ಉದ್ದ ಇರುವ ಹುಡುಗಿ ಬೇಕು ಎಂದು ಬೊಬ್ಬೆ ಹೊಡೆಯುವ ಯುವಕರೆ, ಇಲ್ಲಿ ನೋಡಿ ಕುಳ್ಳಗಿರುವ ಹುಡುಗಿಯನ್ನು ಮದುವೆಯಾದರೆ ಏನೆಲ್ಲಾ ಅದೃಷ್ಟಗಳು ಸಿಗುತ್ತವೆ ಎಂದು !!
ಸಾಮಾನ್ಯವಾಗಿ ಎಲ್ಲಾ ಹುಡುಗರಿಗೂ ಅವರು ಮದುವೆ ಮಾಡಿಕೊಳ್ಳುವ ಹುಡುಗಿ ಹೇಗಿರಬೇಕು ಎಂದು ಅಂದಾಜು ಹಾಕಿಕೊಂಡಿರುತ್ತಾರೆ. ಅದರಲ್ಲೂ ತಮಗೆ ಸಿಗುವ ಹೆಂಡತಿಯ ಬಗ್ಗೆ ಸಾಕಷ್ಟು ಕನಸುಗಳನ್ನು ಕೂಡ ಇಟ್ಟುಕೊಂಡಿರುತ್ತಾರೆ. ಕೆಲವರು ಅವರ ಎತ್ತರಕ್ಕೆ ಸರಿಯಾಗಿ ಹೊಂದಬಹುದಾದ ಹುಡುಗಿಯನ್ನೇ ಹೆಚ್ಚು ಮಂದಿ ಹುಡುಕುತ್ತಾರೆ.
ಅಂದರೆ ಅವರ ಎತ್ತರಕ್ಕಿಂತ ಒಂದೆರಡು 3 ಇಂಚುಗಳಷ್ಟು ಕಡಿಮೆ ಇದ್ದರೆ ಮದುವೆಯಾಗಬಹುದು ಎಂಬ ಅಂದಾಜು ಹಾಕಿಕೊಂಡು ಹುಡುಗಿಯನ್ನು ಹುಡುಕುತ್ತಾರೆ. ಆದರೆ ತಮಗಿಂತ ತೀರಾ ಕುಳ್ಳಗೆ ಇರುವ ಹುಡುಗಿಯನ್ನು ಯಾರು ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ ಮತ್ತು ಹುಡುಕುವುದು ಕೂಡ ಇಲ್ಲ. ಆದರೆ ಸೈಕಾಲಜಿಯ ಪ್ರಕಾರ ಕುಳ್ಳಗಿರುವ ಹುಡುಗಿಯನ್ನು ಮದುವೆಯಾದರೆ ಹುಡುಗನಿಗೆ ತುಂಬಾ ಅದೃಷ್ಟಗಳು ಇವೆ ಎಂದು ಹೇಳಿದ್ದಾರೆ.
ಹಾಗಾದರೆ ಬನ್ನಿ ಕುಳ್ಳಗಿರುವ ಹುಡುಗಿಯರಲ್ಲಿ ಅಂತಹ ವಿಶೇಷ ಗುಣಗಳು ಏನಿರುತ್ತದೆ ಎಂದು ನೋಡೋಣ. ಕುಳ್ಳಗಿರುವ ಹುಡುಗಿಯರು ನೋಡುವುದಕ್ಕೆ ತುಂಬಾ ಅಂದಚಂದವಾಗಿ ಇರುತ್ತಾರೆ. ಇವರು ನಕ್ಕರು ಮತ್ತು ಕೋಪ ಮಾಡಿಕೊಂಡರೂ ಕೂಡ ಅವರ ಮುಖದಲ್ಲಿ ಒಂದು ಮುಗ್ಧತೆ ಎನ್ನುವುದು ಇರುತ್ತದೆ. ಬೇರೆ ಹುಡುಗಿಯರಿಗೆ ಹೋಲಿಸಿದರೆ ಕುಳ್ಳಗೆ ಇರುವ ಹುಡುಗಿಯರು ವಯಸ್ಸಾದಂತೆ ಕಾಣಿಸೋದಿಲ್ಲ. ಒಂದು ವೇಳೆ ವಯಸ್ಸಾಗಿದ್ದರೂ ಕೂಡ ಅವರು ಇನ್ನೂ ಚಿಕ್ಕವರಂತೆ ಕಾಣಿಸುತ್ತಾರೆ.
ಹುಡುಗಿಯರಿಗೆ ಚಿಕ್ಕಮಕ್ಕಳಂತೆ ಮನಸ್ಸು ಇರುವ ಕಾರಣ ಅವರು ಶಾಪಿಂಗ್ ಮಾಡುವುದಕ್ಕೆ ಹೋದರೂ ಕೂಡ ಚಿಕ್ಕ ಮಕ್ಕಳಂತೆ ಅಲ್ಲಿ ಶಾಪಿಂಗ್ ಮಾಡುತ್ತಾರೆ. ಇನ್ನೂ ಕುಳ್ಳಗಿರುವ ಹುಡುಗಿಯರು ಯಾವುದೇ ವಿಚಾರದಲ್ಲೂ ಕೂಡ ಕಿರಿಕಿರಿ ಜಗಳ ಮಾಡುವುದಿಲ್ಲ. ಇವರು ಯಾರನ್ನಾದರೂ ಪ್ರೀತಿಸಿದರೆ ಅವರ ಜೀವನ ಪೂರ್ತಿ ಅವರಿಗಾಗಿ ಮುಡುಪಿಟ್ಟು ತುಂಬ ಸಂತೋಷದಿಂದ ನೋಡಿಕೊಳ್ಳುತ್ತಾರೆ.
ಇನ್ನು ಊಟದ ವಿಚಾರದಲ್ಲೂ ಕೂಡ ಯಾವುದೇ ರೀತಿಯ ತೊಂದರೆಯನ್ನು ಮಾಡುವುದಿಲ್ಲ. ರುಚಿ ರುಚಿಯಾಗಿ ಊಟವನ್ನು ಕೂಡ ಮಾಡುತ್ತಾರೆ. ಮತ್ತೊಂದು ವಿಚಾರ ಏನೆಂದರೆ ಕುಳ್ಳಗಿರುವ ಹುಡುಗಿಯರಿಗೆ ಕೋಪ ಜಾಸ್ತಿ ಎಂದು ಹೇಳಲಾಗುತ್ತದೆ. ಆದರೆ ಕೋಪದ ತಕ್ಕಂತೆ ಪ್ರೀತಿ ಕೂಡ ತುಂಬ ಜಾಸ್ತಿ ಇರುತ್ತದೆ. ಇನ್ನೇಕೆ ತಡ ನಿಮಗೆ ಒಳ್ಳೆಯ ಕುಳ್ಳಗಿರುವ ಹುಡುಗಿ ಸಿಕ್ಕರೆ ಹಿಂದೆ ಮುಂದೆ ನೋಡದೆ ಮದುವೆ ಮಾಡಿಕೊಳ್ಳಿ…..