90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗ ಕಂಡ ಸುಂದರವಾದ ಮತ್ತು ಪ್ರತಿಭಾವಾನ್ವಿತ ನಟಿಯರಲ್ಲಿ ಇಬ್ಬರು ಮೀನಾ. ಈ ನಟಿ ಈಗಲೂ ಸಹ ಅಷ್ಟೇ ಸುಂದರವಾಗಿ ಕ್ಯೂಟ್ ಆಗಿ ಕಾಣಿಸುತ್ತಾರೆ. ಮೀನಾ ಅವರು ಈಗಲೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಆಗಾಗ ಒಳ್ಳೆಯ.
ಪಾತ್ರಗಳು ಸಿಕ್ಕಾಗ ನಟಿಸುತ್ತಾರೆ ನಟಿ ಮೀನಾ. ಇವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲು ಸಕ್ರಿಯರಾಗಿದ್ದ ನಟಿ ಇವರು. ನಟಿ ಮೀನಾ ಅವರು ಬಹಳ ಪ್ರೀತಿಯಿಂದ ಕಟ್ಟಿಸಿರುವ ಮನೆಯ ಒಳಗೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ತೋರಿಸುತ್ತೇವೆ ನೋಡಿ..
ನಟಿ ಮೀನಾ ಅವರು 3 ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಹುಟ್ಟಿದ್ದು ಚೆನ್ನೈನಲ್ಲಿ. ಮೀನಾ ಅವರಿಗೆ ಈಗ 45 ವರ್ಷ. ಇವರು ಬಾಲನಟಿಯಾಗಿ ತಮಿಳು ಸಿನಿಮಾ ಒಂದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ.
ತಮಿಳಿನ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಶಾಲೆಯಲ್ಲಿ ಓದುವಾಗಲೇ ಮೀನಾ ಅವರಿಗೆ ನಟನೆಗೆ ಸಾಕಷ್ಟು ಅವಕಾಶಗಳು ಬಂದಿದ್ದವು. ನಟಿ ಮೀನಾ ಅವರು, ಇದರಿಂದಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಿ, ಆಕ್ಟಿಂಗ್ ಶುರುಮಾಡಬೇಕಾಯಿತು.
ಮೀನಾ ಅವರು ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದು 1990ರಲ್ಲಿ, ತೆಲುಗಿನ ಖ್ಯಾತ ನಟ ರಾಜೇಂದ್ರ ಪ್ರಸಾದ್ ಅವರಿಗೆ ನಾಯಕಿಯಾಗಿ, ನವಯುಗಂ ಎನ್ನುವ ತೆಲುಗು ಸಿನಿಮಾ ಮೂಲಕ ನಾಯಕಿಯಾದರು. ಬಳಿಕ ಮೀನಾ ಅವರು ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಕನ್ನಡದಲ್ಲಿ ಇವರು ನಟಿಸಿದ ಮೊದಲ ಸಿನಿಮಾ ಪುಟ್ನಂಜ. ರವಿಚಂದ್ರನ್ ಅವರಿಗೆ ನಾಯಕಿಯಾಗಿ ನಟಿಸಿದ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ಮೀನಾ ಅವರು ಚೆಲುವ, ಸ್ವಾತಿಮುತ್ತು, ಮೈ ಆಟೋಗ್ರಹ್, ಸಿಂಹಾದ್ರಿಯ ಸಿಂಹ ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಿಗೆ ನಾಯಕಿಯಾದರು.
ಕನ್ನಡದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್, ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್, ಕಿಚ್ಚ ಸುದೀಪ್ ಅವರೊಡನೆ ನಟಿಸಿದ್ದಾರೆ. ಕನ್ನಡದಲ್ಲಿ ಸಹ ಮೀನಾ ಅವರಿಗೆ ಬಹಳ ಬೇಡಿಕೆ ಇತ್ತು. ನಂತರದ ದಿನಗಳಲ್ಲಿ, ಹೊಸ ನಾಯಕಿಯರು ಬಂದಮೇಲೆ, ನಟನೆಯ ಅವಕಾಶ ಕಡಿಮೆಯಾಯಿತು.
ಇವರ ಕುಟುಂಬದ ವಿಚಾರಕ್ಕೆ ಬರುವುದಾರೆ, 2009ರಲ್ಲಿ ಬೆಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ವಿದ್ಯಾಸಾಗರ್ ಅವರೊಡನೆ ಮದುವೆಯಾಗಿದ್ದಾರೆ ನಟಿ ಮೀನಾ. ಈ ದಂಪತಿಗೆ ನೈನಿಕಾ ಹೆಸರಿನ ಮುದ್ದಾದ ಹೆಣ್ಣುಮಗುವಿದೆ. ನಟಿ ಮೀನಾ ಅವರ ಮಗಳು ತಮಿಳಿನ ಥೆರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು.
ಮೀನಾ ಅವರು ತಮ್ಮ ಮುದ್ದು ಮಗಳಿಗಾಗಿ ಸುಂದರವಾದ ಮನೆಯೊಂದನ್ನು ಕಟ್ಟಿಸಿದ್ದಾರೆ. ಇವರ ಮನೆಯನ್ನು ಆಧುನಿಕತೆಯ ಜೊತೆಗೆ, ಸಾಂಪ್ರದಾಯಿಕವಾಗಿ ಕಟ್ಟಿಸಿದ್ದಾರೆ ನಟಿ ಮೀನಾ. ಮನೆಯ ಒಳಗಡೆ ಸುಂದರವಾದ ಪೇಂಟಿಂಗ್ ಗಳು, ಮನೆಯ ಹೊರಗೆ.
ಸಾಕಷ್ಟು ಗಿಡ ಮರ ಇರುವ ಗಾರ್ಡನ್, ಮನೆಯೊಳಗೆ ಐಷಾರಾಮಿ ಉಪಕರಣಗಳು. ಜೊತೆಗೆ ಮಕ್ಕಳಿಗೆ ಇಷ್ಟ ಆಗುವಂಥಹ ವಾತಾವರಣ ನಟಿ ಮೀನಾ ಅವರ ಮನೆಯಲ್ಲಿದೆ. ಇವರ ಮನೆಯು ಎಷ್ಟು ಸುಂದರವಾಗಿದೆ ಎಂದು ನೀವು ಸಹ ಒಮ್ಮೆ ನೋಡಿ..