ಕನ್ನಡದ ಮಲ್ಟಿ ಟ್ಯಾಲೆಂಟೆಡ್ ಸ್ಟಾರ್ ನಟಿ ಆಗಿರುವ ಸುಧಾರಾಣಿ ಅವರು ಆಗಸ್ಟ್ 14 1970 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಚೈಲ್ಡ್ ಆರ್ಟಿಸ್ಟ್ ಆಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದು ನಟಿಯಾಗಿ ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಇನ್ನು ಸುಧಾರಾಣಿ ಅವರು ಈಗಲೂ ಸಹ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಾ ಸಾಕಷ್ಟು ಅಭಿಮಾನಿಗಳನ್ನು ತನ್ನ ಕಡೆ ಸೆಳೆದುಕೊಳ್ಳುತ್ತಿದ್ದಾರೆ.
ಇನ್ನೂ ಸುಧಾರಣೆ ಅವರು 1978 ರಂದು ಕಿಲಾಡಿ ಕಿಟ್ಟು ಎನ್ನುವ ಚಿತ್ರದಲ್ಲಿ ಮೊದಲನೆಯದಾಗಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ತದನಂತರ 1986 ರಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ಆನಂದ್ ಚಿತ್ರದ ಮೂಲಕ ಹೀರೋಯಿನ್ ಆಗಿ ತೆರೆಮೇಲೆ ಕಾಣಿಸಿದರು. ಇನ್ನು ಸುಧಾರಾಣಿ ಅವರು ಕೇವಲ ನಟಿ ಮಾತ್ರ ಅಲ್ಲ ಇವರು ಸಾಕಷ್ಟು ನಟಿಯರಿಗೆ ತಮ್ಮ ಕಂಠದಾನವನ್ನು ನೀಡಿದ್ದಾರೆ. ಹೌದು ಸುಧಾರಾಣಿ ಅವರು ಯಾವ ನಟಿಯರಿಗೆ ತಮ್ಮ ಕಂಠ ದಾನವನ್ನು ನೀಡಿದ್ದಾರೆ ಎಂದು ಇಲ್ಲಿ ನೋಡೋಣ.
ಮೀನಾ ಅವರು ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಮೀನಾ ಅವರು ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದು ಇವರು ವಿಷ್ಣುವರ್ಧನ್ ಅವರ ಜೊತೆಗೆ ಅಭಿನಯಿಸಿದ ಸಿಂಹಾದ್ರಿ ಸಿಂಹ ಚಿತ್ರಕ್ಕೆ ಮೀನಾ ಅವರ ಹಿನ್ನೆಲೆ ಧ್ವನಿಯನ್ನು ಸುಧಾರಾಣಿಯವರು ನೀಡಿದ್ದಾರೆ.
ರಮ್ಯಕೃಷ್ಣ ಅವರು ಕೂಡ ಪಂಚಭಾಷಾ ನಟಿಯಾಗಿ ತುಂಬಾನೇ ಜನಪ್ರಿಯರಾಗಿದ್ದಾರೆ. ಇನ್ನೂ ಇವರು ರವಿಚಂದ್ರನ್ ಅವರ ಜೊತೆಗೆ ಅಭಿನಯಿಸಿದ ಮಾಣಿಕ್ಯ ಚಿತ್ರಕ್ಕೆ ರಮ್ಯಾ ಕೃಷ್ಣ ಅವರ ಹಿನ್ನೆಲೆ ಧ್ವನಿಯನ್ನು ಸುಧಾರಾಣಿಯವರು ನೀಡಿದ್ದಾರೆ.
ತೆಲುಗಿನ ಖ್ಯಾತ ನಟಿ ರೋಜಾ ಅವರು ಕೂಡ ಕನ್ನಡದಲ್ಲಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದು ಇವರು ವಿವಿಧ ಬೇರೆ ಭಾಷೆಗಳಲ್ಲೂ ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಕನ್ನಡದಲ್ಲಿ ನಟಿಸಿದ ಪ್ರೇಮೋತ್ಸವ ಮತ್ತು ಮೌರ್ಯ ಚಿತ್ರಗಳಿಗೆ ರೋಜಾ ಅವರ ಹಿನ್ನೆಲೆ ಧ್ವನಿಯನ್ನು ಸುಧಾರಾಣಿಯವರು ನೀಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವು ಎಲ್ಲೆಡೆ ಭರ್ಜರಿಯಾಗಿ ಬಿಡುಗಡೆಯಾಗಿದೆ ಜನಪ್ರಿಯವಾಗಿದೆ. ಇನ್ನು ಕೆಜಿಎಫ್ 2 ರಲ್ಲಿ ರವೀನಾ ಟಂಡನ್ ಅವರು ರಮಿಕಾ ಸೇನ್ ಎನ್ನುವ ಪಾತ್ರದಲ್ಲಿ ಪ್ರೈಮ್ ಮಿನಿಸ್ಟರ್ ಆಗಿ ನಟಿಸಿದ್ದಾರೆ. ಇನ್ನೂ ರವೀನಾ ಟಂಡನ್ ಅವರ ಹಿನ್ನೆಲೆ ಧ್ವನಿಯನ್ನು ಸುಧಾರಾಣಿಯವರು ನೀಡಿದ್ದಾರೆ.
ಸದಾ ಅವರು ನಟಿಸಿದ ಮೊನಾಲಿಸಾ ಎನ್ನುವ ಕನ್ನಡ ಚಿತ್ರದಲ್ಲಿ ಸುಧಾರಾಣಿ ಅವರು ಸದಾ ಅವರ ಹಿನ್ನೆಲೆ ಧ್ವನಿಯಾಗಿ ತಮ್ಮ ಧ್ವನಿಯನ್ನು ನೀಡಿದ್ದಾರೆ…..