Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಈ ಬಾಲನಟ ಯಾರೆಂದು ಗೊತ್ತಾಯ್ತಾ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಗೊತ್ತಾ..!!

0

90ರ ಸಮಯದಲ್ಲಿ ಸಿನಿಮಾಗಳಲ್ಲಿ ಹೆಚ್ಚು ಬಾಲ ನಟರಿಗೆ ಮತ್ತು ನಟಿಯರಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ಈ ಬಾಲ ನಟರಿಂದಲೇ ಸಾಕಷ್ಟು ಸಿನಿಮಾಗಳು ಕೂಡ ತುಂಬ ಯಶಸ್ಸನ್ನು ಸಾಧಿಸಿವೆ. ಇದಕ್ಕೆ ಉದಾಹರಣೆಗೆ ಸಾಕಷ್ಟು ಸಿನಿಮಾಗಳಿವೆ ಎಂದು ಹೇಳಬಹುದು. ಕೇವಲ ಕನ್ನಡ ಮಾತ್ರವಲ್ಲ ತೆಲುಗು ತಮಿಳು ಹಿಂದಿ ಮಲಯಾಳಂ ಎಲ್ಲಾ ಭಾಷೆಗಳಲ್ಲಿ ಕೂಡ ಆಗಿನ ಕಾಲದಲ್ಲಿ ಬಾಲನಟರಿಗೆ ತುಂಬಾ ಪ್ರಾಮುಖ್ಯತೆ ಇತ್ತು.

ಬೇಬಿ ಶಾಮಿಲಿ, ಬೇಬಿ ಶಾಲಿನಿ, ಮಾಸ್ಟರ್ ‍ಆನಂದ್ ಇನ್ನೂ ಸಾಕಷ್ಟು ಬಾಲ ನಟರು ಇದ್ದರು. ಇವರ ಜೊತೆಗೆ ಕನ್ನಡ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಜನಪ್ರಿಯ ಆಗಿದ್ದ ಈ ಬಾಲನಟನ ಬಗ್ಗೆ ತಿಳಿದುಕೊಳ್ಳೋಣ. ಈ ಬಾಲ ನಟ ಕನ್ನಡದಲ್ಲಿ ಅರ್ಜುನ್ ಸರ್ಜಾ ಮತ್ತು ಸೌಂದರ್ಯ ಅವರ ಶ್ರೀಮಂಜುನಾಥ ಚಿತ್ರದಲ್ಲಿ ಅವರ ಮಗನಾಗಿ ಅಭಿನಯಿಸಿದ್ದಾರೆ.

ಈ ಬಾಲನಟ ಬೇರೆ ಯಾರೂ ಅಲ್ಲ ಇವರ ಹೆಸರು ಆನಂದ್ ವರ್ಧನ್ ಎಂದು. ಆನಂದ್ ವರ್ಧನ್ ಅವರು ಕನ್ನಡದಲ್ಲಿ ಶ್ರೀಮಂಜುನಾಥ ಚಿತ್ರದಲ್ಲಿ ನಟಿಸಿ ಯಶಸ್ಸನ್ನು ಸಾಧಿಸಿದರು. ಹಾಗೆಯೇ ತೆಲುಗು ಮತ್ತು ಹಿಂದಿಯಲ್ಲಿ ಸೂರ್ಯವಂಶಂ ಚಿತ್ರದಲ್ಲಿ ನಟಿಸಿ ಬಹಳ ಜನಪ್ರಿಯರಾದರು. ಹೌದು ಆನಂದ್ ವರ್ಧನ್ ಅವರು ಜನಪ್ರಿಯ ಬಾಲನಟರಾಗಿದ್ದು ಇವರು ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

1997 ರಲ್ಲಿ ಆನಂದ್ ವರ್ಧನ್ ಅವರು ಪ್ರಿಯರಾಗಲು ಎನ್ನುವ ಚಿತ್ರದಲ್ಲಿ ಮೊದಲನೆಯದಾಗಿ ಬಾಲನಟರಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಇವರಿಗೆ ಸ್ಟೇಟ್ ಅವಾರ್ಡ್ ಕೂಡ ದೊರಕಿದೆ. ಇನ್ನೂ ಇದಾದ ಮೇಲೆ ಇವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 20 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಕುಟುಂಬ ವಿಷಯಕ್ಕೆ ಬಂದರೆ ಆನಂದ್ ವರ್ಧನ್ ಅವರು ಜನಪ್ರಿಯ ಗಾಯಕ ಪಿ ಬಿ ಶ್ರೀನಿವಾಸ್ ಅವರಿಗೆ ಮೊಮ್ಮೊಗ ಆಗಬೇಕು.

ಇನ್ನು ಆನಂದ್ ವರ್ಧನ್ ಬಾಲನಟರಾಗಿ ಮಿಂಚಿ ತದನಂತರ ವಿದ್ಯಾಭ್ಯಾಸದ ಮೇಲೆ ಹೆಚ್ಚು ಗಮನವನ್ನು ಇಟ್ಟು ಯಾವ ಸಿನಿಮಾಗಳಲ್ಲೂ ಕೂಡ ನಟಿಸಲಿಲ್ಲ. ಪ್ರಸ್ತುತ ಆನಂದ್ ವರ್ಧನ್ ಅವರು ಹೈದ್ರಾಬಾದ್ ನಲ್ಲಿ ನೆಲೆಸಿದ್ದು ತಮ್ಮ ಓದನ್ನು ಮುಗಿಸಿ ಮಾರ್ಷಲ್ ಆರ್ಟ್ಸ್ ಕಲಿತಿದ್ದಾರೆ. ಈಗ ಇವರು ಮತ್ತೆ ಸಿನಿಮಾ ರಂಗಕ್ಕೆ ಬರುವುದಕ್ಕೆ ರೆಡಿಯಾಗಿದ್ದು ಒಂದು ವಿಭಿನ್ನ ಕಥೆಗಾಗಿ ಕಾಯುತ್ತಿದ್ದಾರೆ…..

Leave A Reply