Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಆದಿಶಕ್ತಿ ಮಹಾಮಾಯಿ ಎಂದು ಹೇಳಿಕೊಂಡಿರೋ ಈ ಶೇಕ್ ಅಮ್ಮನ ಹಿನ್ನೆಲೆ ಬಗ್ಗೆ ಗೊತ್ತಾದರೆ ಶಾಕ್ ಆಗೋದು ಪಕ್ಕಾ !! ಯಾರು ಗೊತ್ತೇ ಇವರು ??

0

ಜನರು ಅದೆಷ್ಟೆ ವಿದ್ಯಾವಂತರಾಗಿದ್ದರೂ, ವೈಜ್ಜಾನಿಕವಾಗಿ, ಶೈಕ್ಷಣಿಕವಾಗಿ ಅದೆಷ್ಟೇ ಮುಂದುವರಿದಿದ್ದರೂ ಈಗಲೂ ಮೋಸ ಹೋಗುವುದು ಮಾತ್ರ ನಿಂತಿಲ್ಲ. ಮೋಸ ಮಾಡುವವರು ಹೆಚ್ಚಾಗ್ತಿದ್ದ ಹಾಗೆ ಮೋಸ ಹೋಗುವವರೂ ಹೆಚ್ಚಾಗ್ತಿದಾರೆ.

ಇತ್ತೀಚೆಗೆ ಕೆಲ ಮೀಡಿಯಾಗಳಲ್ಲಿ ಅಣ್ಣಪೂರ್ಣಿ ಅರಸು ಮಾತೆ ಕುರಿತು ಭಾರೀ ಸುದ್ದಿ ಆಗಿತ್ತು. ಮೈ ಮೇಲೆ ದೇವರು ಬಂದಂತೆ ದೇಹ ಪೂರ್ತಿ ನಡುಗಿಸುತ್ತಾ ಬಂದವರಿಗೆ ಆಶೀರ್ವಾದ ನೀಡುತ್ತಾ ಭಾರೀ ಸುದ್ದಿಯಾಗಿದ್ದ ಅಣ್ಣಪೂರ್ಣಿ ಅರಸು ಕುರಿತಾದ ನಿಜವಾದ ಕಥೆ ಇಲ್ಲಿದೆ. ತಮಿಳುನಾಡಿನಲ್ಲಿ ಹೆಚ್ಚಾಗಿ ವ್ಯಕ್ತಿ ಪೂಜೆ ಮಾಡಲಾಗುತ್ತದೆ. ಅಲ್ಲಿ ದೇವರು ದಿಂಡರು, ಚಮತ್ಕಾರಕ್ಕೆಲ್ಲಾ ಹೆಚ್ಚಾಗಿ ಜನ ತಲೆದೂಗಿ ಅದನ್ನು ನಂಬುತ್ತಾರೆ.

Astro

ಅದೇ ರೀತಿ ಕೆಲ ದಿನಗಳ ಹಿಂದೆ ತಮಿಳುನಾಡಿನ ಚಂಗಲ್ ಪೇಟೆ ಜಿಲ್ಲೆಯ ತಿರುಪವಿಲ್ಲಾ ಕಲ್ಯಾಣ ಮಂಟಪದಲ್ಲಿ ಜರತಾರಿ ಸೀರೆ, ತಲೆ ಪೂರ್ತಿ ಮಲ್ಲಿಗೆ ಹೂವು, ಹಣೆಯಲ್ಲಿ ಕುಂಕುಮ, ಕೈ ಪೂರ್ತಿ ಬಲೆ, ಕೊರಳಲ್ಲಿ ತಾಳಿ ಜೊತೆ ಬಂಗಾರದ ಒಡವೆ ಹಾಕಿಕೊಂಡು ದೊಡ್ಡ ಸಿಂಹಾಸನದ ಮೇಲೆ ಕೂತ ಅಣ್ಣಪೂರ್ಣಿ ಅರಸುಗೆ ಭಕ್ತರು ನಾನಾ ಬಗೆಯ ಹೂವಿನ ಹಾರ ಹಾಕಿ ಅಲಂಕಾರ ಮಾಡಿ ಆರತಿ ಮಾದಿ.

ಪೂಜೆ ಮಾಡುತ್ತಾರೆ. ಕೆಲವರು ಆಕೆಯ ಕಾಲಿಗೆ ಬಿದ್ದು ಅಳುತ್ತಾ ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಕೇಳುತ್ತಾರೆ. ಆಗ ಅಣ್ಣಪೂರ್ಣಿ ಅವರ ದೇಹ ಪೂರ್ತಿ ಕುಣಿದಾಡಿ, ಅಳಲು ಶುರು ಮಾಡಿ ಭಕ್ತರಿಗೆ ಆಶೀರ್ವಾದ ಮಾಡುತ್ತಾರೆ. ಈಕೆಯ ದರ್ಶನ ಪಡೆಯಲು ತಲಾ 2000 ರೂಪಾಯಿ ಕೊಡಬೇಕಿತ್ತು. ಆದರೆ ಈಕೆಯ ನಡವಳಿಕೆ ಬಗ್ಗೆ ಸಂದೇಹ ಬಂದು ಕೆಲ ಮಂದಿ ಗೂಗಲ್ ಸರ್ಚ್ ಮಾಡಿ.

ನೋಡಿದಾಗ, ಆಕೆಯ ಬಣ್ಣ ಬಯಲಾಗುತ್ತದೆ. ಮೂಲತಃ ಕಡೆಗೂಡಿ ಗ್ರಾಮದಲ್ಲಿ ಕಡು ಬಡತನದಲ್ಲಿ ಹುಟ್ಟಿದ್ದ ಅಣ್ಣಪೂರ್ಣಿ 1998 ರಲ್ಲಿ ಶಂಕರ್ ನಾರಾಯಣ್ ಅನ್ನುವವರನ್ನು ಮದುವೆ ಆಗಿ ಎರಡು ಮಕ್ಕಳ ತಾಯಿಯಾಗಿದ್ದಳು. ಆದರೆ ಪಕ್ಕದ ಮನೆಯ ಅರಸು ಅನ್ನುವವನ್ನು ಪ್ರೀತಿಸಿ ಆತನ ಜೊತೆ ಜೀವಿಸಲು ಶುರು ಮಾಡಿದ್ದಳು. ಈ ವಿಷಯ ತಮಿಳಿನ ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿದ್ದ ಸೊಲ್ಲುದೆಲ್ಲಾ ಉನ್ಮಯಿ ಅನ್ನುವ ಕಾರ್ಯಕ್ರಮದಲ್ಲಿಯೂ ಬಂದಿತ್ತು.

ಅದೇನೇ ಮಾಡಿದರೂ ಮೊದಲ ಗಂಡ ಬೇಡ, ಅರಸು ಬೇಕು ಅಂತ ಆ ಕಾರ್ಯಕ್ರಮದಲ್ಲಿ ಪಟ್ಟು ಹಿಡಿದಿದ್ದಳು. ಆ ನಂತರ ಈಕೆ ಈಗಲೇ ಈ ರೂಪದಲ್ಲಿ ಕಾಣಿಸಿಕೊಂಡಿದ್ದು. ಕೆಲ ಮಾಹಿತಿ ಪ್ರಕಾರ ಅರಸು ಕೂಡ 2019 ರಲ್ಲಿ ಸಾವನ್ನಪ್ಪಿದ್ದಾರೆ, ಅದು ಕೂಡ ಅನುಮಾನಸ್ಪದವಾಗಿ ಎಂದು ಹೇಳಲಾಗಿದೆ. ಇದೀಗ ಈಕೆಯ ಸತ್ಯ ಹೊರ ಬಂದು ಮಾಧ್ಯಮಗಳಲ್ಲಿ ವರದಿಯಾಗಿದ್ದೇ ತಡ ಅಣ್ಣಪೂರ್ಣಿ ನಾಪತ್ತೆಯಾಗಿದ್ದಾಳೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave A Reply