Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಆ ದಿನ ನಟಿ ನಿವೇದಿತಾ ಜೈನ್ ಜೀವನದಲ್ಲಿ ಆಗಿದ್ದೇನು ಗೊತ್ತಾ ?? ಅಂದು ಆ ಜಾಗದಿಂದ ಬಿದ್ದು, ಕೆಳಗಡೆ ಬಿದ್ದಿದೂ ಏಕೆ ಗೊತ್ತೇ ?? ಕೊನೆಗೂ ಬಯಲಾದ ಸತ್ಯ !!

0

ಖ್ಯಾತ ನಟಿ ನಿವೇದಿತಾ ಜೈನ್ ಅವರು ಕನ್ನಡದಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಅವರು ತುಂಬಾನೇ ಜನಪ್ರಿಯ ಆಗಿ ತಮ್ಮ ಛಾಪನ್ನು ಮೂಡಿಸಿದ್ದರು. ಹೌದು ಈ ಮುದ್ದಾದ ಹುಡುಗಿ ಕೇವಲ 19 ವರ್ಷಗಳಿಗೆ ಸಿನಿಮಾಗೆ ಎಂಟ್ರಿಯನ್ನು ಮಾಡಿದರು. ಎಲ್ಲಾ ಕನ್ನಡಿಗರ ಅಭಿಮಾನಿಗಳಲ್ಲಿ ಬಹುಬೇಗ ಮಿಂಚಿನ ತಾರೆಯಾಗಿ ಬಂದು ಅಷ್ಟೆ ವೇಗವಾಗಿ ಎಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಹೌದು ನಿವೇದಿತಾ ಜೈನ್ ಅವರು ಜೂನ್ 9 1979 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು 1994 ರಂದು ಮಿಸ್ ಬ್ಯಾಂಗ್ಳೂರ್ ಎನ್ನುವ ಪಟ್ಟವನ್ನು ಕೂಡ ಸಂಪಾದನೆ ಮಾಡಿಕೊಂಡಿದ್ದರು. ಇವರ ತಂದೆಯ ಹೆಸರು ರಾಜೇಂದ್ರ ಜೈನ್ ಮತ್ತು ತಾಯಿಯ ಹೆಸರು ಗೌರಿ ಪ್ರಿಯ ಎಂದು. ಡಾ ರಾಜ್ ಕುಮಾರ್ ಅವರ ಬ್ಯಾನರ್ ನಲ್ಲಿ 2 ಸಿನಿಮಾಗಳಲ್ಲಿ ನಟಿಸಿದರು.

ಹೌದು ನಿವೇದಿತಾ ಅವರು 1996 ರಂದು ಶಿವರಂಜಿನಿ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಕನ್ನಡ ಸಿನಿ ಇಂಡಸ್ಟ್ರಿಗೆ ಕಾಲಿಟ್ಟರು. ಈ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಶಿವಸೈನ್ಯ, ನೀ ಮುಡಿದ ಮಲ್ಲಿಗೆ, ಬಾಳಿದ ಮನೆ, ಅಮೃತವರ್ಷಿಣಿ, ಪ್ರೇಮರಾಗ ಹಾಡು ಗೆಳತಿ, ಬಾಳಿನ ದಾರಿ, ಸೂತ್ರಧಾರ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದರ ಜೊತೆಗೆ ಒಂದು ತೆಲುಗು ಮತ್ತು ಒಂದು ತಮಿಳು ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇವರ ಮನೆ ಎರಡನೆಯ ಮಹಡಿಯಲ್ಲಿ ಇತ್ತು. ಅದು ಏನಾಯಿತೋ ಗೊತ್ತಿಲ್ಲ ಮೇ 17 1998 ರಂದು ನಿವೇದಿತಾ ಅವರು ರ್ಯಾಂಪ್ ವಾಕ್ ಮಾಡುತ್ತಿದ್ದರು. ಹೀಗೆ ಮಾಡುತ್ತಿರುವಾಗ ಕಾಲುಜಾರಿ ಪೂರ್ತಿ ಕೆಳಗೆ ಬಿದ್ದರು. ಅಂದರೆ ಸುಮಾರು 35 ಅಡಿಗಳ ಎತ್ತರದಿಂದ ಕೆಳಗೆ ಬಿದ್ದರು. ಇದರಿಂದ ಅವರ ತಲೆ ತೀವ್ರವಾಗಿ ಗಾಯಗೊಂಡಿತು.

ಇದರಿಂದ ಅವರ ಮನೆಯವರು ಕೂಡಲೇ ಆಸ್ಪತ್ರೆಗೆ ಸೇರಿಸಿದರು. ಇದಾದ ಮೇಲೆ 24 ದಿನಗಳ ಕಾಲ ಅವರು ಮಲ್ಯ ಆಸ್ಪತ್ರೆಯಲ್ಲಿ ಕೋಮಾದಲ್ಲೇ ಇದ್ದರು. ತದನಂತರ ಜೂನ್ 10 1998 ರಂದು ಮರಣ ಹೊಂದಿದರು. ಮತ್ತೊಂದು ವಿಚಾರ ಏನು ಎಂದರೆ ನಿವೇದಿತಾ ಅವರು ಹುಟ್ಟಿದ್ದು ಜೂನ್ 9. ಅವರ ಹುಟ್ಟು ಹಬ್ಬದ ಮರುದಿನವೇ ನಿವೇದಿತಾ ಅವರು ಸಾವನ್ನಪ್ಪಿದ್ದರು.

ಇವರ ಸಾವನ್ನು ಕೆಲವರು ಅಚಾನಕ ಸಾವು ಎಂದು ಹೇಳುತ್ತಾರೆ. ಮತ್ತೊಬ್ಬರು ಇದರ ಹಿಂದೆ ಯಾರದ್ದೋ ಕೈವಾಡ ಇದೆ ಎಂದು ಹೇಳುತ್ತಾರೆ. ಆದರೆ ಪೊಲೀಸರು ಮಾತ್ರ ಅಸಹಜ ಸಾವು ಎಂದು ದಾಖಲೆ ಮಾಡಿಕೊಂಡಿದ್ದಾರೆ. ಆದರೆ ನಿವೇದಿತಾ ಅವರ ಸಾವಿನ ನಿಜವಾದ ಮಾಹಿತಿ ಇನ್ನೂ ಸರಿಯಾಗಿ ಹೊರ ಬಂದಿಲ್ಲ…..

Leave A Reply