ಕನ್ನಡದಲ್ಲಿ ತುಂಬ ಫೇಮಸ್ ಆಗಿರುವ ನಿರೂಪಕರು ಮತ್ತು ನಿರೂಪಕಿಯರು ಇದ್ದಾರೆ. ಅದರಲ್ಲಿ ಆಂಕರ್ ಅನುಶ್ರೀ ಅವರು ಕೂಡ ಒಬ್ಬರು. ಅನುಶ್ರೀ ಅವರು ಸಾಕಷ್ಟು ಕಾರ್ಯಕ್ರಮಗಳನ್ನು ತುಂಬ ಸೊಗಸಾಗಿ ನಿರೂಪಣೆ ಮಾಡುತ್ತಾರೆ. ಇವರ ಮಾತಿನ ಶೈಲಿ ಹಾವಭಾವ ಎಲ್ಲರಿಗೂ ಕೂಡ ತುಂಬಾನೆ ಇಷ್ಟವಾಗುತ್ತದೆ. ನಮ್ಮ ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ನಿರೂಪಕಿಯರಲ್ಲಿ ಅನುಶ್ರೀ ಅವರು ಕೂಡ ಒಬ್ಬರಾಗಿದ್ದಾರೆ.
ಇನ್ನು ಅನುಶ್ರೀ ಅವರು ತಮ್ಮ ಮನೆಯಲ್ಲಿ ಚಿಕನ್ ಫ್ರೈ ಅಡುಗೆಯನ್ನು ಮಾಡಿ ಅದರ ವೀಡಿಯೋವನ್ನು ಅಭಿಮಾನಿಗಳಿಗೋಸ್ಕರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅನುಶ್ರೀ ಅವರು ಎಷ್ಟು ಚೆನ್ನಾಗಿ ಚಿಕನ್ ಮಾಡ್ತಾರೆ ಎಂದು ನೋಡಬಹುದು. ಹಾಗೆಯೇ ಇವರ ತಮ್ಮ ಅಭಿಜಿತ್ ಅವರು ಕೂಡ ಚಿಕನ್ ಕಬಾಬ್ ಮಾಡಿ ಇಬ್ಬರೂ ತಮ್ಮ ತಾಯಿಗೆ ರುಚಿ ಮಾಡುವುದಕ್ಕೆ ಕೊಡುತ್ತಾರೆ.
ಇನ್ನು ಅನುಶ್ರೀ ಅವರು ಜನವರಿ 25 1988 ರಂದು ಸೂರತ್ಕಲ್ ನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಸಂಪತ್ ಮತ್ತು ತಾಯಿಯ ಹೆಸರು ಶಶಿಕಲಾ. ಇನ್ನು ಅನುಶ್ರೀ ಅವರು ಬೆಂಗಳೂರಿನಲ್ಲಿ ಸೈಂಟ್ ಥಾಮಸ್ ಸ್ಕೂಲ್ ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿ ಮುಗಿಸಿದ್ದಾರೆ. ತದನಂತರ ಮಂಗಳೂರಿಗೆ ಹೋಗಿ ಅಲ್ಲಿ ನಾರಾಯಣ ಗುರು ಶಾಲೆಯಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಮುಗಿಸಿಕೊಂಡರು.
ಇದಾದ ಮೇಲೆ ಬೆಂಗಳೂರಿನಲ್ಲಿ ತಮ್ಮ ಪಿಯುಸಿ ಪದವಿಯನ್ನು ಮಾಡಿ ಮುಗಿಸಿದರು. ತದನಂತರ ಇವರಿಗೆ ಸಾಕಷ್ಟು ಟಿ.ವಿ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುವುದಕ್ಕೆ ಅವಕಾಶಗಳು ಬಂದವು. ಇನ್ನು ಇವರು 2005 ರಲ್ಲಿ ನಮ್ಮ ಟಿ.ವಿ ಎನ್ನುವ ವಾಹಿನಿಯಲ್ಲಿ ಟೆಲಿ ಅಂತಾಕ್ಷರಿ ಎನ್ನುವ ಕಾರ್ಯಕ್ರಮಕ್ಕೆ ಮೊದಲನೆಯದಾಗಿ ನಿರೂಪಣೆ ಮಾಡಿದರು. ಇದಾದ ಮೇಲೆ ಇವರು ಲೆಕ್ಕವಿಲ್ಲದೆ ಇರುವ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದಾರೆ.
ಇನ್ನೂ ಬೆಳ್ಳಿ ತೆರೆಗೆ ಬಂದರೆ ಇವರು 2011 ರಲ್ಲಿ ಭೂಮಿತಾಯಿ ಎನ್ನುವ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಇದಾದ ಮೇಲೆ ಮುರಳಿ ಮೀಟ್ಸ್ ಮೀರಾ ಸಿನಿಮಾದಲ್ಲಿ ನಾಯಕಿ ನಟಿಗೆ ಧ್ವನಿಯನ್ನು ನೀಡಿದ್ದಾರೆ. ತದನಂತರ ಬೆಳ್ಳಿಕಿರಣಾ, ಟ್ಯೂಬ್ ಲೈಟ್, ಬೆಂಕಿಪಟ್ಣ, ರಿಂಗ್ ಮಾಸ್ಟರ್, ಉತ್ತಮ ವಿಲನ್, ಮದ ಮತ್ತು ಮಾನಸಿ, ಉಪ್ಪು ಹುಳಿ ಖಾರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ…..