ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಎಲ್ಲಾ ಹೆಣ್ಣು ಮಕ್ಕಳು ಕೂಡ ಮದುವೆಯಾದ ಮೇಲೆ ಮಂಗಳಸೂತ್ರವನ್ನು ಧರಿಸಿದರೆ ಅದು ಗಂಡನ ಆಯಸ್ಸಿಗೆ ಸಂಕೇತವಾಗಿರುತ್ತದೆ ಎಂದು ಹೇಳಲಾಗಿದೆ. ಆಗಿನ ಕಾಲದಲ್ಲಿ ಮದುವೆಯಾದ ಮಹಿಳೆಯರು ಒಂದು ದಿನ ಕೂಡ ಮಂಗಳಸೂತ್ರವನ್ನು ತೆಗೆಯುತ್ತಿರಲಿಲ್ಲ.
ಇದರ ಜೊತೆಗೆ ನಮ್ಮ ಪೂರ್ವಿಕರು ಅರಿಶಿನ ದಾರ ಮತ್ತು ಅರಿಶಿನ ಕೊಂಬಿನಿಂದ ಮಂಗಳಸೂತ್ರವನ್ನು ತಯಾರಿ ಮಾಡಿ ಹಾಕಿಕೊಳ್ಳುತ್ತಿದ್ದರು. ಆದರೆ ಈಗ ವಜ್ರ ವೈಡೂರ್ಯ ಮುತ್ತು ಚಿನ್ನ ಹೀಗೆ ನಾನಾ ವಿಧಗಳಲ್ಲಿ ಅದ್ಧೂರಿಯಾಗಿರುವ ಮಂಗಳಸೂತ್ರಗಳನ್ನು ಹಾಕಿಕೊಳ್ಳುತ್ತಿದ್ದಾರೆ.
ಆದರೆ ಈಗಿನ ಕಾಲದಲ್ಲಿ ಫ್ಯಾಷನ್ ಎಂಬ ಪದದಿಂದ ಮದುವೆಯಾದರೂ ಕೂಡ ಮಂಗಲಸೂತ್ರ ಮತ್ತು ಕಾಲುಂಗರವನ್ನು ಧರಿಸುವುದಿಲ್ಲ. ಹಾಗಾದರೆ ಬನ್ನಿ ಬಾಲಿವುಡ್ ನ ಕೆಲ ನಟಿಯರ ಬಳಿ ಇರುವ ಮಂಗಳಸೂತ್ರದ ಬೆಲೆಯನ್ನು ನಾವು ಇಲ್ಲಿ ತಿಳಿದುಕೊಳ್ಳೋಣ..
ಭಾರತದ ಬ್ಯೂಟಿ ಕ್ವೀನ್ ಅಭಿಷೇಕ್ ಬಚ್ಚನ್ ಅವರ ಪತ್ನಿ ಮತ್ತು ಅಮಿತಾಭ್ ಬಚ್ಚನ್ ಅವರ ಸೊಸೆಯಾಗಿರುವ ನಟಿ ಐಶ್ವರ್ಯಾ ರೈ ಅವರ ಬಳಿ ಇರುವ ಮಂಗಳಸೂತ್ರದ ಬೆಲೆ ಬರೋಬ್ಬರಿ 45 ಲಕ್ಷ ರೂ. ಗಳು.
ಭಾರತದ ಜನಪ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಅವರ ಮಂಗಳಸೂತ್ರ ಬರೋಬ್ಬರಿ 52 ಲಕ್ಷ ರೂ. ಗಳು.
ಬಾಲಿವುಡ್ ಸುಂದರ ನಟಿ ದೀಪಿಕಾ ಪಡುಕೋಣೆ ಅವರ ಬಳಿ ಇರುವ ಮಂಗಳಸೂತ್ರದ ಬೆಲೆ ಬರೋಬ್ಬರಿ 20 ಲಕ್ಷ ರೂ.ಗಳು. ಇದರಲ್ಲಿ ವಜ್ರ ಕೂಡ ಇದೆ.
ನಿಕ್ ಜಾನಸ್ ಪತ್ನಿ ನಟಿ ಪ್ರಿಯಾಂಕ ಚೊಪ್ರಾ ಅವರ ಬಳಿ ಇರುವ ಮಂಗಳಸೂತ್ರದ ಬೆಲೆ ಸರಿಯಾಗಿ ಗೊತ್ತಿಲ್ಲ. ಇವರ ಮಂಗಳಸೂತ್ರದಲ್ಲಿ ಚಿನ್ನ ಕರಿಮಣಿ ಮತ್ತು ವಜ್ರ ಇದೆ.
ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಅವರು ಧರಿಸಿರುವ ಮಂಗಳಸೂತ್ರದ ಬೆಲೆ ಬರೋಬ್ಬರಿ 30 ಲಕ್ಷ ರೂ. ಗಳು.
ಅಜಯ್ ದೇವ್ ಗನ್ ಅವರನ್ನು ವಿವಾಹವಾಗಿರುವ ಜೂಲಿ ಚಾವ್ಲಾ ಅವರ ಮಂಗಳಸೂತ್ರದ ಬೆಲೆ ಸುಮಾರು 21 ಲಕ್ಷ ರೂ. ಗಳು.
ನಟಿ ಕರೀಷ್ಮಾ ಕಪೂರ್ ಅವರು ಧರಿಸಿರುವ ಮಂಗಳಸೂತ್ರದ ಬೆಲೆ ಸುಮಾರು 17 ಲಕ್ಷ ರೂ. ಗಳು.
ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರು ಧರಿಸಿರುವ ಮಂಗಳಸೂತ್ರದ ಬೆಲೆಯು ಸುಮಾರು 8.5 ಲಕ್ಷ ರೂ. ಗಳು…..