ಈ ಸ್ಟಾರ್ ವಿಲನ್ಸ್ ಗಳ ಹೆಂಡತಿಯರು ಎಷ್ಟು ದೊಡ್ಡ ಸ್ಟಾರ್ ನಟಿಯರು ಗೊತ್ತಾ ?? ಎಲ್ಲರನ್ನೂ ಒಂದೇ ವಿಡಿಯೋದಲ್ಲಿ ನೋಡೋಣ ಬನ್ನಿ !!
ದಕ್ಷಿಣ ಭಾರತದ ಕೆಲ ಖಳನಾಯಕರ ಪತ್ನಿಯರು ಯಾರು ಗೊತ್ತಾ. ಇವರು ಕೂಡ ದೊಡ್ಡ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಅವರು ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..
ಕನ್ನಡದ ಜನಪ್ರಿಯ ನಟ ಅವಿನಾಶ್ ಅವರು ಡಿಸೆಂಬರ್ 27 1959 ರಂದು ಜನಿಸಿದ್ದಾರೆ. ಇವರು 2001 ರಲ್ಲಿ ನಟಿ ಮಾಳವಿಕಾ ಅವಿನಾಶ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಮಾಳವಿಕಾ ಅವರು ಕೂಡ ಕನ್ನಡ ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಖಳನಾಯಕ ರಘುವರನ್ ಅವರು ಡಿಸೆಂಬರ್ 11 1958 ರಂದು ಜನಿಸಿದ್ದರು. ಆದರೆ ಇವರು ಅನಾರೋಗ್ಯ ಸಮಸ್ಯೆಗಳಿಂದ ಮಾರ್ಚ್ 19 2008 ರಂದು ಮರಣ ಹೊಂದಿದರು. ಇವರು ದಕ್ಷಿಣ ಭಾರತದ ಖ್ಯಾತ ನಟಿ ರೋಹಿಣಿ ಅವರನ್ನು ವಿವಾಹ ಮಾಡಿಕೊಂಡಿದ್ದರು. ರೋಹಿಣಿ ಅವರು ಕೂಡ ಸಾಕಷ್ಟು ಭಾಷೆಯ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ನಟ ಮುರಳಿ ಶರ್ಮಾ ಅವರು ಆಗಸ್ಟ್ 9 1972 ರಂದು ಜನಿಸಿದ್ದಾರೆ. ಇವರು ತೆಲುಗು ಹಿಂದಿ ತಮಿಳು ಮರಾಠಿ ಮಲಯಾಳಂ ಭಾಷೆಗಳಲ್ಲಿ ಸೇರಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಅಶ್ವಿನಿ ಕಾಲ್ಶೇಖರ್ ಅವರನ್ನು 2009 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರು ಮರಾಠಿ ಮತ್ತು ಹಿಂದಿ ಧಾರಾವಾಹಿಗಳಲ್ಲಿ ಮತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಟ ಅತುಲ್ ಕುಲಕರ್ಣಿ ಅವರು ಸೆಪ್ಟೆಂಬರ್ 10 1965 ರಂದು ಜನಿಸಿದ್ದಾರೆ. ಇವರು ದಕ್ಷಿಣ ಭಾರತದ ಖ್ಯಾತ ನಟ ಮತ್ತು ಖಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು 1996 ರಲ್ಲಿ ಗೀತಾಂಜಲಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಗೀತಾಂಜಲಿ ಅವರು ಕೂಡ ಮರಾಠಿ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಒಳ್ಳೆಯ ಹೆಸರನ್ನು ಸಾಧಿಸಿಕೊಂಡಿದ್ದಾರೆ.
ನಟ ಬಿಜು ಮೆನನ್ ಅವರು ಸೆಪ್ಟೆಂಬರ್ 19 1970 ರಂದು ಜನಿಸಿದ್ದಾರೆ. ಇವರು 2002 ರಲ್ಲಿ ಸಂಯುಕ್ತಾ ವರ್ಮಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಸಂಯುಕ್ತಾ ವರ್ಮಾ ಅವರು ಮಲಯಾಳಂನ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ನಟ ಅಶುತೋಷ್ ರಾಣಾ ಅವರು ನವೆಂಬರ್ 10 1967 ರಂದು ಜನಿಸಿದ್ದಾರೆ. ಇವರು 2001 ರಲ್ಲಿ ರೇಣುಕಾ ಶಹಾನೆ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಅಶುತೋಷ್ ರಾಣಾ ಅವರ ಪತ್ನಿ ಕೂಡ ಬಾಲಿವುಡ್ ನ ಖ್ಯಾತ ನಟಿ ಆಗಿ ಜನಪ್ರಿಯರಾಗಿದ್ದಾರೆ.
ನಟ ಆಶಿಶ್ ವಿದ್ಯಾರ್ಥಿ ಅವರು ಜೂನ್ 19 1962 ರಂದು ಜನಿಸಿದ್ದಾರೆ. ಇವರು ರಾಜೋಶಿ ವಿದ್ಯಾರ್ಥಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ರಾಜೋಶಿ ಅವರು ಕೂಡ ಖ್ಯಾತ ನಟಿ ಮತ್ತು ಗಾಯಕಿ ಆಗಿ ಗುರುತಿಸಿಕೊಂಡಿದ್ದಾರೆ.
ನಟ ಅಜಯ್ ಅವರು ತೆಲುಗು ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಶ್ವೇತಾ ಎನ್ನುವವರನ್ನು 2006 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ…..