Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಇವರ ನಟನೆ ಎಂದಿಗೂ ಮರೆಯಲು ಸಾಧ್ಯವಿಲ್ಲ ನಟರಷ್ಟೇ ಜನಪ್ರಿಯರಾದ ಪೋಷಕ ನಟರು..!!

0

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿ ನಟರಷ್ಟೇ ಜನಪ್ರಿಯರಾಗಿದ್ದಾರೆ. ಇವರು ಈಗ ಇಲ್ಲದೆ ಇರಬಹುದು ಆದರೆ ಇವರ ನಟನೆ ಎಂದಿಗೂ ಯಾರೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಬನ್ನಿ ಆ ನಟರು ಯಾರೆಂದು ಇಲ್ಲಿ ತಿಳಿದುಕೊಳ್ಳೋಣ..

ನರಸಿಂಹರಾಜು ಅವರು ಆಗಿನ ಕಾಲದಲ್ಲೇ ಹಾಸ್ಯ ನಟರಾಗಿ ಒಳ್ಳೆಯ ಗುರುತನ್ನು ಸಾಧಿಸಿಕೊಂಡಿದ್ದರು. ಇವರು ಸ್ಯಾಂಡಲ್ ವುಡ್ ನ ಚಾರ್ಲಿ ಚಾಪ್ಲಿನ್ ಎಂದೇ ಕರೆಯುತ್ತಿದ್ದರು. ಹಾಗಾಗಿ ಇವರಿಗೆ ಹಾಸ್ಯ ಚಕ್ರವರ್ತಿ ಎನ್ನುವ ಹೆಸರು ಕೂಡ ಬಂದಿತು. ಇವರು ಕನ್ನಡದಲ್ಲಿ ಸುಮಾರು 250 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳ ಮನಸ್ಸಿನಲ್ಲಿ ಹಾಗೇ ಅಚ್ಚೆಯಾಗಿ ಉಳಿದಿದ್ದಾರೆ.

ಬಾಲಕೃಷ್ಣ ಅವರು ಶ್ರೇಷ್ಠ ನಟರು ಎಂದು ಹೇಳಬಹುದು. ಇವರು ವಿವಿಧ ಪಾತ್ರಗಳಿಗೆ ಜೀವ ತುಂಬಿದ ಮಹಾನ್ ನಟ ಆಗಿದ್ದರು. ಇನ್ನು ಇವರಿಗೆ ಹುಟ್ಟಿನಿಂದಲೇ ಕಿವಿ ಕೇಳಿಸುತ್ತಿರಲಿಲ್ಲ ಎಂದರೆ ಎಲ್ಲರೂ ಆಶ್ಚರ್ಯ ಪಡಲೇಬೇಕು. ಇನ್ನು ಇವರು ಕನ್ನಡದಲ್ಲಿ ಸುಮಾರು 500 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಪ್ರಖ್ಯಾತಿಯನ್ನು ಗಳಿಸಿದ್ದರು. ಇನ್ನು ಕನ್ನಡ ಇಂಡಸ್ಟ್ರಿಗೆ ಒಂದು ಸ್ಟುಡಿಯೋ ಬೇಕೆಂದು ಹೇಳಿ ತಮ್ಮ ಬಳಿ ಇರುವ ಇಡೀ ಸಂಪತ್ತನ್ನು ಕೊಟ್ಟು 1965 ರಲ್ಲಿ ಅಭಿಮಾನ್ ಸ್ಟುಡಿಯೋವನ್ನು ಶುರು ಮಾಡಿದರು.

ವಜ್ರಮುನಿ ಅವರು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಖಳ ನಾಯಕರಾಗಿ ಗುರುತಿಸಿಕೊಂಡಿದ್ದರು. ಇವರನ್ನು ಕನ್ನಡ ಇಂಡಸ್ಟ್ರಿಯಲ್ಲಿ ನಟಭಯಂಕರ ಎಂದೇ ಕರೆಯುತ್ತಿದ್ದರು. ಏಕೆಂದರೆ ಇವರು ಮಾಡುವ ವಿಲನ್ ಪಾತ್ರಗಳು ತುಂಬಾ ರಿಯಲ್ ಆಗಿ ಇರುತ್ತಿದ್ದವು. ಅಭಿಮಾನಿಗಳು ಇವರ ನಟನೆಯನ್ನು ನೋಡಿದರೆ ಕುಂತಲ್ಲೇ ಶಾಪ ಹಾಕುತ್ತಿದ್ದರು. ಅಷ್ಟು ಭಯಂಕರವಾಗಿ ವಜ್ರಮುನಿ ಅವರು ತಮ್ಮ ಪಾತ್ರದಲ್ಲಿ ಮಗ್ನರಾಗಿ ನಟನೆ ಮಾಡುತ್ತಿದ್ದರು.

ಧೀರೇಂದ್ರ ಗೋಪಾಲ್ ಅವರು ನಮ್ಮ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಅವರ ಕಂಚಿನ ಕಂಠದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದ ಮೂಲಕ ಇವರು ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿದರು.

ಸುಂದರ್ ಕೃಷ್ಣ ಅವರು ಆಗಿನ ಕಾಲದಲ್ಲೇ ನಟರಂತೆಯೇ ಖಳನಾಯಕರಲ್ಲಿ ತುಂಬಾನೆ ಫೇಮಸ್ ಆಗಿದ್ದರು. ಇವರು ಕೇವಲ ಐವತ್ತೆರಡು ವರ್ಷಗಳ ಕಾಲ ಬದುಕಿದ್ದರೂ ಚಿಕ್ಕ ಸಮಯದಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸಿದ್ದರು. ಇವರು ಕನ್ನಡದಲ್ಲಿ ಸುಮಾರು 150 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಮುಸುರಿ ಕೃಷ್ಣಮೂರ್ತಿ ಅವರು ಹಾಸ್ಯನಟರಲ್ಲಿ ಎತ್ತಿದ ಕೈ ಎಂದು ಹೇಳಬಹುದು. ಇವರ ನಗು ಮತ್ತು ಧ್ವನಿಯನ್ನು ಸಾಕಷ್ಟು ಅಭಿಮಾನಿಗಳು ಇಷ್ಟ ಪಡುತ್ತಿದ್ದರು. ಇವರು ಕನ್ನಡ ಇಂಡಸ್ಟ್ರಿಯಲ್ಲಿ ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿದ್ದಾರೆ.

ದಿನೇಶ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಅಪರೂಪದ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ಹಾಸ್ಯ ನಟನೆಯ ಜೊತೆಗೆ ಖಳನಾಯಕ ಪಾತ್ರದಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ.

ಸುಧೀರ್ ಅವರು ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಪ್ರಖ್ಯಾತ ಖಳ ನಾಯಕರಾಗಿ ಜನಪ್ರಿಯರಾಗಿದ್ದರು. ಇವರು ಸ್ಯಾಂಡಲ್ ವುಡ್ ನಲ್ಲಿ ತಮ್ಮ ನಟನೆಯಿಂದ ಒಳ್ಳೆಯ ಛಾಪನ್ನು ಮೂಡಿಸಿದ್ದರು. ಇವರು ಸುಮಾರು 350 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply