Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಈ ಖ್ಯಾತ ನಟ ನಟಿಯರಿಗೆ ಇರೋ ತೊಂದರೆಗಳ ಬಗ್ಗೆ ಕೇಳಿದ್ರೆ ನೀವು ನಂಬುವುದಿಲ್ಲ, ನಿಜಕ್ಕೂ ಕಣ್ಣೀರು ಬರುತ್ತೆ ಕಣ್ರೀ ಈ ಕಷ್ಟ ಯಾರಿಗೂ ಬೇಡ !!

0

ಅಂಗವಿಕಲತೆ ಎನ್ನುವುದು ಶಾಪವಲ್ಲ ಬಳಿಕ ಆ ಶಾಪವನ್ನು ಮೆಟ್ಟಿನಿಂತು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಹಠ ಛಲ ಇದ್ದರೆ ಯಾವುದೂ ಕೂಡ ಕಷ್ಟ ಎಂದು ಅನಿಸುವುದಿಲ್ಲ. ಇದರಂತೆಯೇ ನಮ್ಮ ದಕ್ಷಿಣ ಭಾರತದ ಕೆಲ ನಟ ನಟಿಯರಿಗೆ ತೊಂದರೆಗಳು ಇದ್ದರೂ ಕೂಡ ಅವುಗಳನ್ನು ಮೆಟ್ಟಿ ನಿಂತು ಈಗ ಇಷ್ಟು ದೊಡ್ಡ ಸ್ಥಾನಕ್ಕೆ ಏರಿದ್ದಾರೆ.

ಹಾಗಾದರೆ ಬನ್ನಿ ಆ ನಟ ನಟಿಯರು ಯಾರು ಮತ್ತೆ ಅವರಿಗೆ ಯಾವ ತೊಂದರೆಗಳು ಇವೆ ಎಂದು ನೋಡೋಣ..ಬಾಹುಬಲಿ ಸಿನಿಮಾದಲ್ಲಿ ನಟಿಸಿರುವ ರಾಣಾ ದಗ್ಗುಬಾಟಿ ಅವರು ಈ ಸಿನಿಮಾದ ಮೂಲಕ ನ್ಯಾಷನಲ್ ಹೀರೋ ಆಗಿ ಗುರುತಿಸಿಕೊಂಡರು.

ಇನ್ನು ಇವರಿಗೆ ಅಂಗವಿಕಲತೆ ಇದೆ ಎಂದರೆ ಯಾರೂ ಕೂಡ ನಂಬುವುದಿಲ್ಲ. ಹೌದು ಇವರೇ ಸ್ವತಃ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇವರಿಗೆ ಸಂಪೂರ್ಣವಾಗಿ ಬಲಗಡೆಯಿರುವ ಕಣ್ಣು ಕಾಣಿಸುವುದಿಲ್ಲ. ಈ ತೊಂದರೆ ಇದ್ದರೂ ಕೂಡ ರಾಣಾ ಅವರು ತುಂಬ ಕಷ್ಟಪಟ್ಟು ಇಷ್ಟರ ಮಟ್ಟಕ್ಕೆ ಬಂದಿದ್ದಾರೆ.

ಸುಧಾ ಚಂದ್ರನ್ ಅವರಿಗೆ ಒಂದು ರಸ್ತೆಯ ಅಪಘಾತದಲ್ಲಿ ಬಲಭಾಗದ ಕಾಲನ್ನು ಕಳೆದುಕೊಂಡರು. ಇವರು ಮತ್ತೊಂದು ಕಾಲನ್ನು ಹಾಕಿಕೊಂಡು ನಟನೆಯನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಸಾಕಷ್ಟು ವೇದಿಕೆಗಳ ಮೇಲೆ ಪ್ರದರ್ಶನಗಳನ್ನು ಸಹ ನೀಡಿದ್ದಾರೆ. ಇದನ್ನು ನೋಡಿದರೆ ಇವರಿಗೆ ಒಂದು ಕಾಲಿಲ್ಲ ಎಂದು ಅನಿಸುವುದೇ ಇಲ್ಲ.

ಟಾಲಿವುಡ್ ಹೀರೋ ನಿತಿನ್ ಅವರಿಗೆ ಮೊದಲು ತೊದಲುವ ತೊಂದರೆ ಇತ್ತು. ಇದಕ್ಕಾಗಿ ಇವರಿಗೆ ಬೇರೆಯವರು ಡಬ್ ಮಾಡುತ್ತಿದ್ದರು. ಆದರೆ ಈಗ ಇವರೇ ಡಬ್ ಮಾಡುತ್ತಾರೆ.

ಅಭಿನಯ ಅವರು ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಹುಡುಗರು ಚಿತ್ರದಲ್ಲಿ ಪುನೀತ್ ಅವರಿಗೆ ತಂಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಕಿವಿ ಕೇಳಿಸುವುದಿಲ್ಲ ಮತ್ತು ಮಾತು ಬರುವುದಿಲ್ಲ. ಹೀಗಿದ್ದರೂ ಕೂಡ ಅಭಿನಯ ಅವರೂ ತುಂಬ ಸೊಗಸಾಗಿ ಅಭಿನಯ ಮಾಡುತ್ತಾರೆ.

ಹಾಸ್ಯನಟ ಆಲಿ ಅವರಿಗೂ ಕೂಡ ಮೊದಲು ತೊದಲುವ ತೊಂದರೆ ಇತ್ತು. ಇದರಿಂದ ಇವರು ಸಾಕಷ್ಟು ಅವಮಾನಗಳನ್ನು ನೋಡಿದ್ದಾರೆ. ಇದಾದ ಮೇಲೆ ಆ ತೊಂದರೆಗಳನ್ನು ಮೆಟ್ಟಿ ನಿಂತು ಇಡೀ ಟಾಲಿವುಡ್ ನಲ್ಲಿ ದೊಡ್ಡ ಹಾಸ್ಯ ನಟ ಎಂದು ಗುರುತಿಸಿಕೊಂಡಿದ್ದಾರೆ.

ರಶ್ಮಿ ಪ್ರಭಾಕರ್ ಅವರು ಬಾಲ್ಯ ವಯಸ್ಸಿನಲ್ಲಿದ್ದಾಗ ತಮ್ಮ ಎಡಗಡೆಯ ಕಣ್ಣಿನ ಒಳಗೆ ಸಣ್ಣ ಬಿದ್ದ ಕಾರಣ ಅದು ಶೇ. 80 ರಷ್ಟು ಕಾಣಿಸುವುದಿಲ್ಲ. ಇದರ ಕಾರಣಕ್ಕಾಗಿ ಇವರ ಎಡಗಣ್ಣು ಸ್ವಲ್ಪ ಚಿಕ್ಕದಾಗಿರುತ್ತದೆ. ಹೀಗಿದ್ದರೂ ಕೂಡ ರಶ್ಮಿ ಪ್ರಭಾಕರ್ ಅವರು ಕಿರುತೆರೆಯಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ…..

Leave A Reply