ಕನ್ನಡದ ಜನಪ್ರಿಯ ನಟಿ ಉಮಾಶ್ರೀ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಮತ್ತು ಏಳು ಬೀಳುಗಳನ್ನು ನೋಡಿ ಈಗ ಉನ್ನತ ಸ್ಥಾನದಲ್ಲಿ ಇದ್ದಾರೆ. ಇನ್ನು ಈ ಸ್ಥಾನವನ್ನು ಗಳಿಸುವುದಕ್ಕೆ ಉಮಾಶ್ರೀ ಅವರು ಅಷ್ಟೋ ಇಷ್ಟೋ ಕಷ್ಟವನ್ನು ನೋಡಿಲ್ಲ. ಉಮಾಶ್ರೀ ಅವರು ಮೇ 10 1957 ರಂದು ತಿಪಟೂರಿನ ನೊಣವಿನಕೆರೆಯಲ್ಲಿ ಜನಿಸಿದ್ದಾರೆ. ಇನ್ನೂ ಇವರು ಕೇವಲ ನಟಿ ಮಾತ್ರವಲ್ಲ ರಾಜಕೀಯ ವ್ಯಕ್ತಿ ಕೂಡ ಹೌದು.
ಉಮಾಶ್ರೀ ಅವರು 1984ರ ಲ್ಲಿ ಬಿಡುಗಡೆಯಾದ ಅನುಭವ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರುಮಾಡಿಕೊಂಡರು. ಇದರಲ್ಲಿ ಉಮಾಶ್ರೀ ಅವರು ಕಾಶಿನಾಥ್ ಅವರ ಜೊತೆಗೆ ಅಭಿನಯಿಸಿದ್ದಾರೆ. ಇದಾದ ಮೇಲೆ ಇವರು ಸಾಕಷ್ಟು ಚಿತ್ರಗಳಲ್ಲಿ ನಟಿಯಾಗಿ ನಟಿಸಿ ತದನಂತರ ಹಾಸ್ಯದ ಪಾತ್ರಗಳಲ್ಲಿ ಮತ್ತು ಸಾಕಷ್ಟು ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಸಾಕಷ್ಟು ಅಭಿಮಾನಿಗಳನ್ನು ತಮ್ಮ ಕಡೆ ಸೆಳೆದುಕೊಂಡಿದ್ದಾರೆ.
ಇನ್ನೂ ಉಮಾಶ್ರೀ ಅವರು ಕನ್ನಡದಲ್ಲಿ ಸುಮಾರು 400 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ದೊರಕಿದೆ. ಇವರು ನಟಿಯಾಗಿ ಸಿನಿಮಾಗಳಲ್ಲಿ ಹೇಗೆ ಅದ್ಭುತವಾಗಿ ನಟಿಸಿದ್ದಾರೆ ಹಾಗೆಯೇ ರಾಜಕೀಯ ಕ್ಷೇತ್ರದಲ್ಲೂ ಕೂಡ ತೊಡಗಿಸಿ ಸಾಮಾಜಿಕ ಸೇವೆಗಳನ್ನು ಕೂಡ ಸಾಕಷ್ಟು ಮಾಡಿದ್ದಾರೆ. ಇನ್ನು ಉಮಾಶ್ರೀ ಅವರ ಮಕ್ಕಳು ಯಾರು ಮತ್ತು ಅವರು ಹೇಗಿದ್ದಾರೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ.
ಹೌದು ಉಮಾಶ್ರೀ ಅವರಿಗೆ ಒಬ್ಬ ಗಂಡು ಮಗ ಮತ್ತು ಒಬ್ಬ ಹೆಣ್ಣು ಮಗಳು ಇದ್ದಾರೆ. ಇವರಿಬ್ಬರೂ ಯಾವ ಮಾಧ್ಯಮ ಮುಂದೆ ಕಾಣಿಸಿಕೊಂಡಿಲ್ಲ. ಮಾಧ್ಯಮದಿಂದ ದೂರ ಇರುವ ಉಮಾಶ್ರೀ ಅವರ ಇಬ್ಬರು ಮಕ್ಕಳು ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿಲ್ಲ ಬಳಿಕ ಬೇರೆ ವೃತ್ತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಹೌದು ಉಮಾಶ್ರೀ ಅವರಿಗೆ ವಿಜಯ್ ಕುಮಾರ್ ಎನ್ನುವ ಮಗ ಮತ್ತು ಗಾಯತ್ರಿ ಎನ್ನುವ ಮಗಳು ಇದ್ದಾರೆ. ಇದರಲ್ಲಿ ವಿಜಯ್ ಕುಮಾರ್ ಅವರು ಲಾಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಗಾಯತ್ರಿ ಅವರು ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಉಮಾಶ್ರೀ ಅವರು ಪ್ರಸ್ತುತ ಸಿನಿಮಾ ಸೀರಿಯಲ್ ಮತ್ತು ರಾಜಕೀಯ ಕೆಲಸಗಳನ್ನು ಮಾಡುತ್ತಾ ತುಂಬಾನೇ ಬ್ಯುಸಿಯಾಗಿದ್ದಾರೆ. ಇನ್ನೂ ಉಮಾಶ್ರೀ ಅವರು ತುಂಬಾ ಬ್ಯುಸಿ ಇರುವ ಕಾರಣ ತಮ್ಮ ಮೊಮ್ಮಕ್ಕಳ ಜೊತೆಗೆ ಆಟವಾಡುವುದಕ್ಕೆ ಕೂಡ ಸಮಯವಿಲ್ಲ ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ…..