Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಇವರು ವಿಲನ್ಸ್ ಆದ್ರೆ ಇವರ ಹೆಂಡತಿಯರು ಎಷ್ಟು ದೊಡ್ಡ ನಟಿಯರು ಗೊತ್ತಾ..!!

0

ರಘುವರನ್ ಅವರು ದಕ್ಷಿಣ ಭಾರತದ ಖ್ಯಾತ ಖಳ ನಾಯಕರಾಗಿ ಗುರುತಿಸಿಕೊಂಡಿದ್ದರು. ಇವರು ದಕ್ಷಿಣ ಭಾರತದ ಖ್ಯಾತ ನಟಿ ರೋಹಿಣಿ ಅವರನ್ನು ವಿವಾಹ ಮಾಡಿಕೊಂಡಿದ್ದರು. ಆದರೆ ದುರದೃಷ್ಟವಶಾತ್ ರಘುವರನ್ ಅವರು ಈಗ ನಮ್ಮ ಜೊತೆ ಇಲ್ಲ. ಇವರ ಪತ್ನಿ ರೋಹಿಣಿ ಅವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 90 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಖ್ಯಾತ ನಟ ಅವಿನಾಶ್ ಅವರು ಎಲ್ಲರಿಗೂ ಗೊತ್ತೇ ಇರುತ್ತಾರೆ. ಇವರ ಪತ್ನಿ ಮಾಳವಿಕಾ ಅವರು ಕೂಡ ಕನ್ನಡದ ದೊಡ್ಡ ನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಕೆಲ ಟಿವಿ ಶೋಗಳಲ್ಲಿ ಕೂಡ ಕಾಣಿಸಿದ್ದಾರೆ.

ಅತುಲ್ ಕುಲಕರ್ಣಿ ಅವರು ತಮ್ಮದೇ ಆದ ನಟನೆಯಿಂದ ಛಾಪನ್ನು ಮೂಡಿಸಿದ್ದಾರೆ. ಇವರ ಪತ್ನಿ ಗೀತಾಂಜಲಿ ಅವರು ಕೂಡ ನಾನಾ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಒಂದಾನೊಂದು ಕಾಲದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು.

ದಕ್ಷಿಣ ಭಾರತದ ಖ್ಯಾತ ಖಳನಟರಲ್ಲಿ ಆಶಿಷ್ ವಿದ್ಯಾರ್ಥಿ ಅವರು ಕೂಡ ಅಗ್ರ ಸ್ಥಾನದಲ್ಲಿ ಇದ್ದಾರೆ. ಇವರ ಪತ್ನಿ ರಾಜುಶ್ರೀ ವಿದ್ಯಾರ್ಥಿಯವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿ ತಮ್ಮದೇ ಆದ ಗುರುತನ್ನು ಸಾಧಿಸಿಕೊಂಡಿದ್ದಾರೆ.

ಬಿಜು ಮೆನನ್ ಅವರು ಖ್ಯಾತ ಖಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ಪತ್ನಿ ಸಂಯುಕ್ತಾ ವರ್ಮಾ ಅವರು ಕೂಡ ಮಲಯಾಳಂನ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಮತ್ತು ಇವರಿಗೆ ಅತ್ಯುತ್ತಮ ನಟಿಯಾಗಿ ಸಾಕಷ್ಟು ಅವಾರ್ಡ್ ಗಳು ಕೂಡ ಸಿಕ್ಕಿವೆ.

ಮುರಳಿ ಶರ್ಮಾ ಅವರು ದಕ್ಷಿಣ ಭಾರತದ ನಟ ಮತ್ತು ಖಳ ನಟರಲ್ಲಿ ಒಳ್ಳೆಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರ ಪತ್ನಿಯ ಹೆಸರು ಅಶ್ವಿನಿ. ಇವರು ಕೂಡ ಬಾಲಿವುಡ್ ನಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಅಜಯ್ ಅವರು ಟಾಲಿವುಡ್ ನಲ್ಲಿ ಖಳನಾಯಕರಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಸಾಕಷ್ಟು ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿ ತುಂಬನೇ ಜನಪ್ರಿಯರಾಗಿದ್ದಾರೆ. ಇನ್ನೂ ಇವರ ಪತ್ನಿ ಶ್ವೇತಾ ಅವರು ಕೂಡ ಕೆಲ ಚಿತ್ರಗಳಲ್ಲಿ ನಟಿಸಿದ್ದು ವರ್ಲ್ಡ್ ವೈಡ್ ಬ್ಯೂಟಿ ಕಾಂಪಿಟೇಶನ್ನಿನಲ್ಲಿ ಫೈನಲಿಸ್ಟ್ ಆಗಿ ಕೂಡ ಆಯ್ಕೆಯಾಗಿದ್ದರು.

ಆಶಿತೋಷ್ ರಾಣಾ ಅವರು ಬಾಲಿವುಡ್ ನಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಖ್ಯಾತಿ ಖಳನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ಪತ್ನಿಯ ಹೆಸರೂ ರೇಣುಕಾ ಎಂದು. ಇವರು ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಗುರುತನ್ನು ಪಡೆದುಕೊಂಡಿದ್ದಾರೆ…..

Leave A Reply