ಆ ಒಂದು ಕಾರಣಕ್ಕೆ ನಟಿ ಸಾಯಿ ಪಲ್ಲವಿ ತುಂಡುಡುಗೆ ಧರಿಸುವುದಿಲ್ಲ ಎಂಬ ದಿಟ್ಟ ನಿರ್ಧಾರಕ್ಕೆ ಬಂದರು. ಇಷ್ಟಕ್ಕೂ ಇವರ ನಿರ್ಧಾರಕ್ಕೆ ಕಾರಣವಾದರೂ ಏನು ? ಇಲ್ಲಿದೆ ನೋಡಿ ಅದರ ಬಗ್ಗೆ ಮಾಹಿತಿ…
ಸಾಯಿ ಪಲ್ಲವಿ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ನಟಿ ಎಂದರೆ ತಪ್ಪಾಗಲಾರದು. ಮೇಕಪ್ ಇಲ್ಲದೆಯೂ ಸಹ ನಾವು ಸುಂದರವಾಗಿ ಕಾಣಬಹುದು ಎಂದು ಎಲ್ಲರಿಗೂ ತಿಳಿಸಿದವರು ಸಾಯಿ ಪಲ್ಲವಿ. ಇಷ್ಟ ಅಲ್ಲದೆ ಮುಖದಲ್ಲಿನ ಮೊಡವೆಯಿಂದಲೇ ಮೊಡವೆ ಸುಂದರಿ ಎಂದು ಕರೆಸಿಕೊಂಡ ನಟಿ ಸಾಯಿ ಪಲ್ಲವಿ. ಇನ್ನು ಹಿಂದೆ ಚಿತ್ರರಂಗದಲ್ಲಿ ಮಾತೊಂದಿತ್ತು ಅದೇನೆಂದರೆ ಚಿತ್ರದಲ್ಲಿ ನಾಯಕಿ ಇರುವುದು ಮೈಮಾಟ ತೋರಿಸಲು ಅಥವಾ ಮರ ಸುತ್ತಲು ಇಷ್ಟೇ ಎಂಬ ಕಾಲವಿತ್ತು.
ಕೆಲ ನಟಿಯರು ತಮ್ಮ ಮೈಮಾಟಕ್ಕೆ ಹೆಸರುವಾಸಿಯಾದರೆ ನಮ್ಮ ಪ್ರತಿಭೆಯ ಮೂಲಕವೇ ಅಭಿಮಾನಿಗಳನ್ನು ಗೆದ್ದವರು ಇದೇ ಸಾಯಿ ಪಲ್ಲವಿ. ತಮ್ಮ ಅಮೋಘ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರು ತಮ್ಮ ಅಭಿಮಾನಿಗಳಿಗೆ ಎಂದೂ ಸಹ ತಪ್ಪು ಮಾಹಿತಿಯನ್ನು ನೀಡಬಾರದೆಂಬ ನಿರ್ಧಾರದಿಂದ ಫೇರ್ ಅಂಡ್ ಲವ್ಲಿ ಜಾಹೀರಾತನ್ನು ಸಹ ನಿರಾಕರಿಸಿದರು.
ಹೌದು ತಮ್ಮನ್ನು ತಾವು ಇರುವಂತೆಯೇ ಪ್ರೀತಿಸಬೇಕು ಹೊರತು ತಾನು ಕಪ್ಪು ತಾನು ಬಿಳುಪು ಎಂಬುದರಲ್ಲಿ ಅಲ್ಲ ಎಂದು ನಂಬಿರುವ ಸಾಯಿ ಪಲ್ಲವಿ ಅವರು ಈ ಜಾಹೀರಾತನ್ನು ನಿರಕಾರಿಸಿ ಜನರಿಗೆ ಮತ್ತಷ್ಟು ಹತ್ತಿರವಾದರು.
ಇನ್ನು ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ಇವರು ತದನಂತರ ಹಲವು ಡ್ಯಾನ್ಸ್ ಶೋಗಳಲ್ಲಿ ಕಾಣಿಸಿಕೊಂಡು ಜನರಿಗೆ ಪರಿಚಯವಾದರು. ಇದಾದ ಬಳಿಕೆ ಚಿತ್ರರಂಗದಲ್ಲಿ ನಾಯಕಿಯಾಗಿ ತಮ್ಮ ಸಿನಿ ಪಯಣ ಆರಂಭಿಸಿದ ಈ ನಟಿಗೆ ದೊಡ್ಡ ಬ್ರೇಕ್ ನೀಡಿದ ಚಿತ್ರ ಪ್ರೇಮಂ. ಹೌದು ಈ ಚಿತ್ರ ಇಂದಿಗೂ ಸಹ ಎಲ್ಲರ ನೆಚ್ಚಿನ ಚಿತ್ರವಾಗಿದೆ. ಇದಾದ ಬಳಿಕ ಚಿತ್ರಗಳ ಆಯ್ಕೆಯನ್ನು ಅಳೆದು ತೂಗಿ ಮಾಡುತ್ತಿದ್ದ ಸಾಯಿ ಪಲ್ಲವಿ ನಿರ್ದೇಶಕರಿಗೆ ಇಡುತ್ತಿದ್ದ ಬೇಡಿಕೆ ಇಷ್ಟೆ ಅದೇನೆಂದರೆ ನನ್ನ ನಟನೆಯನ್ನು ನೋಡಿ ನನಗೆ ಅವಕಾಶವನ್ನು ನೀಡುವುದಾದರೆ ನೀಡಿ ನಾನು ನನ್ನ ದೇಹವನ್ನು ಪ್ರದರ್ಶಿಸುವ ಯಾವ ಪಾತ್ರವನ್ನೂ ಸಹ ಮಾಡಲಾರೆ ಎಂಬುದು.
ನೀವು ನೋಡಿರಬಹುದು ಸಾಯಿ ಪಲ್ಲವಿ ಸಿನಿಮಾದಲ್ಲೇ ಆಗಲಿ ಯಾವುದೇ ಸಮಾರಂಭಕ್ಕೆ ಆಗಮಿಸಿದರೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರೇಮಂ ಸಿನಿಮಾದ ನಂತರ ಹಲವು ಅವಕಾಶಗಳನ್ನು ಪಡೆದ ಸಾಯಿ ಪಲ್ಲವಿ ಅವರು ತಾನೊಬ್ಬ ಪ್ರಬುದ್ಧ ನಟಿ ಎಂದು ಸಾಬೀತುಪಡಿಸಿಕೊಂಡರು. ತೆಲುಗು ತಮಿಳು ಮಲಯಾಳಂ ಗಳಲ್ಲಿ ಅಲ್ಲದೇ ಇದೀಗ ಗಾರ್ಗಿ ಚಿತ್ರದ ಮೂಲಕ ಕನ್ನಡಕ್ಕೂ ಸಹ ಪಾದಾರ್ಪಣ ಮಾಡುತ್ತಿದ್ದಾರೆ.
ಇಷ್ಟೆ ಅಲ್ಲದೆ ಗಾರ್ಗಿ ಚಿತ್ರಕ್ಕಾಗಿ ಸ್ವತಃ ಕನ್ನಡ ಕಲಿತು ಡಬ್ ಮಾಡುತ್ತಿದ್ದಾರೆ ಸಾಯಿ ಪಲ್ಲವಿ. ಶ್ಯಾಮ್ ಸಿಂಗರಾಯ್ ಚಿತ್ರದಲ್ಲಿನ ನಟನೆಗೆ ಇವರಿಗೆ ಎಲ್ಲೆಡೆಯಿಂದ ಮೆಚ್ಚುಗೆಗಳು ಕೇಳಿಬಂದವು. ಇನ್ನು ಸಾಯಿ ಪಲ್ಲವಿ ಏತಕ್ಕಾಗಿ ತುಂಡುಡುಗೆ ಧರಿಸುವುದಿಲ್ಲ ಎಂಬುದಕ್ಕೆ ಕಾರಣವೂ ಸಹ ಇದೆ. ಅದೇನೆಂದರೆ ಸಾಯಿ ಪಲ್ಲವಿ ಅವರ ಪ್ರೇಮಂ ಚಿತ್ರ ಹಿಟ್ ಆದ ಬಳಿಕ ಸಾಯಿ ಪಲ್ಲವಿ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡರು. ಸಾಯಿ ಪಲ್ಲವಿಯವರ ಹಳೇ ವೀಡಿಯೋಗಳನ್ನೂ ಸಹ ಜನ ನೋಡಲು ಶುರು ಮಾಡಿದರು.
ಅದರಂತೆಯೇ ಸಾಯಿ ಪಲ್ಲವಿ ಅವರು ಜಾರ್ಜಿಯಾಕ್ಕೆ ತೆರಳಿ ಅಲ್ಲಿ ಟ್ಯಾಂಗೋ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಆ ಡ್ಯಾನ್ಸ್ ಗಾಗಿ ಸಾಯಿ ಪಲ್ಲವಿ ಅವರು ತುಂಡುಡುಗೆ ಧರಿಸಬೇಕಾಗಿತ್ತು. ಈ ವೀಡಿಯೋ ನೋಡಿದ ಅಭಿಮಾನಿಗಳು ನಿಮ್ಮನ್ನು ನಾವು ಬಹಳ ಗೌರವಿಸುತ್ತೇವೆ ನೀವು ಈ ರೀತಿಯ ಉಡುಪುಗಳನ್ನು ಧರಿಸುವುದಾದರೆ ನಾವು ಇನ್ನು ಮುಂದೆ ನಿಮ್ಮ ಸಿನಿಮಾಗಳನ್ನು ನೋಡುವುದಿಲ್ಲ ಎಂದು ಇಷ್ಟೇ ಅಲ್ಲದೆ ಆ ವೀಡಿಯೋಗೆ ಕೆಟ್ಟ ಕೆಟ್ಟ ಕಮೆಂಟ್ ಗಳೂ ಸಹ ಮಾಡಲಾಗಿತ್ತು.
ಆಗಿನಿಂದಲೇ ಸಾಯಿ ಪಲ್ಲವಿ ನಾನು ಇನ್ನು ಮುಂದೆ ತುಂಡುಡುಗೆ ಧರಿಸುವುದಿಲ್ಲ ಎಂದ ನಿರ್ಧಾರಕ್ಕೆ ಬಂದರು. ಅಭಿಮಾನಿಗಳಿಗಾಗಿ ಈ ನಿರ್ಧಾರಕ್ಕೆ ಬಂದ ಸಾಯಿ ಪಲ್ಲವಿ ಹಾಗೂ ವ್ಯಕ್ತಿತ್ವದ ಮೂಲಕವೇ ಎಲ್ಲರ ಮನಗೆದ್ದಿರುವ ಅವರು ಮತ್ತಷ್ಟು ಎತ್ತರಕ್ಕೆ ಬೇಳೆಯಲಿ ಎಂದು ಆಶಿಸೋಣ….