ಕನ್ನಡದ ಜನಪ್ರಿಯ ನಟಿ ಮೇಘನಾ ರಾಜ್ ಅವರು ನಟ ಚಿರು ಸರ್ಜಾ ಅವರನ್ನು ಕಳೆದುಕೊಂಡ ಮೇಲೆ ಅದರಿಂದ ಹೊರಗೆ ಬರುವುದಕ್ಕೆ ತುಂಬಾನೇ ಕಷ್ಟವನ್ನು ಪಟ್ಟರು. ಚಿರು ಸರ್ಜಾ ಅವರು ನಿಧನ ಆಗುವ ಸಮಯದಲ್ಲಿ ಮೇಘನಾ ಅವರು 4 ತಿಂಗಳ ಗರ್ಭಿಣಿಯಾಗಿದ್ದರು. ತನ್ನ ಅಳುವನ್ನು ದೂರಮಾಡಿ ಮುಖದಲ್ಲಿ ನಗುವನ್ನು ತಂದುಕೊಟ್ಟಿದ್ದು ಚಿರು ಮತ್ತು ಮೇಘನಾ ಅವರ ಮಗ ರಾಯನ್ ರಾಜ್ ಸರ್ಜಾ.
ಇನ್ನು ರಾಯನ್ ರಾಜ್ ಸರ್ಜಾ ಅಕ್ಟೊಬರ್ 22 2020 ರಂದು ತನ್ನ ತಂದೆ ತಾಯಿಯ ನಿಶ್ಚಿತಾರ್ಥ ದಿನದಂದೇ ಜನಿಸಿದ್ದಾನೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ಅವರು ತನ್ನ ಮಗನ ಜೊತೆಗೆ ಇರುವ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಹಾಕುತ್ತಾ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಇನ್ನೂ ಇದೀಗ ಮೇಘನಾ ರಾಜ್ ಅವರು ತನ್ನ ಮಗ ನೆರೆಮನೆಯ ಮಕ್ಕಳ ಜೊತೆಗೆ ಆಟವಾಡುತ್ತಿರುವ ಒಂದು ವೀಡಿಯೊವನ್ನು ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದಾರೆ.
ಈ ವಿಡಿಯೋವನ್ನು ಹಾಕಿ ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ ಎಂದು ಬರೆದಿದ್ದಾರೆ. ಇದರ ಜೊತೆಗೆ ನನ್ನ ಮಗ ಕೂಡ ಮೊಬೈಲ್ ನೋಡುತ್ತಾನೆ ಟಿವಿ ನೋಡುತ್ತಾನೆ ಇದರ ಜೊತೆಗೆ ನಾವು ಬೆಳೆದ ಬಂದ ರೀತಿಯಲ್ಲಿ ನನ್ನ ಮಗ ಕೂಡ ಬೆಳೆಯಲಿ ಎಂದು ನಾವು ಹೊರಗೆ ನೆರೆಮನೆಯವರ ಮಕ್ಕಳ ಜೊತೆಗೆ ಆಟವಾಡಲು ಬಿಡುತ್ತೇವೆ. ಈಗ ಅವನಿಗೆ ನೆರೆಮನೆಯವರು ಮತ್ತು ಅವರ ಮಕ್ಕಳ ಜೊತೆ ಹರಟೆ ಮಾಡುವುದು ತುಂಬಾ ಸಾಮಾನ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ರಾಯನ್ ರಾಜ್ ಸರ್ಜಾ ಹೊರಗಡೆ ಮಕ್ಕಳ ಜೊತೆಗೆ ಆಟವಾಡುತ್ತಿರುವ ವೀಡಿಯೊವನ್ನು ಇಲ್ಲಿ ನೋಡಬಹುದು. ಇನ್ನೂ ಚಿರು ಸರ್ಜಾ ಅವರು 39ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದರು.
ಇವರು ಜೂನ್ 7 2020 ರಂದು ಅಕಾಲಿಕ ಮರಣದಿಂದ ಎಲ್ಲರನ್ನು ಬಿಟ್ಟು ಇಹಲೋಕಕ್ಕೆ ಹೋದರು. ಇದನ್ನು ಜೀರ್ಣ ಮಾಡಿಕೊಳ್ಳುವುದಕ್ಕೆ ಚಿರು ಸರ್ಜಾ ಅವರ ಕುಟುಂಬಕ್ಕೆ ಮತ್ತು ಮೇಘನಾ ರಾಜ್ ಅವರ ಕುಟುಂಬಕ್ಕೆ ತುಂಬಾ ಸಮಯವೇ ಹಿಡಿಯಿತು.
ಚಿರು ಸರ್ಜಾ ಮತ್ತು ಮೇಘನಾ ರಾಜ್ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿರು ಸರ್ಜಾ ಅವರು ಕೊನೆಯದಾಗಿ ನಟಿಸಿದ ಚಿತ್ರ ಶಿವಾರ್ಜುನ. ಇನ್ನೂ ಮೇಘನಾ ರಾಜ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ…..