Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಆ ದಿನಗಳು ಚಿತ್ರದ ನಟ ಶರತ್ ಲೋಹಿತಾಶ್ವ ಅವರ ತಂದೆ ಕೂಡ ಫೇಮಸ್ ನಟ!! ಅವರು ಯಾರು ಗೊತ್ತಾ!!

0

ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಖಳ ನಾಯಕರು ಇದ್ದಾರೆ. ಇವರು ನಟರಂತೆಯೇ ಖಳ ನಟನೆಯನ್ನು ಮಾಡಿ ನಟರಂತೆಯೇ ತುಂಬಾನೇ ಫೇಮಸ್ ಆಗಿರುತ್ತಾರೆ. ಅಂತಹವರು ತುಂಬಾ ಜನ ಇದ್ದಾರೆ ಎಂದು ಹೇಳಬಹುದು. ಈಗ ನಾವು ಕನ್ನಡದ ಜನಪ್ರಿಯ ಖಳ ನಟ ಆಗಿರುವ ಶರತ್ ಚಂದ್ರ ಲೋಹಿತಾಶ್ವ ಅವರ ಬಗ್ಗೆ ತಿಳಿಯೋಣ..

ಇವರು ಮೇ 5 1972 ರಂದು ತುಮಕೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಲೋಹಿತಾಶ್ವ ಮತ್ತು ತಾಯಿಯ ಹೆಸರು ವತ್ಸಲಾ. ಇನ್ನೂ ಇವರಿಗೆ ರಾಹುಲ್ ಲೋಹಿತಾಶ್ವ ಮತ್ತು ವಿನಯ ಲೋಹಿತಾಶ್ವ ಎನ್ನುವ ಸಹೋದರ ಮತ್ತು ಸಹೋದರಿ ಇದ್ದಾರೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತಮಿಳು ಮತ್ತು ತೆಲುಗಿನಲ್ಲಿ ಕೂಡ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಶರತ್ ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ಇವರು ಲೆಕ್ಚರರ್ ಆಗಿ ಕೆಲಸ ಮಾಡಿದ್ದರು. ಹೌದು ಶರತ್ ಅವರು ಇಂಗ್ಲಿಷ್ ನಲ್ಲಿ ಮಾಸ್ಟರ್ ಡಿಗ್ರಿಯನ್ನು ಮಾಡಿ ಮುಗಿಸಿದ್ದಾರೆ. ಹೀಗಾಗಿ ಇವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದರು. ತದನಂತರ ಇವರಿಗೆ ನಟನೆಯ ಮೇಲೆ ಆಸಕ್ತಿ ಇದ್ದ ಕಾರಣ ಲೆಕ್ಚರರ್ ಪದವಿಯನ್ನು ತೊರೆದು ಸಿನಿಮಾ ರಂಗಕ್ಕೆ ಕಾಲಿಟ್ಟರು.

ಇನ್ನೂ 1996 ರಲ್ಲಿ ಬಿಡುಗಡೆಯಾದ ಹುಲಿಯ ಚಿತ್ರದ ಮೂಲಕ ಶರತ್ ಅವರು ಬೆಳ್ಳಿತೆರೆಯ ಮೇಲೆ ಕಾಣಿಸಿದರು. ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪೋಲಿಸ್ ಸ್ಟೋರಿ, ಪ್ಯಾರಿಸ್ ಪ್ರಣಯ, ಸುಂಟರಗಾಳಿ, ಆ ದಿನಗಳು, ಅರ್ಚನಾ, ನಂದ, ಪೊರ್ಕಿ, ಮನಸಿನ ಮಾತು, ರಾಜಧಾನಿ, ವಿಷ್ಣು, ಶಕ್ತಿ, ವರದನಾಯಕ, ಬುಲ್ ಬುಲ್, ಕಡ್ಡಿಪುಡಿ, ದಿಲ್ವಾಲಾ, ಪವರ್, ರಂಗನ್ ಸ್ಟೈಲ್, ಸವಾರಿ 2, ಶಿವಂ, ಗಂಗಾ, ಪ್ರೀತಿಯಲ್ಲಿ ಸಹಜ, ಒಡೆಯ ಇನ್ನೂ ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

 

ಅದರಲ್ಲೂ ಇವರ ಖಳ ನಟ ಪಾತ್ರಗಳು ಸಾಕಷ್ಟು ಸಂಖ್ಯೆಯ ಅಭಿಮಾನಿಗಳ ಮನಸ್ಸನ್ನು ದೋಚಿದೆ. ಇನ್ನು ಶರತ್ ಲೋಹಿತಾಶ್ವ ಅವರು ಸುಚಿತ್ರ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಅಂಕುರ್ ಲೋಹಿತಾಶ್ವ ಎನ್ನುವ ಮಗ ಕೂಡ ಇದ್ದಾರೆ…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply