Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಎಂಜಿನಿಯರಿಂಗ್ ಪದವಿ ಹೊಂದಿರುವ ಕನ್ನಡದ ಸ್ಟಾರ್ ನಟರು ಇವರೇ ನೋಡಿ, ಯಾರ್ ಯಾರು ಗೊತ್ತೇ ??

0

ನಮ್ಮ ಸ್ಯಾಂಡಲ್ ವುಡ್ ನ ಕೆಲ ಸ್ಟಾರ್ ನಟರು ಮೊದಲು ಇಂಜಿನಿಯರಿಂಗ್ ಪದವಿಯನ್ನು ಮುಗಿಸಿ ನಂತರ ಸಿನಿ ಲೋಕಕ್ಕೆ ಬಂದು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಅಂತಹ ನಟರು ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ..

ನಟ ರಮೇಶ್ ಅರವಿಂದ್ ಅವರು ಸೆಪ್ಟೆಂಬರ್ 10 1964 ರಂದು ಕುಂಭಕೋಣಂನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಗೋವಿಂದಚಾರಿ ಅರವಿಂದ್ ಮತ್ತು ತಾಯಿಯ ಹೆಸರು ಸರೋಜಾ ಅರವಿಂದ್. ಇನ್ನು ರಮೇಶ್ ಅರವಿಂದ್ ಅವರು 1986 ರಲ್ಲಿ ಸುಂದರ ಸ್ವಪ್ನಗಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್‍ ಪದವಿಯನ್ನು ಮಾಡಿ ಮುಗಿಸಿದ್ದಾರೆ.

ನಟ ಶಿವರಾಜ್ ಕುಮಾರ್ ಅವರು ಜುಲೈ 12 1962 ರಂದು ಚೆನ್ನೈನಲ್ಲಿ ಜನಿಸಿದ್ದಾರೆ. ಇನ್ನು ಶಿವರಾಜ್ ಕುಮಾರ್ ಅವರು ಬಾಲನಟರಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಕಾಣಿಸಿದರು. ತದನಂತರ 1986 ರಲ್ಲಿ ಆನಂದ್ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ನೀಡಿದರು. ಇವರು ಕೆಮಿಕಲ್ ಇಂಜಿನಿಯರಿಂಗ್ ಪದವಿಯನ್ನು ಮಾಡಿ ಮುಗಿಸಿದ್ದಾರೆ.

ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 7 1973 ರಂದು ಶಿವಮೊಗ್ಗದಲ್ಲಿ ಜನಿಸಿದರು. ಇವರ ತಂದೆ ಹೆಸರು ಎಂ ಸಂಜೀವ್ ಮತ್ತು ತಾಯಿಯ ಹೆಸರು ಸರೋಜಾ. ಇನ್ನು ಕಿಚ್ಚ ಸುದೀಪ್ ಅವರು ತಾಯವ್ವ ಚಿತ್ರದ ಮೂಲಕ ತಮ್ಮ ಸಿನೆಮಾ ಜೀವನವನ್ನು ಶುರುಮಾಡಿಕೊಂಡರು. ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಮಾಡಿ ಮುಗಿಸಿದ್ದಾರೆ.

ಡಾಲಿ ಧನಂಜಯ್ ಅವರು ಆಗಸ್ಟ್ 23 1986 ರಲ್ಲಿ ಅರಸೀಕೆರೆಯಲ್ಲಿ ಜನಿಸಿದ್ದಾರೆ. ಇವರು ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇವರು ಕೂಡ ಇಂಜಿನಿಯರಿಂಗ್ ಪದವಿಯನ್ನು ಮಾಡಿ ಮುಗಿಸಿ ಸ್ವಲ್ಪ ವರ್ಷಗಳ ಕಾಲ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡಿದ್ದರು.

ನಟ ರಕ್ಷಿತ್ ಶೆಟ್ಟಿ ಅವರು ಜೂನ್ 6 1983 ರಂದು ಉಡುಪಿಯಲ್ಲಿ ಜನಿಸಿದ್ದಾರೆ. ಇವರು ನಮ್ ಏರಿಯಾಲ್ ಒಂದಿನ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇನ್ನೂ ರಕ್ಷಿತ್ ಶೆಟ್ಟಿಯವರು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಎಂಜಿನಿಯರಿಂಗ್ ಪದವಿಯನ್ನು ಮಾಡಿ ಮುಗಿಸಿದ್ದಾರೆ.

ಅಶ್ವಿನಿ ನಕ್ಷತ್ರ ಮೂಲಕ ಜನಪ್ರಿಯ ಆಗಿರುವ ಜಯರಾಂ ಕಾರ್ತಿಕ್ ಅವರು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಮಾಡಿ ಮುಗಿಸಿದ್ದಾರೆ.

ನಟ ನಿರೂಪ್ ಭಂಡಾರಿ ಅವರು ಆಗಸ್ಟ್ 13 1984 ರಂದು ಪುತ್ತೂರಿನಲ್ಲಿ ಜನಿಸಿದ್ದಾರೆ. ಇವರು ರಂಗಿತರಂಗ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇವರು ಕೂಡ ಎಂಜಿನಿಯರಿಂಗ್ ಪದವಿಯನ್ನು ಮುಗಿಸಿ ಸಿನಿಮಾ ಲೋಕಕ್ಕೆ ಬಂದರು…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply