡ ಇದೆ ಎಂದು ಹೇಳಬಹುದು. ಇನ್ನು ಇವರು ತೆಲುಗು ತಮಿಳು ಮಲಯಾಳಂ ಕನ್ನಡ ಹಿಂದಿ ಬೆಂಗಾಲಿ ಬೋಜ್ಪುರಿ ಇಂಗ್ಲಿಷ್ ಹೀಗೆ ಸಾಕಷ್ಟು ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆಮ ಇವರು ಕನ್ನಡದಲ್ಲಿ ಸರ್ವರ್ ಸೋಮಣ್ಣ, ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಪಾಂಚಾಲಿ, ಭಾವಭಾಮೈದ, ಸಾಹುಕಾರ, ಪಾಂಡುರಂಗ ವಿಠಲ,
ಗಾಂಡುಗಲಿ ಕುಮಾರರಾಮ, ಅನಾಥರು ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ನಟಿ ರಂಭಾ ಅವರು ಇಂದ್ರನ್ ಪದ್ಮನಾಥನ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಹಾಗೆ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದಾನೆ ಕೆಲ ವರ್ಷಗಳು ಇವರಿಬ್ಬರ ಮಧ್ಯೆ ಕೆಲ ಕೌಟುಂಬಿಕ ವಿಚಾರಗಳು ಅಡ್ಡಿಯಾಗಿ ವಿಚ್ಛೇದನವರೆಗೆ ಹೋಗಿದ್ದರು. ತದನಂತರ ಈಗ ಇವರಿಬ್ಬರು ತುಂಬಾ ಅನ್ಯೋನ್ಯವಾಗಿ ಮಕ್ಕಳ ಜೊತೆಗೆ ಕೂಡಿ ಬಾಳುತ್ತಿದ್ದಾರೆ. ಈ ವಿಷಯ ತುಂಬಾ ಸಂತೋಷಕರ ಎಂದು ಹೇಳಬಹುದು……