ಪ್ರೀತಿ ಎನ್ನುವುದು ಯಾರ ಮೇಲೆ ಯಾವಾಗ ಆಗುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಪ್ರೀತಿ ಒಂದು ಸಾರಿ ಬಂದರೆ ಸಾಕು ಅದು ಯಾವ ಜಾತಿ ಮತ ಏನನ್ನು ಕೂಡ ನೋಡುವುದಿಲ್ಲ. ಇದರಂತೆಯೇ ಒಬ್ಬ ಖ್ಯಾತ ನಟನ ಜೀವನದಲ್ಲಿ ಕೂಡ ಪ್ರೀತಿಯ ವಿಷಯದಲ್ಲಿ ಒಂದು ಘಟನೆ ನಡೆದಿದೆ. ಹೌದು ತನ್ನನ್ನು ಇಂಟರ್ವ್ಯೂ ಮಾಡುವುದಕ್ಕೆ ಬಂದ ಹುಡುಗಿಯನ್ನೇ ಈ ನಟ ಮದುವೆ ಮಾಡಿಕೊಂಡಿದ್ದಾರೆ.
ಇವರು ಬೇರೆ ಯಾರೂ ಅಲ್ಲ ಖ್ಯಾತ ನಟ ಮತ್ತು ಖ್ಯಾತ ಸಂಗೀತ ನಿರ್ದೇಶಕರಾದ ವಿಜಯ್ ಆಂಟೋನಿ ಅವರು. ಹೌದು ವಿಜಯ್ ಆಂಟೋನಿ ಅವರು ಜುಲೈ 24 1975 ರಂದು ಜನಿಸಿದ್ದಾರೆ. ಇವರು ತಮಿಳು ಸಿನಿಮಾಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಸಾಕಷ್ಟು ಭಾಷೆಗಳಿಗೆ ಹಾಡುಗಳನ್ನು ಕೂಡ ರಚಿಸಿದ್ದಾರೆ. ಇವರು 2005 ರಲ್ಲಿ ಮ್ಯೂಸಿಕ್ ಕಂಪೋಸರ್ ಆಗಿ ತಮ್ಮ ಕೆರಿಯರ್ ಶುರು ಮಾಡಿದರು.
ಒಂದು ದಿನ ವಿಜಯ್ ಆಂಟನಿ ಅವರನ್ನು ಸನ್ ಟಿವಿ ನಿರೂಪಕಿ ಫಾತಿಮಾ ಅವರು ಕರೆ ಮಾಡಿ ನಿಮ್ಮ ಹಾಡುಗಳು ತುಂಬ ಚನ್ನಾಗಿದೆ ನಾನು ಒಂದು ಬಾರಿ ನಿಮ್ಮ ಇಂಟರ್ವ್ಯೂ ಮಾಡುತ್ತೇನೆ ಎಂದು ಕೇಳಿದರು. ಆಗ ಇದಕ್ಕೆ ವಿಜಯ್ ಆಂಟನಿ ಅವರು ಕೂಡ ಒಪ್ಪಿಕೊಂಡರು. ತದನಂತರ ಫಾತಿಮಾ ಅವರು ನಿಮ್ಮ ಮನೆಯ ಪಕ್ಕದ ರಸ್ತೆಯಲ್ಲೇ ನಮ್ಮ ಮನೆ ಕೂಡ ಇದೆ ಎಂದು ಕೂಡ ಹೇಳಿದರು.
ಹೀಗೆ ಇದಾದ ಮೇಲೆ ಒಂದು ದಿನ ಇವರಿಬ್ಬರು ಆಕಸ್ಮಿಕವಾಗಿ ಭೇಟಿಯಾದರು. ಭೇಟಿಯಾದ ತಕ್ಷಣವೇ ಇವರಿಬ್ಬರ ಮಧ್ಯೆ ಒಂದು ರೀತಿಯ ಪ್ರೀತಿಯ ಭಾವನೆ ಉಂಟಾಯಿತು. ಇದರಿಂದ ಇವರ ಮಧ್ಯೆ ಪ್ರೀತಿ ಬೆಳೆಯಿತು. ವಿಜಯ್ ಆ್ಯಂಟೋನಿ ಅವರು ಮರುದಿನವೇ ಫಾತಿಮಾ ಅವರ ಮನೆಗೆ ಹೋಗಿ ನಿಮ್ಮ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿ ಎಂದು ಕೇಳಿದರು.
ಇದರಂತೆಯೇ ವಿಜಯ್ ಅವರ ಮನೆಯಲ್ಲಿ ಕೂಡಾ ಫಾತಿಮಾ ಅವರನ್ನು ಒಪ್ಪಿಕೊಂಡರು ಮತ್ತು ಫಾತಿಮಾ ಅವರ ಮನೆಯಲ್ಲಿ ಕೂಡ ವಿಜಯ್ ಅವರನ್ನು ಮದುವೆಗೆ ಒಪ್ಪಿಕೊಂಡರು. ಹೀಗೆ ಇವರ ಪ್ರೀತಿ ಶುರುವಾಗಿ ಇವರ ಮದುವೆ 2006 ರಲ್ಲಿ ಆಯಿತು…..