Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಒಂದು ಕಾಲದಲ್ಲಿ ಮಿಂಚಿನಂತೆ ಬಂದು ಸದ್ದಿಲ್ಲದೆ ಚಿತ್ರರಂಗದಿಂದ ಮರೆಯಾದ ಈ ಪುಟ್ಟ ಬಾಲಕಿಯರ ಅಣ್ಣ ಯಾರು ಗೊತ್ತ ?? ಈತ ಕೂಡ ತುಂಬಾ ಫೇಮಸ್ ನಟ !!

0

ನಟ ರಿಚರ್ಡ್ ಅವರು ಅಕ್ಟೋಬರ್ 20 1977 ರಂದು ಜನಿಸಿದರು. ಇವರ ತಂದೆಯ ಹೆಸರು ಬಾಬು ಮತ್ತು ತಾಯಿಯ ಹೆಸರು ಅಲೈಸ್. ಇವರು ತಮಿಳು ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಕೆಲ ಚಿತ್ರಗಳನ್ನು ಮಲೆಯಾಳಂ ಮತ್ತು ಕನ್ನಡದಲ್ಲಿ ಕೂಡ ಮಾಡಿದ್ದಾರೆ. ರಿಚರ್ಡ್ ಅವರು 1990 ರಂದು ಜಗದೇಕ ವೀರುಡು ಅತಿಲೋಕ ಸುಂದರಿ ಎನ್ನುವ ಚಿತ್ರದಲ್ಲಿ ಮೊದಲನೆಯದಾಗಿ ಬಾಲನಟನಾಗಿ ಅಭಿನಯಿಸಿ ಬೆಳ್ಳಿತೆರೆ ಮೇಲೆ ಕಾಣಿಸಿದರು.

ಇನ್ನು ನಮ್ಮ ಕನ್ನಡದಲ್ಲಿ 2013 ರಲ್ಲಿ ಬೆಂಕಿ ಬಿರುಗಾಳಿ ಚಿತ್ರದ ಮೂಲಕ ನಟಿಸಿ ಕನ್ನಡ ಸಿನಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು. ರಿಚರ್ಡ್ ಅವರು ಸತ್ಯಲಕ್ಷ್ಮಿ ಕನ್ನಡಾಸನ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ರಿಚರ್ಡ್ ಅವರಿಗೆ ಇಬ್ಬರು ತಂಗಿಯರು. ಇವರು ಕೂಡ ದಕ್ಷಿಣ ಭಾರತದ ಖ್ಯಾತ ನಟಿಯರು. ಒಬ್ಬರು ನಟಿ ಬೇಬಿ ಶ್ಯಾಮಿಲಿ ಮತ್ತೊಬ್ಬರು ಬೇಬಿ ಶಾಲಿನಿ.

ಬೇಬಿ ಶಾಮಿಲಿ ಅವರು ಯಾರಿಗೆ ಗೊತ್ತಿಲ್ಲ ಹೇಳಿ. ಇವರು ಜುಲೈ 10 1987 ರಂದು ಜನಿಸಿದ್ದಾರೆ. ಇವರು ಮಲಯಾಳಂ ತಮಿಳು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈಕೆ ನಟಿಗಿಂತ ಬಾಲನಟಿ ಇದ್ದಾಗಲೇ ಸಾಕಷ್ಟು ಜನಪ್ರಿಯತೆಯನ್ನು ಸಾಧಿಸಿದ್ದರು. ಹಾಗೆಯೇ ಬಾಲನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬೇಬಿ ಶಾಮಿಲಿ ಅವರು 1989 ರಂದು ರಾಜನಾದೈ ಎನ್ನುವ ತಮಿಳು ಚಿತ್ರದ ಮೂಲಕ ಮೊದಲನೆಯದಾಗಿ ಬಾಲ ನಟಿಯಾಗಿ ತಮ್ಮ ಪಾದಾರ್ಪಣೆ ಮಾಡಿದರು. ಬೇಬಿ ಶಾಮಿಲಿ ಅವರು ಎಲ್ಲ ಭಾಷೆಗಳಲ್ಲಿ ಸೇರಿ ಸುಮಾರು 40 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಇವರು ಬಾಲನಟಿಯಾಗಿ ಅಭಿನಯಿಸಿದ್ದರಿಂದ ಸಾಕಷ್ಟು ಪ್ರಶಸ್ತಿಗಳು ಕೂಡ ದೊರಕಿದೆ.

ಇನ್ನೂ 2009 ರಲ್ಲಿ ತೆಲುಗಿನ ಓಯ್ ಚಿತ್ರದ ಮೂಲಕ ನಾಯಕಿ ನಟಿಯಾಗಿ ಕಾಣಿಸಿಕೊಂಡರು. ಇದಾದ ಮೇಲೆ 3 ಚಿತ್ರಗಳಲ್ಲಿ ನಟಿಸಿದ್ದಾರೆ ಅಷ್ಟೇ. ತದನಂತರ ಇವರು ಯಾವ ಚಿತ್ರದಲ್ಲೂ ಕೂಡ ಇವರು ನಟಿಸಲಿಲ್ಲ. ಇನ್ನೂ ಬೇಬಿ ಶಾಲಿನಿ ಅವರು ನವಂಬರ್ 20 1979 ರಂದು ಜನಿಸಿದ್ದಾರೆ. ಇವರು ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಬೇಬಿ ಶಾಲಿನಿ ಅವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಇನ್ನೂ ಶಾಲಿನಿ ಅವರು ಏಪ್ರಿಲ್ 2000 ರಂದು ಚೆನ್ನೈನಲ್ಲಿ ಖ್ಯಾತ ನಟ ಅಜಿತ್ ಕುಮಾರ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ವಿವಾಹ ಮಾಡಿಕೊಂಡ ಮೇಲೆ ಶಾಲಿನಿ ಅವರು ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ. ಇವರಿಗೆ ಅನೌಷ್ಕಾ ಮತ್ತು ಅದ್ವಿಕ್ ಎನ್ನುವ ಇಬ್ಬರು ಮಕ್ಕಳು ಕೂಡ ಇದ್ದಾರೆ…..

Leave A Reply