ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ನೀವು ಬೆಳಗ್ಗೆ ಎದ್ದು, ಪ್ರಾಣ ಹೋದರೂ ಸರಿ, ಅಪ್ಪಿ ತಪ್ಪಿಯೂ ಈ ಮೂರು ಕೆಲಸಗಳನ್ನು ಮಾಡಲೇ ಬೇಡಿ, ಮನೆಯಲ್ಲಿ ಕಷ್ಟಗಳು ಕಾಡುತ್ತವೆ !!
ಆಚಾರ್ಯ ಚಾಣಕ್ಯರ ಅಂದಕೂಡಲೇ ಅವರು ಹೇಳಿಕೊಟ್ಟ ನೀತಿಗಳು ನೆನಪಾಗುತ್ತದೆ. ಈಗಿನ ಪೀಳಿಗೆಯವರಲ್ಲಿ ಹೆಚ್ಚಿನವರಿಗೆ ಚಾಣಾಕ್ಯರ ಬಗ್ಗೆಯಾಗಲಿ, ಅವರು ಉತ್ತಮ ಜೀವನಕ್ಕೆ ತಿಳಿಸಿಕೊಟ್ಟ ನೀತಿಯ ಬಗೆಗಾಗಲಿ ತಿಳಿದಿರುವುದು ಬಹಳ ಕಡಿಮೆ. ಹಾಗಾಗಿ ನಾವು ಈ ಮೂಲಕ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳಷ್ಟು ಹಿಂದೆ ಇದ್ದ ಚಾಣಾಕ್ಯ ಮೌರ್ಯ ಸಾಮ್ರಾಜ್ಯದ ಸ್ಥಾಪಕ.
ಚಾಣಾಕ್ಯನಿಗೆ ಕೌಟಿಲ್ಯ, ವಿಷ್ಣು ಗುಪ್ತ ಅನ್ನುವ ಹೆಸರು ಕೂಡ ಇದೆ. ಜನರಿಗೆ ಒಳಿತನ್ನು ಮಾಡುವಂತಹ ರಾಜ ತಂತ್ರವನ್ನು ಬಳಸಿಕೊಂಡ ಚಾಣಾಕ್ಯ, ಅರ್ಥಶಾಸ್ತ್ರ ಹಾಗೂ ಚಾಣಕ್ಯ ನೀತಿ ಪುಸ್ತಕಗಳನ್ನು ರಚಿಸಿದ್ದಾನೆ. ತನ್ನ ವಿಶೇಷ ಯೋಚನಾ ಲಹರಿಯಿಂದ ರಚಿಸಿದ ಆ ಪುಸ್ತಕ ಈಗಲೂ ಹೆಸರು ವಾಸಿ. ಜೀವನದಲ್ಲಿ ಯಶಸ್ಸು ಸಿಗಬೇಕು ಅಂದರೆ, ಚಾಣಾಕ್ಯ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು.
ಇದೀಗ ಹೊಸ ವರ್ಷಕ್ಕೆ ಕಾಲಿಡುವ ಸಮಯ. ಅದೆಷ್ಟೋ ಮಂದಿ ಹೊಸ ವರ್ಷದಿಂದ ಹೊಸ ಜೀವನ ಆರಂಭಿಸಬೇಕು, ಜೀವನ ಶೈಲಿ ಬದಲಿಸಿಕೊಳ್ಳಬೇಕು, ಉತ್ತಮ ಜೀವನ ಸಾಗಿಸಬೇಕು ಅಂತೆಲ್ಲಾ ಹೊಸ ಹೊಸ ಸಂಕಲ್ಪಗಳನ್ನು ಮಾಡುತ್ತಾರೆ. ಈ ವರ್ಷ ಆಗಿದ್ದು ಆಯ್ತು, ಮುಂದಿನ ಹೊಸ ವರ್ಷದಿಂದ ಕೆಟ್ಟ ಅಭ್ಯಾಸ ಬಿಡಬೇಕು ಎಂದು ಶಪಥ ಕೂಡ ಮಾಡಿಕೊಳ್ಳುತ್ತಾರೆ. ಅಂಥವರು ಮಾತ್ರ ಅಲ್ಲದೆ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಚಾಣಾಕ್ಯ ನೀತಿಯನ್ನು ನಾವು ಇಲ್ಲಿ ಹೇಳುತ್ತೇವೆ.
ಮುಖ್ಯವಾಗಿ ಮನುಷ್ಯನ ಜೀವನ ಖುಷಿಯಿಂದ ಆರಂಭ ಆಗಬೇಕು ಅಂತಾದರೆ, ಆತ ಬೆಳಗ್ಗೆ ಏದ್ದೇಳುವಾಗ ಮಾಡುವಾಗ ಕೆಲಸ ಕಾರ್ಯಗಳು ತುಂಬಾನೇ ಮುಖ್ಯ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಬೆಳಗ್ಗೆ ಎದ್ದ ಕೂಡಲೇ ಮೂರು ಕೆಲಸಗಳನ್ನು ತಪ್ಪಿಯೂ ಮಾಡಬಾರದು. ಈಗಿನ ಜನರೇಷನ್ ಮೊಬೈಲ್ ಇಲ್ಲದೆ ಒಂದುಕ್ಷಣ ಕೂಡ ಇರುವುದಿಲ್ಲ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಮಲಗಿರುವಾಗಲೇ ಮೊಬೈಲ್ ನೋಡುತ್ತಾರೆ.
ಇನ್ನು ಕೆಲವರು ಟಿವಿ ನೋಡುತ್ತಾರೆ. ಈ ಕೆಲಸ ಮಾಡಿದರೆ ನಕರಾತ್ಮಕ ಶಕ್ತಿಗಳು ಹೆಚ್ಚುತ್ತದೆ. ಇನ್ನು ಎರಡುನೆಯದಾಗಿ ಬೆಡ್ ಟೀ , ಬೆಡ್ ಕಾಫಿ ಅಥವಾ ಹಲ್ಲು ಉಜ್ಜದೆ ಏನೂ ತಿನ್ನಬಾರದು. ಇದರಿಂದ ಆನಾರೋಗ್ಯ ಉಂಟಾಗುತ್ತದೆ. ಮೂರನೆಯದಾಗಿ ಎದ್ದ ಕೂಡಲೇ ನ್ಯೂಸ್ ಪೇಪರ್, ನ್ಯೂಸ್ ಚಾನೆಲ್ ನೋಡಬಾರದು .
ಅದರಲ್ಲಿ ಹೆಚ್ಚಾಗಿ ನೆಗೆಟಿವ್ ಸುದ್ದಿಗಳೇ ಇರುವ ಕಾರಣ ನಿಮ್ಮ ಮೈಂಡ್ ನೆಗೆಟಿವಿ ಯೋಚನೆಯನ್ನೇ ಮಾಡುತ್ತದೆ. ಅದರ ಬದಲು ಎದ್ದು ಕುಳಿತು, ಎರಡೂ ಕೈ ತಿಕ್ಕಿ, ಕಣ್ಣು ಸವರಿ ಅಂಗೈ ನೋಡಬೇಕು. ಆ ನಂತರ ಮುಖ ತೊಳೆದು ದೈನಂದಿನ ಕೆಲಸ ಮಾಡಬಹುದು. ಹೀಗೆ ಮಾಡಿದಲ್ಲಿ ಒಳಿತಾಗುತ್ತದೆ.